• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಮಠದಲ್ಲಿಯೇ ಕ್ವಾರಂಟೈನ್‌

|

ತುಮಕೂರು, ಜೂನ್ 16: ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧವಾಗಿದ್ದು, ಸಿದ್ಧಗಂಗಾ ಮಠಕ್ಕೆ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗಳಿಂದ ವಾಸಪ್ ಬಂದಿದ್ದಾರೆ. ಮಠಕ್ಕೆ ಮರಳಿದ ಮಕ್ಕಳನ್ನು ಸದ್ಯ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

   ರೈತರ ಪಾಲಿಗೆ ಉತ್ತಮ ಫಸಲನ್ನು ನೀಡಲಿದೆ 2020 | Oneindia Kannada

   ಡಾ ಶಿವಕುಮಾರ ಸ್ವಾಮಿಜಿ ಶತಮಾನೋತ್ಸವ ಭವನದಲ್ಲಿ ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿಗಳು ಬಂದಿದ್ದು, ಕೊರೊನಾ ಸೋಂಕು ಹರಡುತ್ತಿರುವ ಇರುವ ಕಾರಣ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

   ಎಲ್ಲರಲ್ಲೂ ಭಯ ಆತಂಕ: ಮಕ್ಕಳ ಆಟ ಪಾಠದ ಮೇಲೆ ಕೊರೊನಾದ ಮಂತ್ರ ಮಾಟ

   ಉತ್ತರ ಕರ್ನಾಟಕದ ಅನೇಕ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಯಾದಗಿರಿ, ರಾಯಚೂರು, ಬೀದರ್, ಗಂಗಾವತಿ, ಕಲಬುರಗಿ ಜಿಲ್ಲೆಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಆ ಜಿಲ್ಲೆಗಳಿಂದ ಕೂಡ ಬಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.

   400 ಮಕ್ಕಳು ಊರುಗಳಿಂದ ಹಿಂತಿರುಗಿ ಬಂದಿದ್ದು, ಎಲ್ಲ ಮಕ್ಕಳಿಗು ಆರೋಗ್ಯ ತಪಾಸಣೆ ಮಾಡಲಾಗಿದೆ. ಮಕ್ಕಳಿಗೆ ಸ್ಚಚ್ಛವಾಗಿ ಇರುವ ಬಗ್ಗೆ ತಿಳಿ ಹೇಳಲಾಗಿದೆ. ವಿದ್ಯಾರ್ಥಿಗಳನ್ನು ಮಠದ ಭವನದಿಂದ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ.

   ಅಂದಹಾಗೆ, ಕೊರೊನಾ ಭೀತಿಯ ನಡುವೆಯೇ ರಾಜ್ಯ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ. ಇದೇ ತಿಂಗಳು 25 ರಂದು ಪರೀಕ್ಷೆಗಳು ಪ್ರಾರಂಭ ಆಗಲಿವೆ.

   English summary
   400 SSLC students quarantined in Siddaganga mutt Tumakuru. The students came from uttara karnataka districts.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X