ಕೇರಳದ ಶಾಲೆಗಳು ಫೆಬ್ರವರಿ 21 ರಿಂದ ಪೂರ್ಣ ಸಮಯದ ತರಗತಿ ಆರಂಭ

ತಿರುವನಂತಪುರಂ ಫೆಬ್ರವರಿ 13: ಕೇರಳದ ಶಾಲೆಗಳು ಫೆಬ್ರವರಿ 21 ರಿಂದ ಪೂರ್ಣ ಸಮಯದ ತರಗತಿಗಳನ್ನು ನಡೆಸಲಿವೆ. ಕೇರಳದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆಯಾಗಿದ್ದು ಸೋಮವಾರದಿಂದ (ಫೆಬ್ರವರಿ 14) 1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ನಿಯಮಿತ ತರಗತಿಗಳನ್ನು ನಡೆಸಲಾಗುವುದು ಆದರೆ ತರಗತಿಗಳು ಮಧ್ಯಾಹ್ನದವರೆಗೆ ಮಾತ್ರ ನಡೆಯಲಿವೆ ಎಂದು ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಹೇಳಿದ್ದಾರೆ. ಫೆ.13ರ ಭಾನುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, 10ರಿಂದ 12ರವರೆಗೆ ಎಂದಿನಂತೆ ತರಗತಿಗಳು ನಡೆಯಲಿವೆ. ಈ ತರಗತಿಗಳು ಸಂಜೆಯವರೆಗೆ ಬ್ಯಾಚ್‌ಗಳಲ್ಲಿ ನಡೆಯುತ್ತಿವೆ ಎಂದಿದ್ದಾರೆ.

''ಫೆಬ್ರವರಿ 21 ರಿಂದ ಪ್ರಾರಂಭವಾಗುವ ತರಗತಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಪೂರ್ಣ ಅವಧಿವರೆಗೂ ನಡೆಯಲಿವೆ. ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗಲು ವ್ಯವಸ್ಥೆ ಮಾಡಬೇಕು. ಆದಾಗ್ಯೂ, ಪೂರ್ವ ಪ್ರಾಥಮಿಕ ತರಗತಿಗಳು ಫೆಬ್ರವರಿ 14 ರಿಂದ ಮಧ್ಯಾಹ್ನದವರೆಗೆ ಮಾತ್ರ ನಡೆಯಲಿದ್ದು, ಶಾಲೆಗಳಲ್ಲಿ ಶೇಕಡಾ 50 ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಇರುತ್ತದೆ" ಎಂದು ಅವರು ಹೇಳಿದರು. ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ಶನಿವಾರಗಳು ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಕೆಲಸದ ದಿನಗಳಾಗಿವೆ ಎಂದು ಸಚಿವರು ಹೇಳಿದರು.

ಸೋಮವಾರ ಶಾಲೆಗಳು ಆರಂಭ; ಮೊಬೈಲ್ ಬಳಕೆ ನಿಷೇಧ
"ವಾರ್ಷಿಕ ಪರೀಕ್ಷೆಗಳನ್ನು ಈ ವರ್ಷ ನಡೆಸಲಾಗುವುದು ಮತ್ತು ಮಾಧ್ಯಮಿಕ ಶಾಲೆ ಬಿಡುವ ಪ್ರಮಾಣಪತ್ರ (ಎಸ್‌ಎಸ್‌ಎಲ್‌ಸಿ), ವೊಕೇಶನಲ್ ಹೈಯರ್ ಸೆಕೆಂಡರಿ ಎಜುಕೇಶನ್ (ವಿಎಚ್‌ಎಸ್‌ಇ) ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ (ಎಚ್‌ಎಸ್‌ಇ) ಮಾದರಿ ಪರೀಕ್ಷೆಗಳು ಮಾರ್ಚ್ 14 ರಿಂದ ನಡೆಯಲಿದೆ. 10 ಮತ್ತು 12 ನೇ ತರಗತಿಗಳಿಗೆ ಪಠ್ಯಕ್ರಮ ಹೇಗಿರಬೇಕು ಎಂದು ಫೆಬ್ರವರಿ ಮೊದಲು ಪೂರ್ಣಗೊಂಡಿದೆ. 1 ರಿಂದ 9 ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು "ಎಂದು ಸಚಿವರು ಹೇಳಿದರು.

Schools in Kerala to Conduct Full-Time Classes From February 21
ಅಲ್ಲದೆ 10 ಮತ್ತು 12ನೇ ತರಗತಿಯ ಎಲ್ಲ ಶಿಕ್ಷಕರು ಪ್ರತಿ ವಿಷಯದಲ್ಲೂ ಪೂರ್ಣಗೊಂಡಿರುವ ಪಾಠಗಳ ವರದಿಯನ್ನು ಒಟ್ಟುಗೂಡಿಸಿ ಅಧ್ಯಯನದಲ್ಲಿ ಹಿಂದುಳಿದವರಿಗಾಗಿ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದರು. ಹಾಜರಾತಿ ಕಡ್ಡಾಯ ಎಂದು ತಿಳಿಸಿದ ಸಚಿವರು, ಶಾಲೆಗೆ ಬಾರದ ಮಕ್ಕಳಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಹಿಜಾಬ್ ವಿವಾದದ ನಡುವೆ ಪ್ರೌಢಶಾಲೆಗಳ ಆರಂಭದ ಬಗ್ಗೆ ಸಿಎಂ ಬೊಮ್ಮಾಯಿ
ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಒತ್ತಡವನ್ನು ನಿವಾರಿಸುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು. "ಡಿಜಿಟಲ್/ಆನ್‌ಲೈನ್ ತರಗತಿಗಳು ಮತ್ತು ಇತರ ಪೋಷಕ ಚಟುವಟಿಕೆಗಳು ಅಗತ್ಯಕ್ಕೆ ಅನುಗುಣವಾಗಿ ಮುಂದುವರಿಯುತ್ತವೆ ಮತ್ತು ಶಿಕ್ಷಕರು ಮಿಶ್ರ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್‌ಸಿಇಆರ್‌ಟಿ) ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ನೆರವು ನೀಡಲಿದೆ ಎಂದು ಅವರು ಹೇಳಿದರು.

ಕೇರಳದಲ್ಲಿ ಶನಿವಾರ 15,184 ಹೊಸ COVID-19 ಪ್ರಕರಣಗಳು ಮತ್ತು 427 ಸಾವುಗಳು ದಾಖಲಾಗಿವೆ.

ಕೇರಳದಲ್ಲಿ ಕೊವಿಡ್ -19 ಪ್ರಕರಣಗಳ ಏರಿಕೆಯಿಂದಾಗಿ 1 ರಿಂದ 9 ನೇ ತರಗತಿಯ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಜನವರಿ 14 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. 1-9 ತರಗತಿಗಳಿಗೆ ಆನ್‌ಲೈನ್ ಶಿಕ್ಷಣವನ್ನು ಪುನಃ ಪರಿಚಯಿಸುವುದರ ಜೊತೆಗೆ, ಸರ್ಕಾರಿ ಸಂಸ್ಥೆಗಳ ಗರ್ಭಿಣಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಸರ್ಕಾರ ಅನುಮೋದಿಸಿತ್ತು. ಅಲ್ಲದೆ, ಎಲ್ಲಾ ಸರ್ಕಾರಿ/ಅರೆಸರ್ಕಾರಿ/ಸಹಕಾರಿ ಸಂಸ್ಥೆಗಳಿಗೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮಗಳನ್ನು ನಡೆಸಲು ತಿಳಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+