'ಸರಕಾರದ ಸಮರ್ಥನೆಗೆ ಮಾಧುಸ್ವಾಮಿ ಬೇಕು, ಉಸ್ತುವಾರಿ ಯಾಕಿಲ್ಲ'
ತುಮಕೂರು, ಫೆ 3: ಮುಖ್ಯಮಂತ್ರಿಗಳು ಯಾರೇ ಇರಲಿ, ಬಿಜೆಪಿ ಸರಕಾರದ ಸಮರ್ಥನೆಗೆ ಠೊಂಕ ಕಟ್ಟಿ ನಿಲ್ಲುವ ರಾಜ್ಯ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡದೇ ಇರುವುದು ಈ ಭಾಗದಲ್ಲಿ ಚರ್ಚೆಯ ವಿಷಯವಾಗಿದೆ.
ಮಾಧುಸ್ವಾಮಿಯವರ ಕಾರ್ಯವೈಖರಿಯ ಬಗ್ಗೆ ಇಲ್ಲಿನ ಬಿಜೆಪಿಯ ಜನಪ್ರತಿನಿಧಿಗಳಲ್ಲಿ ಮಿಶ್ರ ಅಭಿಪ್ರಾಯವಿದ್ದರೂ ಕೂಡಾ, ಸಂಪುಟದಲ್ಲಿ ಪ್ರಭಾವೀ ಸ್ಥಾನದಲ್ಲಿ ಇರುವವರಿಗೆ ಉಸ್ತುವಾರಿ ನೀಡದೇ ಉದ್ದೇಶಪೂರ್ವಕವಾಗಿಯೇ ಅವಮಾನಿಸಲಾಗುತ್ತಿದೆಯಾ ಎನ್ನುವ ಪ್ರಶ್ನೆ, ಸ್ಥಳೀಯ ಬಿಜೆಪಿಗರಲ್ಲಿ ಕಾಡುತ್ತಿದೆ.
ಬಸವರಾಜ ಬೊಮ್ಮಾಯಿ ಸರಕಾರದ ಆಡಳಿತಾತ್ಮಕ ನಿರ್ಧಾರಕ್ಕೆ ಏನೇ ಅಪಸ್ವರ ಎದುರಾದರೂ, ಸಮರ್ಥವಾಗಿ ಮಾತನಾಡುವ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಇಬ್ಬರಿಗೂ ಉಸ್ತುವಾರಿ ನೀಡಲಾಗಿರಲಿಲ್ಲ.
ಈ ವಿಚಾರದಲ್ಲಿ ಇಬ್ಬರೂ ಬೊಮ್ಮಾಯಿ ಸರಕಾರದ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದ್ದರು. ರಾಜ್ಯ ಬಿಜೆಪಿ ವಲಯದಲ್ಲೂ ಬಿಸಿಬಿಸಿ ಚರ್ಚೆಯ ವಿಷಯವಾಗಿತ್ತು. ಈಗ, ಮಾಧುಸ್ವಾಮಿ ಪರ, ತುಮಕೂರು ಬಿಜೆಪಿ ಶಾಸಕರು ಧ್ವನಿ ಎತ್ತಲು ಆರಂಭಿಸಿದ್ದಾರೆ. ಸರಕಾರದ ನಿರ್ಧಾರದಿಂದ ಮುನಿಸಿಕೊಂಡಿರುವ ಮಾಧುಸ್ವಾಮಿ ಬೆಂಗಳೂರಿಗೆ ಬರುವುದನ್ನೇ ಕಮ್ಮಿ ಮಾಡಿದ್ದಾರೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹಾಗೂ ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಅವಾಚ್ಯವಾಗಿ ಗುಸುಗುಸು ಮಾತನಾಡಿರುವ ಆಡಿಯೋ ಬಹಿರಂಗಗೊಂಡಿತ್ತು. ಇದು, ಬಿಜೆಪಿ ಮತ್ತು ಸರಕಾರಕ್ಕೆ ಮುಜುಗರ ತಂದೊಡ್ಡಿತ್ತು. "ನನ್ನನ್ನು ಬೇಕಾದರೆ ಪಕ್ಷದಿಂದ ಹೊರಹಾಕಲಿ, ನಮಗೆ ಅಂತವರ ಬಗ್ಗೆ ಗೊತ್ತೂ ಇಲ್ಲ, ಅನುಭವವವೂ ಇಲ್ಲ. ಆವರು ಆಡಿರುವ ಪಾರ್ಟುಗಳಿದ್ದರೆ ಅವರು ಆಡಿರುತ್ತಾರೆ, ನನಗೆ ಸಂಬಂಧವಿಲ್ಲ"ಎಂದು ಮಾಧುಸ್ವಾಮಿ ಇಬ್ಬರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದು ಮಾಧುಸ್ವಾಮಿ ಬಗ್ಗೆ ಜಿಲ್ಲೆಯ ಕೆಲವು ನಾಯಕರಿಗೆ ಅಸಮಾಧಾನ ಇರುವುದು ಜಾಹೀರು ಪಡಿಸಿತ್ತು.

