ರಾಜಕೀಯ ಜಂಜಾಟ: ಆಧ್ಯಾತ್ಮಿಕ ಗುರುವಿನ ಮೊರೆ ಹೋದ ಡಿಕೆ ಶಿವಕುಮಾರ್
ತುಮಕೂರು, ಸೆಪ್ಟೆಂಬರ್ 12:ರಾಜಕೀಯ ಸಂಕಷ್ಟ ಎದುರಾದಾಗೆಲ್ಲ ಆಧ್ಯಾತ್ಮದ ಮೊರೆ ಹೋಗುವ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ತುಮಕೂರಿನ ನೊಣವಿನಕೆರೆ ಅಜ್ಜಯ್ಯನಮಠಕ್ಕೆ ತೆರಳಿದ್ದಾರೆ.
ಒಂದೆಡೆ ಐಟಿ ದಾಳಿ, ಮತ್ತೊಂದೆಡೆ ಜಾರಕಿಹೊಳಿ ಸಹೋದರರ ರಾಜಕೀಯ ಭಿನ್ನಾಭಿಪ್ರಾಯದಿಂದ ಜರ್ಜರಿತಗೊಂಡಿರುವ ಅವರು ತಾವು ನಂಬಿದ ದೇವರ ಮೊರೆ ಹೋಗಿದ್ದಾರೆ. ಮೂಲಗಳ ಪ್ರಕಾರ ಬುಧವಾರ ನಸುಕಿನ ಜಾವವೇ ಕುಟುಂಬದ ಆಪ್ತರ ಜತೆ ತೆರಳಿದ್ದಾರೆ.
ಏನೇ ಸಂಕಷ್ಟ ಬಂದರೂ ಸಚಿವ ಡಿಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಭೇಟಿ ನೀಡುತ್ತಾರೆ, ಹಿಂದೊಮ್ಮೆ ಶಿವಕುಮಾರ್ ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿಯಾಗಿ ದಿನಗಟ್ಟಲೆ ಮನೆಯಲ್ಲಿಯೇ ಇರಬೇಕಾಗಿ ಬಂತು, ಆದರೆ ಐಟಿ ಪರಿಶೀಲನೆ ಬಳಿಕವೂ ಮೊದಲ ಅಜ್ಜಯ್ಯನ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.

ಮಠದ ಕರಿ ವೃಷಭ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ, ಆ ಸಮಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆಯೋ ಅಥವಾ ಅತಂತ್ರ ಸ್ಥತಿ ನಿರ್ಮಾಣವಾಗಲಿದೆಯೋ ಎನ್ನುವುದರ ಬಗ್ಗೆ ಸ್ವಾಮೀಜಿ ಬಳಿ ಭವಿಷ್ಯ ಕೇಳಿದ್ದರು.
ಇದೀಗ ಮತ್ತೆ ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿರುವ ಕೆಲವು ಗೊಂದಲಗಳು ಹಾಗೂ ಐಟಿ ವಿಚಾರಣೆ ಕುರಿತ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಉದ್ದೇಶದಿಂದ ಮತ್ತೊಮ್ಮೆ ಅಜ್ಜಯ್ಯನಮಠಕ್ಕೆ ಮೊರೆ ಹೋಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.












Click it and Unblock the Notifications