ಮಾಜಿ ಸಚಿವ ಚನ್ನಿಗಪ್ಪ ಮಗನ ಮನೆ ಮುಂದೆ ವಾಮಾಚಾರ

ತುಮಕೂರು, ಏಪ್ರಿಲ್ 7 : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಚನ್ನಿಗಪ್ಪ ಅವರ ಮಗ ಡಿ.ಸಿ.ಗೌರಿಶಂಕರ್ ಮನೆ ಮುಂದೆ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ನಾಗರಭಾವಿ ಒಂಬತ್ತನೇ ಹಂತದಲ್ಲಿರುವ ಡಿ.ಸಿ.ಗೌರಿಶಂಕರ್ ಮನೆ ಮುಂದೆ ವಾಮಾಚಾರ ನಡೆದಿದ್ದು, ಇದು ರಾಜಕೀಯ ವಿರೋಧಿಗಳು ಸೋಲಿನ ಭೀತಿಯಿಂದ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮನೆ ಮುಂದೆ ತಟ್ಟೆಯಲ್ಲಿ ಅನ್ನದಲ್ಲಿ ವಾಮಾಚಾರ ಮಾಡಿ, ಆ ಬಳಿಕ ಚಾಕುವಿಗೆ ಸುತ್ತಿ ಕರಪತ್ರ ಸಹ ಇಡಲಾಗಿದೆ. ಆ ಕರಪತ್ರದಲ್ಲಿ, "ನನ್ನ ಸಹವಾಸಕ್ಕೆ ಬರಬೇಡ. ನಿನ್ನ ಕುಟುಂಬವನ್ನು ಬೀದಿಪಾಲು ಮಾಡಿ, ನಿನ್ನ ಮಕ್ಕಳಿಂದ ಭಿಕ್ಷೆ ಎತ್ತಿಸುತ್ತೇನೆ" ಎಂಬ ಎಚ್ಚರಿಕೆ ಒಕ್ಕಣೆಯನ್ನು ಕರಪತ್ರದಲ್ಲಿ ಬರೆಯಲಾಗಿದೆ.

Black magic

ಬೆಂಗಳೂರಿನ ನಾಗರಭಾವಿ ನಿವಾಸದಲ್ಲಿ ಡಿ.ಸಿ.ಗೌರಿಶಂಕರ್ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದಾರೆ. ಈ ಘಟನೆಯಿಂದ ಡಿ.ಸಿ.ಗೌರಿಶಂಕರ್ ಸೇರಿದಂತೆ ಕುಟುಂಬಸ್ಥರು ಗಾಬರಿ ಆಗಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+