ತುಮಕೂರು; ಭೀಕರ ರಸ್ತೆ ಅಪಘಾತ, 12 ಸಾವು

ತುಮಕೂರು, ಮಾರ್ಚ್ 06 : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬ್ಯಾಲದಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ಮೃತಪಟ್ಟವರು ತಮಿಳುನಾಡಿನ ಹೊಸೂರಿನವರು ಎಂದು ತಿಳಿದುಬಂದಿದ್ದು, ಧರ್ಮಸ್ಥಳ ಪ್ರವಾಸವನ್ನು ಮುಗಿಸಿ ವಾಪಸ್ ಆಗುತ್ತಿದ್ದರು.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ 4 ಯುವಕರು ಇದ್ದ ಕಾರು ಬಾಲದಕೆರೆ ಸಮೀಪ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಬಳಿಕ ಎದುರಿಗೆ ಬರುತ್ತಿದ್ದ ಟವೇರಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಟವೇರಾದಲ್ಲಿದ್ದ 9 ಹಾಗೂ ಕಾರಿನಲ್ಲಿದ್ದ 3 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

12 Killed In Road Accident At Kunigal

ಮೃತಪಟ್ಟವರನ್ನು ಸಂದೀಪ್ (36), ಮಧು (26), ಸರಳಾ (32), ರಾಜೇಂದ್ರ (27), ತನುಜಾ (25), ಪ್ರಶನ್ಯಾ (14), ಹರ್ಷಿತಾ (12), ಶ್ವೇತಾ (32) ಎಂದು ಗುರುತಿಸಲಾಗಿದೆ. ಒಂದು ವರ್ಷದ ಹೆಣ್ಣು ಮಗು ಸಹ ಸ್ಥಳದಲ್ಲಿಯೇ ಮೃತಪಟ್ಟಿದೆ.

ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+