ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್‌ ಜೋಡೋ ಯಾತ್ರೆಯಲ್ಲಿ ಸಾವರ್ಕರ್‌ ಫೋಟೋ, ಪ್ರೀಟಿಂಗ್‌ ಮಿಸ್ಟೇಕ್‌ ಎಂದ ಕಾಂಗ್ರೆಸ್‌

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್‌ 21: ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆಯು 14ನೇ ದಿನಕ್ಕೆ ಕಾಲಿಟ್ಟಿದ್ದು, ಯಾತ್ರೆಯು ಕೇರಳದ ಎರ್ನಾಕುಲಂ ಜಿಲ್ಲೆಗೆ ಬರುತ್ತಿದ್ದಂತೆ ಯಾತ್ರಿಗಳನ್ನು ಸ್ವಾಗತಿಸಲು ಹಾಕಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಪೋಟೋಗಳ ಮಧ್ಯೆ ಸಾವರ್ಕರ್‌ ಫೋಟೋ ಹಾಕಿ ಈಗ ಪಕ್ಷದ ಮುಜುಗರ ಉಂಟಾಗಿದೆ. ಇದಕ್ಕೆ ಪಕ್ಷವು ಇದು ಮುದ್ರಣ ದೋಷದಿಂದ ಆದ ಪ್ರಮಾದ ಎಂದು ಹೇಳಿದೆ.

ತಮ್ಮ ಮಹತ್ವಾಕಾಂಕ್ಷೆಯ ಪಾದಯಾತ್ರೆಯಾದ ಭಾರತ್ ಜೋಡೋ ಯಾತ್ರೆಯ 14 ನೇ ದಿನದಂದು ಕಾಂಗ್ರೆಸ್‌ಗೆ ಇದು ಒಂದು ಕಪ್ಪುಚುಕ್ಕೆಯಂತೆ ಕಂಡುಬಂದಿತು. ಅವರ ಯಾತ್ರೆಯು ಕೇರಳದ ಎರ್ನಾಕುಲಂ ಜಿಲ್ಲೆಯನ್ನು ತಲುಪುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರ ಪೋಟೋಗಳ ಮಧ್ಯೆ ಸಾವರ್ಕರ್‌ ಫೋಟೋ ಹಾಕಿರುವುದು ಕಂಡು ಬಂದಿದೆ.

ಭಾರತ್ ಜೋಡೋ ಯಾತ್ರೆ: ಟ್ರಾಫಿಕ್ ಸಮಸ್ಯೆ ಸರಿಪಡಿಸಿ ಎಂದು ಕೇರಳ ಹೈಕೋರ್ಟ್‌ಗೆ ಅರ್ಜಿಭಾರತ್ ಜೋಡೋ ಯಾತ್ರೆ: ಟ್ರಾಫಿಕ್ ಸಮಸ್ಯೆ ಸರಿಪಡಿಸಿ ಎಂದು ಕೇರಳ ಹೈಕೋರ್ಟ್‌ಗೆ ಅರ್ಜಿ

ಯಾತ್ರೆಯ ಪೋಸ್ಟರ್‌ನಲ್ಲಿ ವಿಡಿ ಸಾವರ್ಕರ್ ಫೋಟೋ ಇತರೆ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿರುವ ಫೋಟೋ ಇತ್ತು. ಆದಾಗ್ಯೂ, ಕಾಂಗ್ರೆಸ್ ಸಾವರ್ಕರ್ ಅವರನ್ನು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರ ಎಂದು ಪರಿಗಣಿಸಿಲ್ಲ. ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಕ್ಷಮೆಯಾಚಿಸಿದರು ಎಂದು ಹೇಳಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ.

ಗಾಂಧಿಯವರ ಚಿತ್ರದಿಂದ ಮುಚ್ಚಿದರು

ಗಾಂಧಿಯವರ ಚಿತ್ರದಿಂದ ಮುಚ್ಚಿದರು

ಎಲ್‌ಡಿಎಫ್ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿವಿ ಅನ್ವರ್ ಅವರು ಈ ಬ್ಯಾನರ್‌ ಅನ್ನು ಗಮನಿಸಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾಗಿರುವ ಬೋರ್ಡ್‌ಗಳಲ್ಲಿ ಸಾವರ್ಕರ್ ಅವರ ಫೋಟೋ ಇದೆ ಎಂದು ಅನ್ವರ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ನಂತರ ಕಾರ್ಯಕರ್ತರು ಅದನ್ನು ಮಹಾತ್ಮ ಗಾಂಧಿಯವರ ಚಿತ್ರದಿಂದ ಮುಚ್ಚಿದರು ಎಂದು ಅವರು ಬರೆದಿದ್ದಾರೆ.

