ರಾಷ್ಟ್ರಪತಿಗೆ ಕೊಲೆ ಬೆದರಿಕೆ, ಕೇರಳದ ಅರ್ಚಕನ ಬಂಧನ
ತಿರುವನಂತಪುರ, ಆಗಸ್ಟ್ 06: ರಾಷ್ಟ್ರಪತಿ ರಾಮನಾಥ ಕೊವಿಂದ್ ಅವರನ್ನು ಕೊಲ್ಲುತ್ತೇನೆ ಎಂದು ಪೊಲೀಸರಿಗೇ ಕರೆ ಮಾಡಿ ಬೆದರಿಕೆ ಒಡ್ಡಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದ ವ್ಯಕ್ತಿ ಕೇರಳದ ತ್ರಿಶೂರ್‌ನ ಚಿರಕ್ಕಲ್ ಭಗವತಿ ದೇವಸ್ಥಾನದ ಅರ್ಚಕ ಜಯರಾಮ್ ಎಂದು ತಿಳಿದು ಬಂದಿದ್ದು, ಆತ ಕರೆ ಮಾಡಿದ ಮದ್ಯದ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಸ್ತುತ ಕೇರಳ ರಾಜ್ಯ ಪ್ರವಾಸದಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದಾರೆ. ಸೋಮವಾರ ಅವರು ಸೈಂಟ್ ಥಾಮಸ್ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿದ್ದ ಅರ್ಚಕ ಜಯರಾಮ್, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡುವ ಜೊತೆಗೆ ಸೈಂಟ್ ಥಾಮಸ್ ಕಾಲೇಜಿಗೆ ಬಾಂಬ್ ಹಾಕುವುದಾಗಿಯೂ ಬೆದರಿಕೆ ಹಾಕಿದ್ದ.
ಕರೆ ಆಧರಿಸಿ ಕಾರ್ಯಾಚಾರಣೆ ನಡೆಸಿದ ಕೇರಳ ಪೊಲೀಸರು ಕೆಲವೇ ಹೊತ್ತಿನಲ್ಲಿ ಬೆದರಿಕೆ ಒಡ್ಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.












Click it and Unblock the Notifications