ಹೈಕೋರ್ಟಿಗೆ ಸರ್ಕಾರದ ಭರವಸೆ: ಶಬರಿಮಲೆ ವಿವಾದ ಇನ್ನೊಂದು ಮಜಲಿಗೆ?

Recommended Video

      Sabarimala Verdict : ಶಬರಿಮಲೈ ವಿವಾದಕ್ಕೆ ಹೊಸ ಟ್ವಿಸ್ಟ್ | Oneindia Kannada

      ಕೊಚ್ಚಿನ್, ನ 23: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿನ ವಿವಾದ, ಕೇರಳದ ಪಿಣರಾಯಿ ವಿಜಯನ್ ಸರಕಾರ, ಉಚ್ಚ ನ್ಯಾಯಾಲಯಕ್ಕೆ ನೀಡಿದ ಭರವಸೆಯ ನಂತರ ಇನ್ನೊಂದು ಮಜಲಿಗೆ ಹೋಗುವ ಸಾಧ್ಯತೆಯಿದೆ.

      ಕೇರಳ ಉಚ್ಚ ನ್ಯಾಯಾಲಯಕ್ಕೆ ಮೌಖಿಕ ಭರವಸೆ ನೀಡಿರುವ ಕೇರಳ ಸರಕಾರ, ಎರಡು ದಿನ ಮಹಿಳೆಯರಿಗೆ ಮಾತ್ರ ಪ್ರವೇಶ ನೀಡುವ ವಿಚಾರದಲ್ಲಿ, ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

      ಈಗ ನಡೆಯುತ್ತಿರುವ ಮಂಡಲ/ಮಕರವಿಳಕ್ಕು ಸೀಸನ್ ನಲ್ಲಿ, ಎರಡು ದಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯ ಜೊತೆ ತುರ್ತಾಗಿ ಸಭೆ ಕರೆದು, ನಿರ್ಧರಿಸುವುದಾಗಿ ಸರಕಾರ, ನ್ಯಾಯಾಲಯಕ್ಕೆ ತಿಳಿಸಿದೆ.

      Sabarimala: Kerala government ready to explore possibility of 2days for women

      ನಾಲ್ಕು ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ಭದ್ರತೆ ಒದಗಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ. ಹೃಷಿಕೇಶ ರಾಯ್ ಮತ್ತು ಜಯಶಂಕರನ್ ನಂಬಿಯಾರ್ ಇದ್ದ ನ್ಯಾಯಪೀಠಕ್ಕೆ ಸರಕಾರ ಮೌಖಿಕವಾಗಿ ಈ ಭರವಸೆಯನ್ನು ನೀಡಿದೆ.

      ನಾಲ್ವರು ಮಹಿಳೆಯರು ಅಯ್ಯಪ್ಪನ ಭಕ್ತರಾಗಿದ್ದು, ದೇವಾಲಯಕ್ಕೆ ಪ್ರವೇಶಿಸಲು ಬಯಸಿದ್ದಾರೆ. ನವೆಂಬರ್ 19ರಂದು ಆನ್ಲೈನ್ ಮೂಲಕ, ಅಯ್ಯಪ್ಪನ ದರ್ಶನಕ್ಕೆ ನೊಂದಣಿ ಮಾಡಿಕೊಂಡಿದ್ದಾರೆಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.

      ರೇಷ್ಮಾ ನಿಶಾಂತ್, ಶನಿಲಾ ಸತೀಶ್, ವಿ ಎಸ್ ಧನ್ಯಾ ಸೇರಿದಂತೆ ನಾಲ್ವರು ಮಹಿಳೆಯರು, ದೇವಾಲಯ ಪ್ರವೇಶಿಸಲು ನೊಂದಣಿ ಮಾಡಿಕೊಂಡಿರುವುದು, ಜೊತೆಗೆ, ಹೈಕೋರ್ಟಿಗೆ ಕೇರಳ ಸರಕಾರ ಮೌಖಿಕ ಭರವಸೆ ನೀಡಿರುವುದರಿಂದ, ಈ ವಿಚಾರ ಹೊಸ ಆಯಾಮ ಪಡೆಯುವ ಎಲ್ಲಾ ಸಾಧ್ಯತೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+