• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿ

|
Google Oneindia Kannada News

ಕೊಚ್ಚಿ, ನವೆಂಬರ್‌ 11: ವಾರ್ಷಿಕ ತೀರ್ಥಯಾತ್ರೆಗೆ ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಸ್ಥಾನವು ಸಜ್ಜಾಗಿದೆ. ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಯು ನವೆಂಬರ್‌ 15 ರಿಂದ ಆರಂಭ ಆಗಲಿದ್ದು ಡಿಸೆಂಬರ್‌ 26 ರಂದು ಮಂಡಲ ಪೂಜೆಯು ನಡೆಯಲಿದೆ. ಇನ್ನು ಈ ನಡುವೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಪಡೆಯಲು ಆನ್‌ಲೈನ್‌ ಮೂಲಕ ಅವಕಾಶ ದೊರೆಯದವರಿಗೆ, ನೀಲಕಲ್ಲಿನಲ್ಲಿ ಸ್ಥಳದಲ್ಲೇ ಬುಕ್ಕಿಂಗ್‌ ಮಾಡಲು ಪೊಲೀಸರು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

ಅಯ್ಯಪ್ಪನ ದರ್ಶನಕ್ಕಾಗಿ ವರ್ಚುವಲ್‌ (ಆನ್‌ಲೈನ್‌) ಮೂಲಕ ನೋಂದಣಿ ಮಾಡಿಕೊಂಡ ಭಕ್ತರ ದಾಖಲೆಗಳನ್ನು ಪರಿಶೀಲನೆ ಮಾಡಲು ಹತ್ತಕ್ಕೂ ಅಧಿಕ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಭಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಾಗಲೇ ಅವರಿಗೆ ನೀಲಕಲ್ಲಿನಲ್ಲಿ ಯಾವ ಸಮಯಕ್ಕೆ, ಯಾವ ದಿನದಂದು ತಮ್ಮ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ.

ವಾರ್ಷಿಕ ತೀರ್ಥಯಾತ್ರೆ: ಶಬರಿಮಲೆ ದೇವಸ್ಥಾನ ನ.15 ರಿಂದ ಓಪನ್‌ವಾರ್ಷಿಕ ತೀರ್ಥಯಾತ್ರೆ: ಶಬರಿಮಲೆ ದೇವಸ್ಥಾನ ನ.15 ರಿಂದ ಓಪನ್‌

ಇನ್ನು ವರ್ಚುವಲ್‌ ಮೂಲಕ ನೋಂದಣಿ ಮಾಡಿಕೊಂಡು ಬಳಿಕ ಸಮಯಕ್ಕೆ ಸರಿಯಾಗಿ ನೀಲಕಲ್ಲಿನಲ್ಲಿ ಹಾಜರು ಆಗದ ಭಕ್ತರ ಬದಲಿಗೆ ವರ್ಚುವಲ್‌ ಬುಕ್ಕಿಂಗ್‌ಗೆ ಅವಕಾಶ ದೊರೆಯದ ಭಕ್ತರಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಈ ಭಕ್ತರು ದರ್ಶನ ಅವಕಾಶಕ್ಕಾಗಿ ಕಾಯಬೇಕಾಗಿ ಬರುತ್ತದೆ.

ಮಂಡಲ ಕಲಾಂ ಅಥವಾ ಮಂಡಲ ಋತುವು ಬೆಟ್ಟದ ಮೇಲೆ ಇರುವ ಅಯ್ಯಪ್ಪನ ದರ್ಶನಕ್ಕಾಗಿ ಮಾಡುವ ತೀರ್ಥಯಾತ್ರೆಯ ಸಮಯ ಆಗಿದೆ. ಇದು ವೃಶ್ಚಿಕಂ ತಿಂಗಳ ಮೊದಲ ದಿನದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಸಾಂಪ್ರದಾಯಿಕ ಮಲಯಾಳಂ ಕ್ಯಾಲೆಂಡರ್‌‌ ಪ್ರಕಾರ ಧನು ತಿಂಗಳ 11 ನೇ ದಿನದಂದು ಕೊನೆಗೊಳ್ಳುತ್ತದೆ. ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಈ ಋತು ಇರಲಿದೆ. ಡಿಸೆಂಬರ್‌ 26 ರಂದು ಮಂಡಲ ಪೂಜೆಯು ನಡೆಯಲಿದೆ. ಈ ಬಾರಿ ಕೊರೊನಾ ವೈರಸ್‌ ಕಾರಣದಿಂದಾಗಿ ಹೊರಡಿಸಲಾಗಿರುವ ಮಾರ್ಗಸೂಚಿ ಏನು? ಎಂದು ತಿಳಿಯಲು ಮುಂದೆ ಓದಿ.

ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ಈಗಲೇ 10 ಲಕ್ಷಕ್ಕೂ ಅಧಿಕ ನೋಂದಣಿ!ಶಬರಿಮಲೆ ವಾರ್ಷಿಕ ತೀರ್ಥಯಾತ್ರೆ: ಈಗಲೇ 10 ಲಕ್ಷಕ್ಕೂ ಅಧಿಕ ನೋಂದಣಿ!

ಕೋವಿಡ್‌ ಹಿನ್ನೆಲೆ ಜಾರಿ ಮಾಡಲಾದ ಮಾರ್ಗಸೂಚಿ

* ಪ್ರತಿ ದಿನ 30 ಸಾವಿರ ಭಕ್ತಿಗೆ ಮಂಡಲ ಋತುವಿನ ಸಮದರ್ಭದಲ್ಲಿ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಮನೋರಮ ವರದಿ ಮಾಡಿದೆ. ಇನ್ನು ಈ ಹಿಂದೆ ಪ್ರತಿ ದಿನ 25 ಸಾವಿರ ಭಕ್ತರಿಗೆ ಅವಕಾಶ ದೊರೆಯಲಿದೆ ಎಂದು ವರದಿ ಆಗಿತ್ತು.
* ಇನ್ನು ನೀವು ಈ ತೀರ್ಥಯಾತ್ರೆಗೆ ಹೋಗುವ ಸಂದರ್ಭದಲ್ಲಿ ಆಧಾರ್‌ ಕಾರ್ಡ್ ಹಾಗೂ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕು. 72 ಗಂಟೆಗಳ ಒಳಗೆ ನೀವು ಕೋವಿಡ್‌ ಪರೀಕ್ಷೆಗೆ ಒಳಗಾಗಿ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು. ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡವರು, ಲಸಿಕೆ ಪ್ರಮಾಣ ಪತ್ರವನ್ನು ಹೊಂದಿರಬೇಕು.
* ಆರ್‌ಟಿ-ಲ್ಯಾಂಪ್ ಹಾಗೂ ಆಂಟಿಜೆನ್‌ ಪರೀಕ್ಷೆಯು ನೀಲಕಲ್ಲಿನಲ್ಲಿ ಮಾಡಲಾಗುತ್ತದೆ. ನಾವು ಮೂರು ಗಂಟೆಯ ಒಳಗೆ ಪರೀಕ್ಷೆಯ ವರದಿಯನ್ನು ನೀಡಲಾಗುತ್ತದೆ. ಯಾರಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರ ಇರುವುದಿಲ್ಲವೋ ಅಥವಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡ ಪ್ರಮಾಣ ಪತ್ರ ಇರುವುದಿಲ್ಲವೋ ಅವರು ಇಲ್ಲಿಯೇ ಕೋವಿಡ್‌ ಪರೀಕ್ಷೆಗೆ ಒಳಗಾಗಬಹುದು. ಇನ್ನು ಆರೋಗ್ಯ ಇಲಾಖೆಯು ಅದಕ್ಕಾಗಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಚೆನ್ನಗುನ್ನೂರು, ತಿರುವಳ್ಳಿ ಹಾಗೂ ಕೋಟಯಂ ರೈಲ್ವೇ ನಿಲ್ದಾಣದಲ್ಲಿ ಹಾಗೂ ತೀರ್ಥಯಾತ್ರೆಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಇರುತ್ತದೆ.
* ನೀಲಕಲ್ಲಿನವರೆಗೆ ಯತ್ರಾರ್ಥಿಗಳ ವಾಹನಗಳಿಗೆ ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತದೆ. ಅಲ್ಲಿ ತಮ್ಮ ವಾಹವನ್ನು ಪಾರ್ಕ್ ಮಾಡಿದ ಬಳಿಕ ಯತ್ರಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಪಂಬಾಗೆ ತಲುಪಬೇಕಾಗುತ್ತದೆ.
