ಶಬರಿಮಲೆ ಪ್ರವೇಶಕ್ಕೆ ಸಜ್ಜಾದ ತೃಪ್ತಿ ದೇಸಾಯಿ: ಪ್ರತಿಭಟನೆಯ ಸ್ವಾಗತ
Recommended Video

ಶಬರಿಲೆ ಪ್ರವೇಶಕ್ಕೆ ಸಜ್ಜಾದ ತೃಪ್ತಿ ದೇಸಾಯಿ: ಪ್ರತಿಭಟನೆಯ ಸ್ವಾಗತ..! | Oneindia Kannada
ಕೊಚ್ಚಿ, ನವೆಂಬರ್ 16: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಿಸಲು ಅಣಿಯಾಗಿರುವ ಮಹಿಳಾಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆತಿದೆ.
ತಮ್ಮ ಬೆಂಬಲಿಗರೊಂದಿಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ತೃಪ್ತಿ ದೇಸಾಯಿ ಅವರನ್ನು ಏರ್ಪೋರ್ಟ್ ಎದುರು ನಿಂತ ಪ್ರತಿಭಟನಕಾರರು ತಡೆದರು. ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿ ಆಗಮನದ ಕಾರಣ ಕೊಚ್ಚಿ ಏರ್ಪೋರ್ಟ್ ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

10 ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಕ್ಕಿದ್ದ ನಿರ್ಬಂಧವನ್ನು ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. ಪ್ರತಿ ತಿಂಗಳೂ ನಿಯಮಿತ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗುತ್ತಿದ್ದು, ಇದುವರೆಗೂ ಯಾವುದೇ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು ಪ್ರತಿಭಟನಕಾರರು ಬಿಟ್ಟಿಲ್ಲ.












Click it and Unblock the Notifications