ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಶಾಂತಿ ಕದಡಲು ಬಿಜೆಪಿ ಆರೆಸ್ಸೆಸ್ ಒಂದಾಗಿದೆ: ಸ್ವಾಮಿ ಅಗ್ನಿವೇಶ್

|
Google Oneindia Kannada News

ತಿರುವನಂತಪುರಂ, ನವೆಂಬರ್ 24: ಶಬರಿಮಲೆ ವಿವಾದದ ಉಪಯೋಗ ಪಡೆದು ಬಿಜೆಪಿ ಮತ್ತು ಆರೆಸ್ಸೆಸ್ ಒಂದಾಗಿ ಕೇರಳದ ಶಾಂತಿ-ಸುವ್ಯವಸ್ಥೆ ಕದಡುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಒಂದಾಗಿ ದೇವರಾಜ್ಯ ಕೇರಳದ ಸಾಮಾಜಿಕ ಮತ್ತು ಅಧ್ಯಾತ್ಮಿಕ ಶಾಂತಿಯನ್ನು ಹಾಳುಗೆಡವಲು ಯತ್ನಿಸುತ್ತಿದೆ ಎಂದು ಅವರು ದೂರಿದರು.

ಹೈಕೋರ್ಟಿಗೆ ಸರ್ಕಾರದ ಭರವಸೆ: ಶಬರಿಮಲೆ ವಿವಾದ ಇನ್ನೊಂದು ಮಜಲಿಗೆ?ಹೈಕೋರ್ಟಿಗೆ ಸರ್ಕಾರದ ಭರವಸೆ: ಶಬರಿಮಲೆ ವಿವಾದ ಇನ್ನೊಂದು ಮಜಲಿಗೆ?

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10-60 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಕಳೆದ ಸೆಪ್ಟೆಂಬರ್ ನಲ್ಲಿ ತೆರವುಗೊಳಿಸಿತ್ತು.

RSS-BJP combine to destroy Keralas law and order says Swami Agnivesh

ಆ ನಂತರ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅಯ್ಯಪ್ಪ ಭಕ್ತರು ತಡೆದಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಕೆಲದಿನಗಳ ಕಾಲ ಶಾಂತಿ ಹದಗೆಟ್ಟಿತ್ತು.

ಶಬರಿಮಲೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ: ನಳಿನ್ ಕುಮಾರ್ ಕಟೀಲ್ ಆರೋಪ ಶಬರಿಮಲೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ: ನಳಿನ್ ಕುಮಾರ್ ಕಟೀಲ್ ಆರೋಪ

"ಕೇರಳದಲ್ಲಿ ಜಾತಿ ಮತ್ತು ಕೋಮು ಆಧಾರದ ಮೇಲೆ ರಾಜಕೀಯ ನಡೆಯುತ್ತದೆ ಎಂಬುದನ್ನು ಬಲ್ಲ ಆರೆಸ್ಸೆಸ್ ಮತ್ತು ಬಿಜೆಪಿ ಧಾರ್ಮಿಕ ಸೂಕ್ಷ್ಮ ವಿಷಯವಾದ ಶಬರಿಮಲೆ ವಿವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದೆ" ಎಂದು ಅಗ್ನಿವೇಶ್ ಆರೋಪಿಸಿದರು.

English summary
The Sangh Parivar is taking advantage of the Sabarimala issue and has posed a frontal challenge to the rule of law and the Constitution, social activist Swami Agnivesh said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X