* ಬೆಳಿಗ್ಗೆ 5:30 ಗಂಟೆಯಿಂದ 12 ಗಂಟೆಯವರೆಗೆ ನೇಯ್ಯಭಿಷೇಕ (ತುಪ್ಪದಾಭಿಷೇಕ) ಮಾಡಲಾಗುತ್ತದೆ. ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಭಕ್ತರು ತುಪ್ಪದಾಭಿಷೇಕವನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಲು ಅವಕಾಶವಿಲ್ಲ ಎಂದು ಈವರೆಗೆ ಹೇಳಲಾಗಿದೆ. ಆದರೆ ಇನ್ನೂ ಕೂಡಾ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮಧ್ಯಾಹ್ನ ಬಂದವರು ಅಭಿಷೇಕ ಮಾಡಿಸಿಕೊಂಡ ತುಪ್ಪವನ್ನು ಪಡೆಯಬಹುದು.
* ಕಲಭಾಭಿಷೇಕ, ಪುಷ್ಪಾಭಿಷೇಕ, ಅರ್ಚನೆ, ಗಣಪತಿ ಹೋಮ, ಭಗವತಿ ಸೇವಾ, ಉಷಾ ಪೂಜೆ, ಉಚ್ಛ ಪೂಜೆ, ದೀಪಾರಾಧನೆ ಹಾಗೂ ಅತ್ತಳ ಪೂಜೆಯನ್ನು ಮಾಡಿಸಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಉದಯಸ್ಥಮಾನ ಪೂಜೆ ಹಾಗೂ ಪಡಿ ಪೂಜೆಗೆ ಮೊದಲೇ ನೋಂದಣಿ ಮಾಡಬೇಕಾಗುತ್ತದೆ.
* ಅಪ್ಪಮ್‌ ಹಾಗೂ ಅರ್ವಾಣಾ (ತುಪ್ಪ ಪ್ರಸಾದ) ಪ್ರಸಾದವನ್ನು ಭಕ್ತರು ಸನ್ನಿಧಾನದಲ್ಲಿನ ಕೌಂಟರ್‌ನಲ್ಲಿ ಪಡೆಯಬಹುದು.
* ಪಂಬೆಯಲ್ಲಿ ತೀರ್ಥ ಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ದೇವಸ್ವಂ ಬೋರ್ಡ್ ತಿಳಿಸಿದೆ.
* ಸ್ವಾಮಿ ಅಯ್ಯಪ್ಪ ರಸ್ತೆಯಲ್ಲಿ ಮಾತ್ರ ಹೋಗಲು ಅವಕಾಶ. ಅಪ್ಪಚಿಂಬೆಡು ಹಾಗೂ ನೀಲಮೆಲೆಯ ಮೂಲಕ ಹೋಗಲು ಅವಕಾಶವಿಲ್ಲ.
* ಸಾಂಪ್ರಾದಾಯಿಕವಾಗಿ ಅರಣ್ಯ ಮಾರ್ಗವಾಗಿ ದೇವಾಲಯಕ್ಕೆ ಹೋಗಲಾಗುತ್ತದೆ. ಆದರೆ ಈ ಬಾರಿ ಈ ಮಾರ್ಗದಲ್ಲಿ ಹೋಗಲು ಅವಕಾಶವಿಲ್ಲ. ಎರುಮೇಲಿ ಮೂಲಕ ಅಳುಪ, ಕರಿಮಲೆ ಹಾಗೂ ಕಲ್ಲಿದಾಮದಲ್ಲಿ ತೆರಳಲು ಅವಕಾಶವಿಲ್ಲ.
* ಶಬರಿಮಲೆ ಸನ್ನಿಧಾನದಲ್ಲಿ ತಂಗಲು ಅವಕಾಶವಿಲ್ಲ. ಇರುಮುಡಿ ಕಟ್ಟನ್ನು ತೆರೆದು ನೇಯ್ಯಾಭಿಷೇಕಕ್ಕೆ ಸಿದ್ಧತೆ ಮಾಡಲು ಅವಕಾಶ ನೀಡಲಾಗುತ್ತದೆ. ಸನ್ನಿಧಾನದಲ್ಲಿ ತುಂಬಾ ಹೊತ್ತು ತಂಗಲು ಅವಕಾಶ ನೀಡಲಾಗುವುದಿಲ್ಲ.
* ಸನ್ನಿಧಾನ, ಪಂಪೆ, ಚಾರಲಮೇಡು, ನೀಲಕಲ್ಲಿನಲ್ಲಿ ಆಸ್ಪತ್ರೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯ ಆರೋಗ್ಯ ಚಿಕಿತ್ಸೆ ಬೇಕಾದವರಿಗಾಗಿ ಆಂಬುಲೆನ್ಸ್‌ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡಲಾಗಿದೆ.
* ಅಂಗವೈಕಲ್ಯದಿಂದಾಗಿ ನಡೆಯಲು ಸಾಧ್ಯವಾಗದವರನ್ನು ಹೊತ್ತು ಕೊಂಡು ಹೋಗುವ ವ್ಯವಸ್ಥೆಯು ಕೂಡಾ ಇದೆ.

(ಒನ್ಇಂಡಿಯಾ ಸುದ್ದಿ)

English summary
Sabarimala set for Mandala season, Guidelines Explained here in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X