ಆ ಪೋಸ್ಟರ್ ಕರ್ನಾಟಕದದ್ದು

ಆ ಪೋಸ್ಟರ್ ಕರ್ನಾಟಕದದ್ದು

ಆಲುವಾದಲ್ಲಿ ಭಾರತ್ ಜೋಡೋ ಯಾತ್ರೆಯ ಪೋಸ್ಟರ್‌ನಲ್ಲಿ ವಿಡಿ ಸಾವರ್ಕರ್ ಅವರ ಫೋಟೋ ಇದೆ ಎಂದು ತಿಳಿಸಿದಾಗ ಮುಸ್ಲಿಂ ಲೀಗ್‌ ಆ ಪೋಸ್ಟರ್ ಕರ್ನಾಟಕದ್ದು. ಅಲ್ಲಿ ಬಿಜೆಪಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೋಸ್ಟರ್ ಅನ್ನು ಅಳವಡಿಸಿತ್ತು. ಆದರೆ ಪೋಸ್ಟರ್ ಕೇರಳದ್ದು, ಕರ್ನಾಟಕದಲ್ಲ. ಮಹಾತ್ಮಾ ಗಾಂಧಿಯವರ ಚಿತ್ರದೊಂದಿಗೆ ಸಾವರ್ಕರ್ ಅವರ ಚಿತ್ರವನ್ನು ಮುಚ್ಚುವ ಮೂಲಕ ಕಾಂಗ್ರೆಸ್ ತನ್ನ ತಪ್ಪನ್ನು ಸರಿಪಡಿಸಿದೆ ಎಂದು ಶಾಸಕರು ಬರೆದಿದ್ದಾರೆ.

ಕ್ಷಮಾದಾನ ಅರ್ಜಿಗೆ ನೆಹರು ಸಹಿ ಹಾಕಿದ್ದರು

ಕ್ಷಮಾದಾನ ಅರ್ಜಿಗೆ ನೆಹರು ಸಹಿ ಹಾಕಿದ್ದರು

ಸಾವರ್ಕರ್ ಅವರನ್ನು ಹೀರೋ ಎಂದು ಪರಿಗಣಿಸುವ ಬಿಜೆಪಿ ಈ ವಿಚಾರ ಸಂಬಂಧ ವೀರ್ ಸಾವರ್ಕರ್ ಅವರ ಚಿತ್ರಗಳು ಎರ್ನಾಕುಲಂನಲ್ಲಿ (ವಿಮಾನ ನಿಲ್ದಾಣದ ಬಳಿ) ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯನ್ನು ಅಲಂಕರಿಸುತ್ತವೆ. ತಡವಾಗಿಯಾದರೂ, ರಾಹುಲ್ ಗಾಂಧಿಯವರಿಗೆ ಒಳ್ಳೆಯ ಅರಿವಾಗಿದ್ದು, ಅವರ ಮುತ್ತಜ್ಜ ನೆಹರು ಅವರು ಕ್ಷಮಾದಾನ ಅರ್ಜಿಗೆ ಸಹಿ ಹಾಕಿದ್ದರು. ಕೇವಲ 2 ವಾರಗಳಲ್ಲಿ ಪಂಜಾಬ್‌ನ ನಭಾ ಜೈಲಿನಿಂದ ಪಲಾಯನ ಮಾಡಲು ಬ್ರಿಟಿಷರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಕ್ರಾಸ್ ಚೆಕ್ ಮಾಡದೆ ಫೋಟೋ ಹಾಕಲಾಗಿದೆ

ಕ್ರಾಸ್ ಚೆಕ್ ಮಾಡದೆ ಫೋಟೋ ಹಾಕಲಾಗಿದೆ

ರಾಹುಲ್ ಜೀ, ನೀವು ಎಷ್ಟೇ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸಿದರೂ ಸತ್ಯ ಹೊರಬರುತ್ತದೆ ಸಾವರ್ಕರ್ ವೀರರೇ ಎಂದು ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ಇದು ಮುದ್ರಣ ತಪ್ಪು ಎಂದು ಹೇಳಿದೆ. ಮುದ್ರಕರಿಗೆ ಸಂಕ್ಷಿಪ್ತವಾಗಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳೊಂದಿಗೆ ಪೋಸ್ಟರ್ ಅನ್ನು ಒಟ್ಟಿಗೆ ಸೇರಿಸಲಾಯಿತು. ಅವರು ಆನ್‌ಲೈನ್‌ಗೆ ಹೋಗಿ ಕ್ರಾಸ್ ಚೆಕ್ ಮಾಡದೆ ಲಭ್ಯವಿರುವ ಪೋಸ್ಟರ್‌ಗಳನ್ನು ಮಾಡಿದ್ದಾರೆ ಎಂದು ಪಕ್ಷ ಹೇಳಿದೆ. ತಪ್ಪನ್ನು ಗಮನಿಸಿದ ನಂತರ, ಸ್ಥಳೀಯ ಕಾರ್ಯಕರ್ತರು ಅದನ್ನು ಮಹಾತ್ಮ ಗಾಂಧಿಯವರ ಫೋಟೋದಿಂದ ಮುಚ್ಚಿದರು ಎಂದು ಪಕ್ಷ ಹೇಳಿದೆ.

English summary
The Bharat Jodo Yatra organized by the Congress has entered its 14th day, and now the party has become embarrassed by putting Savarkar's photo amidst the photos of freedom fighters placed to welcome the pilgrims as the Yatra reaches Ernakulam district in Kerala. To this, the party said it was a typographical error.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X