ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಣಿಗಲ್‌ನಲ್ಲಿ ದೇವಾಲಯ ಸ್ಫೋಟಿಸಿದ ದುಷ್ಕರ್ಮಿಗಳು

|
Google Oneindia Kannada News

ತುಮಕೂರು, ಸೆ.4 : ಕುಣಿಗಲ್ ತಾಲೂಕಿನ ಪಡುವಗೆರೆ ಗ್ರಾಮದ ಶ್ರೀ ಕೊಲ್ಲಾಪುರದಮ್ಮ ದೇವಾಲಯವನ್ನು ದುಷ್ಕರ್ಮಿಗಳು ಸ್ಫೋಟಿಸಿದ್ದಾರೆ. ಸ್ಫೋಟದ ತೀವ್ರತೆಗೆ ಗರ್ಭಗುಡಿಯ ಎಡಭಾಗದಲ್ಲಿನ ಗೋಡೆ ಧ್ವಂಸಗೊಂಡಿದೆ. ಕಳೆದ ಏಳು ವರ್ಷಗಳಿಂದ ಗ್ರಾಮದ ಎರಡು ಗುಂಪುಗಳ ನಡುವೆ ದೇವಾಲಯದ ಕುರಿತಾದ ಜಗಳ ನಡೆಯುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಪಡುವೆಗೆರೆ ಗ್ರಾಮದ ಗ್ರಾಮದೇವತೆಯಾದ ಶ್ರೀ ಕೊಲ್ಲಾಪುರದಮ್ಮ ದೇವಾಲಯವನ್ನು ರಾತ್ರಿ 1.30ರ ಸುಮಾರಿಗೆ ಸ್ಫೋಟಿಸಲಾಗಿದೆ. ಸ್ಫೋಟದ ಸದ್ದು ಕೇಳಿ ಸ್ಥಳೀಯರು ಓಡಿ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

Temple

ಗ್ರಾಮದ ಎರಡು ಗುಂಪುಗಳ ನಡುವೆ ದೇವಾಲಯದ ವಿಚಾರದಲ್ಲಿ ಹಲವಾರು ಬಾರಿ ಜಗಳ ನಡೆದಿದೆ. ಜಾತ್ರೆ, ಹಬ್ಬಗಳ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಅನೇಕರು ಜೈಲು ಸೇರಿದ ಉದಾಹರಣೆಯೂ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಕೊಲ್ಲಾಪುರದಮ್ಮ ದೇವಾಲಯದ ಅರ್ಚಕರೊಬ್ಬರು ನಿಧನ ಹೊಂದಿದ್ದು ಅವರ ಮೃತ ದೇಹವನ್ನು ದೇವಾಲಯದ ಪಕ್ಕದಲ್ಲೇ ಸಮಾಧಿ ಮಾಡಲಾಗಿದೆ. ಇದನ್ನು ಗ್ರಾಮದ ಅನೇಕರು ವಿರೋಧಿಸಿದ್ದು, ಅಂದಿನಿಂದ ಎರಡೂ ಬಣಗಳ ನಡುವೆ ಜಗಳ ನಡೆಯುತ್ತಿತ್ತು. [ಈಡೇನಹಳ್ಳಿ ಗ್ರಾಮಸ್ಥರನ್ನು ಒಂದುಗೂಡಿಸಿದ ಹನುಮಂತ]

ಒಂದು ಬಣದ ಜನರು ಸಮಾಧಿ ಮಾಡಿದ್ದರಿಂದ ದೇವರು ಭಿನ್ನವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಪೂಜೆ ಪುನಸ್ಕಾರ ನಡೆಸದಂತೆ ಒತ್ತಡ ಹಾಕಿದ್ದರು. ಹಬ್ಬದ ವೇಳೆಯಲ್ಲಿ ಈ ಕುರಿತು ಜಗಳವಾಡುತ್ತಿದ್ದರು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ, ದೇವಾಲಯದ ಆಡಳಿತ ಮಂಡಳಿ ಪರವಾಗಿ ತೀರ್ಪು ಬಂದಿತ್ತು. ಜಾತ್ರೆ, ಹಬ್ಬ ನಡೆಸಲು ಜಿಲ್ಲಾಡಳಿತ ಸಹ ಅನುಮತಿ ನೀಡಿತ್ತು.

ಮತ್ತೊಂದು ದೇವಾಲಯ ನಿರ್ಮಾಣ : ಇದರಿಂದ ಕೆರಳಿದ ಮತ್ತೊಂದು ಬಣ ಗ್ರಾಮದಲ್ಲಿ ಮತ್ತೊಂದು ದೇವಾಲಯ ನಿರ್ಮಿಸಿದ್ದರು. ಆ ನಂತರ ಜಗಳ ಹೆಚ್ಚಾಗಿದ್ದು, ಎರಡೂ ಗುಂಪುಗಳ ನಡುವೆ ಆಗಾಗ ಘರ್ಷಣೆ ನಡೆಯುತ್ತಿತ್ತು. ಕಳೆದ ಬಾರಿ ಹಳೇ ದೇವಾಲಯದವರು ಮೆರವಣಿಗೆ ಹೊರಟಿದ್ದಾಗ ವಿರೋಧಿಗಳು ಬೆಂಕಿಗೆ ಮೆಣಸಿನಕಾಯಿ ಪುಡಿ ಹಾಕಿದ್ದರು ಮತ್ತು ವಿಗ್ರಹ ತೆಗೆದುಕೊಂಡು ಹೋಗಿ ಬಾವಿಗೆ ಎಸೆದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ವಿರೋಧಿ ಬಣದ ಸದಸ್ಯರು ಹಳೆ ದೇವಾಲಯವನ್ನು ನೆಲಸಮಗೊಳಿಸಲು ಸ್ಫೋಟ ನಡೆಸಿದ್ದಾರೆ ಎಂದು ಒಂದು ಬಣದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಹುಲಿಯೂರು ದುರ್ಗ ಪಿಎಸ್‍ಐ ಧರ್ಮೇಗೌಡ ಅಮೃತೂರು ಠಾಣಾ ಪಿಎಸ್‍ಐ ರಾಜು ಸಿಬ್ಬಂದಿ ನವೀನ್, ಗಂಗಣ್ಣ ಪರಿಶೀಲನೆ ನಡೆಸಿದ್ದು ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದಾರೆ.

English summary
Low-intensity blast in Kollapuradamma Temple Kunigal, Tumkur district. Temple wall damaged in blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X