ಶಬರಿಮಲೆಯಿಂದ 'ಕನ್ನಡಿಗ' ಐಪಿಎಸ್ ಅಧಿಕಾರಿ ಯತೀಶ್ ಎತ್ತಂಗಡಿ

ಪಂಬಾ(ಕೇರಳ), ನವೆಂಬರ್ 27: ಶಬರಿಮಲೆ ದೇಗಲದ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸ್ ಪಡೆಯನ್ನು ಕೇರಳ ಸರ್ಕಾರವು ಮಂಗಳವಾರದಿಂದ ಜಾರಿಗೆ ಬರುವಂತೆ ಸಂಪೂರ್ಣ ಬದಲಾಯಿಸಿದೆ.
ಪವಿತ್ರ ಯಾತ್ರಾಸ್ಥಳ ಶಬರಿಮಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದ ಕನ್ನಡಿಗ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆ ಡ್ಯೂಟಿನಿಂದ ಮುಕ್ತಗೊಳಿಸಲಾಗಿದೆ.

ಯತೀಶ್ ಚಂದ್ರ ಅವರ ಜಾಗಕ್ಕೆ ಐಜಿಪಿ ದಿನೇಂದ್ರ ಕಶ್ಯಪ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಸನ್ನಿಧಾನಂ ಹಾಗೂ ಪಾಂಬ ಡ್ಯೂಟಿ ನೋಡಿಕೊಳ್ಳಲಿದ್ದರೆ, ಐಜಿ(ಗುಪ್ತಚರ)ಅಶೋಕ್ ಯಾದವ್ ಅವರು ನೀಲಕಲ್, ವಡಚೆರಿಕರ, ಎರಿಮಲಿ ಪ್ರದೇಶದ ನಿರ್ವಹಣೆ ಮಾಡಲಿದ್ದಾರೆ.

ಸನ್ನಿಧಾನಂನ ಪೊಲೀಸ್ ನಿಯಂತ್ರಕರಾಗಿ ವಯನಾಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕರುಪ್ಪ ಸ್ವಾಮಿ ಹಾಗೂ ಎಸ್ಪಿ (ವಿಚಕ್ಷಣ) ಕೆಇ ಬೈಜು ಅವರು ಕಾರ್ಯ ನಿರ್ವಹಿಸಲಿದ್ದಾರೆ. ಪಂಬಾದಲ್ಲಿ ನಿಯಂತ್ರಕರಾಗಿ ಕಲಿರಾಜ್ ಮಹೇಶ್ ಕುಮಾರ್(ಕೋಯಿಕ್ಕೋಡ್ ಆಯುಕ್ತ) ಹಾಗೂ ಎಂಕೆ ಪುಷ್ಕರನ್ ತಿಸ್ಸೂರ್ ಗ್ರಾಮೀಣ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ನಿಯೋಜಿಸಲಾಗಿದೆ.

Yatish Chandra duty at Sabarimala Ends, New team to take over

ಪ್ರತಿ 15 ದಿನಗಳಿಗೊಮ್ಮೆ ವಿಶೇಷ ಕರ್ತವ್ಯ ನಿರ್ವಹಣೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದ್ದು, ಅದರಂತೆ, ಯತೀಶ್ ಚಂದ್ರ ಹಾಗೂ ತಂಡವನ್ನು ಬದಲಾಯಿಸಲಾಗಿದೆ. ಇತ್ತೀಚೆಗೆ ನಡೆದ ಘಟನಾವಳಿಗಳಿಗೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+