ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಪ್ಪನ ಸನ್ನಿಧಾನ ರಣಾಂಗಣ, ಮೊದಲ ದಿನ ಸಂಪ್ರದಾಯವಾದಿಗಳ ಮೇಲುಗೈ

|
Google Oneindia Kannada News

ಶಬರಿಮಲೆ, ಅಕ್ಟೋಬರ್ 17: ಪ್ರಸನ್ನ ವಧನ ಅಯ್ಯಪ್ಪ ಸ್ವಾಮಿಯ ಪೂಜ್ಯ ಸ್ಥಳ ಇಂದು ಅಕ್ಷರಷಃ ರಣಾಂಗಣವಾಗಿತ್ತು. ಶಬರಿ ಮಲೆ ಪ್ರವೇಶಿಸಲು ಯತ್ನಿಸಿದ ಮಹಿಳೆಯರ ಮೇಲೆ ಸಂಪ್ರದಾಯವಾದಿಗಳು ಹಲ್ಲೆ ಸಹ ಮಾಡಿದರು.

ಮಹಿಳೆಯರ ಶಬರಿ ಮಲೆ ಪ್ರವೇಶ ವಿರೋಧಿಸುವವರಿಗೆ ಸ್ವಾಮಿ ಖಡಕ್ ಪ್ರಶ್ನೆ ಮಹಿಳೆಯರ ಶಬರಿ ಮಲೆ ಪ್ರವೇಶ ವಿರೋಧಿಸುವವರಿಗೆ ಸ್ವಾಮಿ ಖಡಕ್ ಪ್ರಶ್ನೆ

ಮಹಿಳೆಯರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಬಹುದು ಎಂದು ಸುಪ್ರಿಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಮೇಲೆ ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನ ತೆರೆದಿತ್ತು.

ಶಬರಿಮಲೆ ಸುತ್ತ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ ಶಬರಿಮಲೆ ಸುತ್ತ ನಾಲ್ಕು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ ಡಿಸಿ

ಸುಪ್ರಿಂಕೋರ್ಟ್ ತೀರ್ಪನ್ನು ವಿರೋಧಿಸಿತ್ತಿರುವವರು ಮಹಿಳೆಯರು ಶಬರಿಮಲೆ ಪ್ರವೇಶಿಸಿದಂತೆ ತಡೆಯುವ ಸಲುವಾಗಿ ಭಾರಿ ಸಂಖ್ಯೆಯಲ್ಲಿ ನಿಲಕ್ಕಲ್‌ ಬಳಿ ಸೇರಿದ್ದರು. ಶಬರಿಮಲೆ ಕಡೆ ಹೊರಟ ಎಲ್ಲ ಕಾರುಗಳನ್ನು ತಪಾಸಣೆ ನಡೆಸಿ ಮಹಿಳೆಯರಿದ್ದ ಕಾರುಗಳನ್ನು ವಾಪಸ್ ಕಳಿಸುವ ಕಾರ್ಯ ಸಹ ಮಾಡಿದರು.

Sabarimala temple protest women entry Kerala

ಶಬರಿ ಮಲೆ ದೇವಸ್ಥಾನಕ್ಕೆ ಪ್ರವೇಶಿಸುವ ಯತ್ನ ಮಾಡಿದ ಪತ್ರಕರ್ತೆಯರ ಮೇಲೆ ಬಲಪಂಥೀಯ ಸಂಘಟನೆ ಸದಸ್ಯರು ಹಲ್ಲೆ ಸಹ ನಡೆಸಿದರು. ಮಹಿಳೆಯರು ಸಹ ಮಹಿಳೆಯರು ಶಬರಿ ಮಲೆ ಪ್ರವೇಶಿಸುವುದನ್ನು ವಿರೋಧಿಸಿ ಪ್ರತಿಭಟನೆ ಮಾಡಿದರು.

ಶಬರಿಮಲೆಗೆ ಹೊರಟ ಮಹಿಳೆಯರನ್ನು ತಡೆದ ಪ್ರತಿಭಟನಕಾರರುಶಬರಿಮಲೆಗೆ ಹೊರಟ ಮಹಿಳೆಯರನ್ನು ತಡೆದ ಪ್ರತಿಭಟನಕಾರರು

ಪಂಪಾ ನದಿ ತಟದಲ್ಲಿ ಸುಪ್ರಿಂಕೋರ್ಟ್‌ ತೀರ್ಪಿನ ಪರ ಮತ್ತು ವಿರೋಧದ ಎರಡೂ ಗುಂಪುಗಳು ಪ್ರತಿಭಟನೆ ನಡೆಸಿದವು ಪ್ರತಿಭಟನೆಯು ಬರುಬರುತ್ತಾ ಹಿಂಸಾಚಾರಕ್ಕೆ ತಿರುಗಿತು ಹಲವರು ಗಾಯಗೊಂಡರು.

Sabarimala temple protest women entry Kerala

ಶಬರಿಮಲೆ, ಪಂಪಾ ನದಿ ತೀರ, ನಿಲಕ್ಕಲ್‌ ಮತ್ತಿತರ ಕಡೆ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದರು. ಇಂದು ರಾತ್ರಿ 10.30 ರ ವರೆಗೆ ದೇವಸ್ಥಾನ ತೆರೆದಿರುತ್ತದೆ ಮತ್ತೆ ನಾಳೆ ಪುನಃ ದೇವಸ್ಥಾನ ತೆರೆಯುತ್ತದೆ.

English summary
Women and many right wing people protest in Nilakkal against the entry of women in the age group of 10-50 to Sabarimala temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X