Get Updates
Get notified of breaking news, exclusive insights, and must-see stories!

ತುಮಕೂರಿನಲ್ಲಿ ಇಸ್ರೋ ಘಟಕ, 5 ಸಾವಿರ ಉದ್ಯೋಗ ಸೃಷ್ಟಿ

ತುಮಕೂರು, ಜುಲೈ 13 : ತುಮಕೂರಿನಲ್ಲಿರುವ ಎಚ್‌ಎಂಟಿ ಘಟಕದ ಜಾಗವನ್ನು ಇಸ್ರೋಗೆ ಹಸ್ತಾಂತರ ಮಾಡಲಾಗುತ್ತದೆ. ಇಸ್ರೋ ಅಲ್ಲಿ ಘಟಕ ನಿರ್ಮಾಣ ಮಾಡಲಿದ್ದು, ಸುಮಾರು 5000 ಉದ್ಯೋಗ ಸೃಷ್ಟಿಯಾಗಲಿದೆ.

ತುಮಕೂರು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಜುಲೈ 14ರಂದು ನಡೆಯಲಿರುವ ಸಮಾರಂಭದಲ್ಲಿ 109 ಎಕರೆ ಜಾಗವನ್ನು ಇಸ್ರೋಗೆ ಹಸ್ತಾಂತರ ಮಾಡಲಾಗುತ್ತದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಸರ್ಕಾರ 2016ರ ಸೆಪ್ಟೆಂಬರ್‌ನಲ್ಲಿ ತುಮಕೂರಿನ ಹಿಂದೂಸ್ತಾನ್ ಮಿಷನ್ ಟೂಲ್ಸ್ (ಎಚ್ ಎಂಟಿ) ಘಟಕವನ್ನು ನಷ್ಟದ ಕಾರಣದಿಂದಾಗಿ ಮುಚ್ಚಿತ್ತು. 2012-13ರಲ್ಲಿ ಕಂಪನಿ 242 ಕೋಟಿ ನಷ್ಟ ಅನುಭವಿಸಿತ್ತು. ಕೇವಲ 11 ಕೋಟಿ ಲಾಭ ಬಂದಿತ್ತು.

109 acres of HMT land to transferred ti ISRO

ಘಟಕವನ್ನು ಮುಚ್ಚಿದ ಬಳಿಕ ಜಾಗ ಖಾಲಿ ಉಳಿದಿತ್ತು. ಕೇಂದ್ರ ಸರ್ಕಾರ ಸಂಸದರಿಗೆ ಜಾಗವನ್ನು ಸರ್ಕಾರದ ಮತ್ತೊಂದು ಸಂಸ್ಥೆ ಇಸ್ರೋಗೆ ನೀಡುವಂತೆ ಮನವಿ ಮಾಡಿತ್ತು. ಈಗ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಅಧಿಕೃತವಾಗಿ ಜಾಗ ಇಸ್ರೋಗೆ ಹಸ್ತಾಂತರವಾಗಲಿದೆ.

109 ಎಕರೆ ಜಾಗದಲ್ಲಿ ಇಸ್ರೋ ತನ್ನ ಘಟಕವನ್ನು ಆರಂಭಿಸಲಿದೆ. ಈ ಘಟಕ ನಿರ್ಮಾಣದಿಂದ ತುಮಕೂರಿನಲ್ಲಿ ಸುಮಾರು 5000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇಸ್ರೋ ಯಾವ ಘಟಕವನ್ನು ನಿರ್ಮಿಸಲಿದೆ ಎಂದು ಶನಿವಾರ ಘೋಷಣೆ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+