ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗೆ ವಿಶೇಷ ಕೋರ್ಟ್: ಕೇರಳ ಸಿಎಂ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್‌, 26: ಕೇರಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಗುವುದು ಎಂದು ಮಂಗಳವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ದಕ್ಷಿಣ ರಾಜ್ಯದಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತು ಶಾಸಕ ಕ್ಸೇವಿಯರ್ ಚಿಟ್ಟಿಲಪಿಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ಹೇಳಿಕೆಯನ್ನು ನೀಡಿದ್ದಾರೆ.

ಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆಕೇರಳ ಮಳೆ: ಮೃತರ ಸಂಖ್ಯೆ 26 ಕ್ಕೆ ಏರಿಕೆ, ಪಿಣರಾಯಿ ಜತೆ ಮೋದಿ ಮಾತುಕತೆ

"ಕೇರಳದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡುವ ಬಗ್ಗೆ ಕೇರಳದ ರಾಜ್ಯ ಸರ್ಕಾರವು ಆದ್ಯತೆಯನ್ನು ನೀಡುತ್ತದೆ. ಆದರೆ ಬೇರೆ ಕೋರ್ಟ್‌ಗಳನ್ನು ರಾಜ್ಯದಲ್ಲಿ ಸದ್ಯಕ್ಕೆ ಸ್ಥಾಪನೆ ಮಾಡುವ ಪ್ರಸ್ತಾಪ ಈಗ ಇಲ್ಲ," ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ.

Setting Up Special Courts To Try Crimes Against Women Said Kerala CM

"ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್‌ ಮಾತ್ರವಲ್ಲದೇ ಬಾವಯ ವಡಕ್ಕಂಚೇರಿ ಉಪ ನ್ಯಾಯಾಲಯ ಸ್ಥಾಪನೆ ಬಗ್ಗೆಯೂ ಆದ್ಯತೆ ನೀಡುತ್ತೇವೆ. ಹೊಸ ನ್ಯಾಯಾಲಯಗಳ ಆದ್ಯತೆಯ ಪಟ್ಟಿಯಲ್ಲಿ ವಡಕ್ಕಂಚೇರಿ ಉಪ ನ್ಯಾಯಾಲಯವನ್ನು ಮೂರನೇ ಸ್ಥಾನದಲ್ಲಿ ಇದೆ," ಎಂದು ತಿಳಿಸಿದರು.

"ಪ್ರಸ್ತುತ ಹೊಸ ನ್ಯಾಯಾಲಯ ಸ್ಥಾಪನೆ ಮಾಡುವ ಕುರಿತಾಗಿ ಕೇರಳ ರಾಜ್ಯ ಸರ್ಕಾರವು ಈವರೆಗೆ ಯಾವುದೇ ನಿಧಾರವನ್ನು ಕೈಗೊಂಡಿಲ್ಲ. ಪ್ರಸ್ತುತ ಬೆಳವಣಿಗೆಗಳನ್ನು ನಾವು ಗಮನದಲ್ಲಿ ಇಟ್ಟುಕೊಂಡು ಮಹಿಳೆಯರು ಹಾಗೂ ಮಕ್ಕಳ ವಿರುದ್ಧವಾಗಿ ನಡೆಯುವ ಅಪರಾಧ ಕೃತ್ಯಗಳ ವಿಚಾರಣೆಯನ್ನು ನಡೆಸಲು ಹೊಸ ವಿಶೇಷ ನ್ಯಾಯಾಲಯವನ್ನು ಸ್ಥಾಪನೆ ಮಾಡುವ ಬಗ್ಗೆ ನಾವು ಆದ್ಯತೆಯನ್ನು ನೀಡುತ್ತೇವೆ," ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು. "ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡ ಬಳಿಕ ಹೊಸ ನ್ಯಾಯಾಲಯ ಸ್ಥಾಪನೆಯನ್ನು ಮಾಡಲಾಗುವುದು," ಎಂದು ಕೂಡಾ ಉಲ್ಲೇಖ ಮಾಡಿದರು.

ಕೋವಿಡ್ ಸಾವನ್ನು ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ: UDFಕೋವಿಡ್ ಸಾವನ್ನು ಪಿಣರಾಯಿ ವಿಜಯನ್ ಮರೆ ಮಾಚಿದ್ದಾರೆ: UDF

45,313 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ತಿರುವನಂತಪುರಂನ ಜಿಎಚ್‌ಎಸ್ ವಜಮುತ್ತಂ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗೆ ಲ್ಯಾಪ್‌ಟಾಪ್ ವಿತರಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿದ್ಯಾಕಿರಣಂ ಯೋಜನೆಗೆ ಚಾಲನೆಯನ್ನು ಸೋಮವಾರ ನೀಡಿದ್ದಾರೆ. 45,313 ಎಸ್‌ಸಿ, ಎಸ್‌ಟಿ ಮಕ್ಕಳಿಗೆ ವಿದ್ಯಾಕಿರಣಂ ಯೋಜನೆಯಡಿಯಲ್ಲಿ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಜಾಮುತ್ತಮ್‌ನ ಐದನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ಜಯೇಶ್‌ಗೆ ತಿರುವನಂತಪುರಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮೊದಲ ಲ್ಯಾಪ್‌ಟಾಪ್‌ ಅನ್ನು ವಿತರಣೆ ಮಾಡಿದರು. ಹತ್ತು ಹಾಗೂ ಹನ್ನೆರಡನೇಯ ತರಗತಿಯ ಎಲ್ಲಾ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಮೊದಲ ಹಂತದಲ್ಲಿ ಡಿಜಿಟಲ್ ಸಾಧನಗಳನ್ನು ಪಡೆಯಲಿದ್ದಾರೆ. ಮೊದಲ ಹಂತದಲ್ಲಿ ಹದಿನಾಲ್ಕು ಜಿಲ್ಲೆಗಳ 45,313 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಗುತ್ತದೆ ಎಂದು ಮಾಧ್ಯಮಗಳ ವರದಿಯು ಹೇಳಿದೆ.

"ಆನ್‌ಲೈನ್‌ ಶಿಕ್ಷಣ ವಿಧಾನ ಪ್ರಾರಂಭವಾಗುವ ಮುನ್ನವೇ ಎಲ್ಲಾ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಸಾಧನಗಳ ಲಭ್ಯತೆಯನ್ನು ಖಚಿತಪಡಿಸಿದ ದೇಶದ ಮೊದಲ ರಾಜ್ಯ ಕೇರಳವಾಗಿದೆ. ಈ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸ್ಥಾಪನೆ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಇನ್ನು ಈ ಸಾಧನಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುವ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಶಾಲೆಗಳು ಹಾಗೂ ಪೋಷಕರ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗುತ್ತದೆ ಎಂದು ಮಾಧ್ಯಮಗಳ ವರದಿಯು ಉಲ್ಲೇಖ ಮಾಡಿದೆ. "ಪ್ರತಿ ಲ್ಯಾಪ್‌ಟಾಪ್‌ನ ಬೆಲೆಯು 18,000 ಆಗಿದ್ದು, 81.56 ಕೋಟಿ ರೂಪಾಯಿಗಳ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ನವೆಂಬರ್‌ ತಿಂಗಳಿನ ಒಳಗೆ ವಿತರಿಸುವ ಗುರಿಯನ್ನು ಹೊಂದಲಾಗಿದೆ," ಎಂದು ಕೂಡಾ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

(ಒ‌ನ್‌ಇಂಡಿಯಾ ಸುದ್ದಿ)

English summary
Setting Up Special Courts To Try Crimes Against Women Said Kerala Chief Minister Pinarayi Vijayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X