ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಒಬ್ಬ ಆರೋಪಿ ಬಂಧನ

|
Google Oneindia Kannada News

ತಿರುವನಂತಪುರಂ, ಜೂನ್ 05 : ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ದೇಶಾದ್ಯಂತ ಚರ್ಚೆಗೆ ಕಾರಣವಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು.

ಕೇರಳದ ಅರಣ್ಯ ಸಚಿವರು ಈ ಕುರಿತು ಮಾಹಿತಿ ನೀಡಿದ್ದಾರೆ. "ಆನೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಮೊದಲ ಬಂಧನವಾಗಿದೆ" ಎಂದು ಹೇಳಿದ್ದಾರೆ. ಬಂಧಿತ ವ್ಯಕ್ತಿ ಸ್ಫೋಟಕ ಸರಬರಾಜು ಮಾಡಿದ್ದ ಎಂದು ಆರೋಪಿಸಲಾಗಿದೆ.

ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಎಫ್‌ಐಆರ್ ದಾಖಲು ಕೇರಳದಲ್ಲಿ ಗರ್ಭಿಣಿ ಆನೆ ಹತ್ಯೆ; ಎಫ್‌ಐಆರ್ ದಾಖಲು

ಸ್ಫೋಟಕ ತುಂಬಿದ್ದ ಹಣ್ಣನ್ನು ತಿಂದು ಗರ್ಭಿಣಿ ಆನೆ ಮೃತಪಟ್ಟಿದೆ. ಹಣ್ಣಿನಲ್ಲಿ ಸ್ಫೋಟಕ ತುಂಬಿ ಬೆಳೆಗಳ ರಕ್ಷಣೆಗಾಗಿ ಇಡಲಾಗಿತ್ತು. ಕರಡಿ ಸೇರಿದಂತೆ ಬೇರೆ ಪ್ರಾಣಿಗಳಿಂದ ಬೆಳೆಗಳ ರಕ್ಷಣೆ ಇಂತಹ ಕ್ರಮ ಕೈಗೊಳ್ಳಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

 ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ

Pregnant Elephant Killed In Kerala One arrested

"ಬಂಧಿತ ವ್ಯಕ್ತಿ ಸ್ಫೋಟಕ ಸರಬರಾಜು ಮಾಡಿದ್ದ. ಬೇರೆ ಪ್ರದೇಶಕ್ಕೂ ಈತ ಸ್ಫೋಟಕ ಪೂರೈಕೆ ಮಾಡಿರುವ ಶಂಕೆ ಇದ್ದು, ಪೊಲೀಸರು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಸಚಿವ ಕೆ. ರಾಜು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮರುಕಳಿಸಿದ ಆನೆ ಸಾವಿನ ಪ್ರಕರಣಗಳುಚಾಮರಾಜನಗರದಲ್ಲಿ ಮರುಕಳಿಸಿದ ಆನೆ ಸಾವಿನ ಪ್ರಕರಣಗಳು

ಸ್ಫೋಟಕ ತುಂಬಿದ ಅನಾನಸ್ ಹಣ್ಣನ್ನು ನೀಡಿ ಮಣಪ್ಪುರಂನಲ್ಲಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಕೃತ್ಯದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿತ್ತು.

ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಅನ್ವಯ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

English summary
One man arrested for his alleged involvement in the death of a pregnant elephant in Malappuram, Kerala. Elephant died after eating a pineapple stuffed with crackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X