ಅಧಿವೇಶನದ ವೇಳೆ ಅತ್ಯಂತ ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ಮಾಧುಸ್ವಾಮಿ ವಹಿಸಿದ್ದರು
ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೂ, ಈಗಲೂ ಅಧಿವೇಶನದ ವೇಳೆ ಅತ್ಯಂತ ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ಮಾಧುಸ್ವಾಮಿ ವಹಿಸಿಕೊಂಡು ಬರುತ್ತಿದ್ದಾರೆ. "ಉಸ್ತುವಾರಿ ನೀಡದೇ ಇರುವುದರಿಂದ ಬೇಸರ ಆಗಿಲ್ಲ ಎಂದು ನಾನು ಸುಳ್ಳು ಹೇಳಲಾರೆ"ಎಂದು ಇವರು ಸಾರ್ವಜನಿಕವಾಗಿಯೇ ಸರಕಾರದ ವಿರುದ್ದ ಮಾಧುಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದರು. ಆದರೆ, ಮಾಧುಸ್ವಾಮಿ ಮತ್ತು ಅಶೋಕ್ , ಇವರಿಬ್ಬರಿಗೂ ಮಹತ್ವದ ಜವಾಬ್ದಾರಿ ಬಿಜೆಪಿಯಿಂದ ಸಿಗಲಿದೆ ಎನ್ನುವ ಮಾತೂ ಚಾಲ್ತಿಯಲ್ಲಿದೆ. ಆದರೆ, ಮಾಧುಸ್ವಾಮಿಗೆ ಉಸ್ತುವಾರಿ ನೀಡದೇ ಇರುವುದು ತಪ್ಪು ಎನ್ನುವ ಅಭಿಪ್ರಾಯ ತುಮಕೂರು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ತುರುವೇಕೆರೆ ಶಾಸಕ ಮಸಾಲೆ ಜಯರಾಂ ಅವರಿಂದ ಸರಕಾರಕ್ಕೆ ಆಗ್ರಹ
"ಬೇರೆಯವರಿಗೆ ಉಸ್ತುವಾರಿ ನೀಡುವ ಸಲುವಾಗಿ ಮಾಧುಸ್ವಾಮಿಯವರಿಗೆ ಉಸ್ತುವಾರಿ ತಪ್ಪಿಸಲಾಗಿದೆ. ಬಿಜೆಪಿ ಮುಖಂಡರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಈ ಮೂಲಕ ಮನವಿಯನ್ನು ಮಾಡುತ್ತಿದ್ದೇನೆ, ಅವರನ್ನೇ ಜಿಲ್ಲೆಯ ಉಸ್ತುವಾರಿಯನ್ನಾಗಿ ಮುಂದುವರಿಸಬೇಕು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ ಎಂದಾದರೆ, ಅದಕ್ಕೆ ಮಾಧುಸ್ವಾಮಿಯವರ ಕೊಡುಗೆಯೂ ಇದೆ. ವಿರೋಧ ಪಕ್ಷದವರ ಟೀಕೆಗೆ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ ಅಂದರೆ ಅದು ಮಾಧುಸ್ವಾಮಿ ಮಾತ್ರ"ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಂ ಸರಕಾರವನ್ನು ಆಗ್ರಹಿಸಿದರು.

ಸರಕಾರಕ್ಕೆ ಮಾಧುಸ್ವಾಮಿ ಬೇಕು, ಜಿಲ್ಲಾ ಉಸ್ತುವಾರಿ ಯಾಕೆ ಬೇಡ
"ಎಲ್ಲಾ ವಿಚಾರದಲ್ಲಿ ಸರಕಾರಕ್ಕೆ ಮಾಧುಸ್ವಾಮಿ ಬೇಕು, ಜಿಲ್ಲಾ ಉಸ್ತುವಾರಿ ಯಾಕೆ ಬೇಡ"ಎಂದು ಪ್ರಶ್ನಿಸಿರುವ ಮಸಾಲೆ ಜಯರಾಂ, "ಮಾಧುಸ್ವಾಮಿಯವರ ಅವಶ್ಯಕತೆ ಸರಕಾರಕ್ಕಿದೆ, ಹಾಗಾಗಿ ಮುಖ್ಯಮಂತ್ರಿಗಳಿಗೆ ನಾವು ಪತ್ರವನ್ನು ಬರೆಯುತ್ತಿದ್ದೇವೆ. ಜಿಲ್ಲೆಯ ಎಲ್ಲಾ ಆಗುಹೋಗುಗಳ ಮೇಲೆ ಮಾಧುಸ್ವಾಮಿಯವರಿಗೆ ಹಿಡಿತವಿದೆ. ಅವರು ಇಲ್ಲದಿದ್ದರೆ, ಜಿಲ್ಲೆಗೆ ಒಂದು ತೊಟ್ಟು ನೀರು ಸಿಗುವುದು ಕಷ್ಟವಾಗುತ್ತಿತ್ತು"ಎಂದು ಶಾಸಕರು ಅಭಿಪ್ರಾಯ ಪಟ್ಟರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications