ವಯನಾಡಿನಲ್ಲಿ ಸ್ಮೃತಿ ಇರಾನಿ ಸಮಾವೇಶ ನಾಳೆಗೆ ಮುಂದೂಡಿಕೆ
ತಿರುವನಂತಪುರಂ, ಏ.20: ವಯನಾಡಿನಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಸ್ಮೃತಿ ಇರಾನಿ ಅವರ ಸಮಾವೇಶ ನಾಳೆ(ಏ.21)ಗೆ ಮುಂದೂಡಲಾಗಿದೆ.ವಯನಾಡು ಸ್ಮೃತಿ ಇರಾನಿ ವಯನಾಡಿನಲ್ಲಿ ಎನ್‌ಡಿಎ ಅಭ್ಯರ್ಥಿ ತುಷಾರ್ ವೆಲಪಲ್ಲಿ ಅವರ ಪರವಾಗಿ ಪ್ರಚಾರ ನಡೆಸುವವರಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂದು ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಗಾಂಧಿ ಪರ ಪ್ರಚಾರ ನಡೆಸಲಿದ್ದಾರೆ. ಆದರೆ ಏಕಾಏಕಿ ಸ್ಮೃತಿ ಇರಾನಿ ಪ್ರಚಾರವನ್ನು ಮುಂದೂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತೀವ್ರ ಸ್ಪರ್ಧೆಯೊಡ್ಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಯನಾಡಿನಲ್ಲೂ ರಾಹುಲ್ ವಿರುದ್ಧ ಪ್ರಚಾರಕ್ಕೆ ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಸಮಾವೇಶವನ್ನು ಒಂದು ದಿನ ಮುಂದೂಡಲಾಗಿದೆ.

ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ನಡುವೆ ಅಮೇಥಿಯಲ್ಲಿ ಸ್ಪರ್ಧೆ ತೀವ್ರ ತುರುಸುಗೊಂಡಿದೆ. ಇದೇ ಸೋಲಿನ ಭಯದಿಂದ ರಾಹುಲ್ ವಯನಾಡಿಗೆ ಬಂದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ರಾಹುಲ್ ರಾಹುಲ್ ಇದನ್ನು ನಿರಾಕರಿಸಿದ್ದು ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ನೀಡಲು ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.












Click it and Unblock the Notifications