ಶಬರಿಮಲೆ ಹಿಂಸಾಚಾರ: ಬಿಜೆಪಿಯ 4 ಕಾರ್ಯಕರ್ತರಿಗೆ ಚೂರಿ ಇರಿತ
ತಿರುವನಂತಪುರಂ, ಜನವರಿ 3: ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಇದರಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಮಹಿಳೆಯರ ಶಬರಮಲೆ ಪ್ರವೇಶ ಖಂಡಿಸಿ ಕೇರಳ ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಿಂದ ಕೇರಳಕ್ಕೆ ಹೋಗುವ ಕೆಎಸ್‌ಆರ್‌ರ್ಟಿಸಿ ಬಸ್‌ಗಳು ಕೂಡ ಸ್ಥಗಿತಗೊಂಡಿವೆ.
ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ಎಸ್'ಡಿಪಿಐ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಇದಲ್ಲದೆ, ಪೊಲೀಸರು, ಮಾಧ್ಯಮದ ವರದಿಗಾರರು ಹಾಗೂ ಲೇಖಕರ ಮೇಲೆಯೂ ದಾಳಿಗಲು ನಡೆದಿರುವುದಾಗಿ ವರದಿಗಳು ತಿಳಿಸಿವೆ.

ಮಾಧ್ಯಮ ವರದಿಗಾರರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು, ಆಯಾ ಜಿಲ್ಲಾ ಮುಖ್ಯಸ್ಥರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಪ್ರತಿಭಟನೆ ವೇಳೆ 7 ಪೊಲೀಸ್ ವಾಹನಗಳು ಹಾಗೂ 79 ಕೆಎಸ್ಆರ್'ಟಿಸಿ ಬಸ್ ಗಳನ್ನು ಧ್ವಂಸಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಿರುವನಂತಪುರಂನ ನೆಡುಮಂಗಡುವಿನಲ್ಲಿ ಕೆಲ ದುಷ್ಕರ್ಮಗಿಳು ಬಾಂಬ್ ದಾಳಿಯನ್ನೂ ನಡೆಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ.











Click it and Unblock the Notifications