• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ: ಮೇ 20ರಂದು ಪಿಣರಾಯಿ ವಿಜಯನ್ ಪ್ರಮಾಣವಚನ

|

ತಿರುವನಂತಪುರಂ, ಮೇ 17: ಕೇರಳದಲ್ಲಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಮೇ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಸಿಪಿಐಎಂ ಹಾಗೂ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ನ ಸಂಚಾಲಕ ವಿಜಯರಾಘವನ್ ಮಾತನಾಡಿ, ಕೇರಳ ಸರ್ಕಾರವು 21 ಸದಸ್ಯರ ಸಂಪುಟವನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಮೇ 20 ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಪಿಣರಾಯಿ ವಿಜಯನ್ ಸಚಿವ ಸಂಪುಟದಲ್ಲಿ ಸಿಪಿಐ(ಎಂ)ಗೆ 12, ಸಿಪಿಐಗೆ 4, ಕೇರಳ ಕಾಂಗ್ರೆಸ್‌, ಜನತಾದಳ ಎಸ್ ಹಾಗೂ ಎನ್‌ಸಿಪಿಗೆ ತಲಾ 1 ಸಂಪುಟ ಸ್ಥಾನ ದೊರೆಯಲಿದೆ.

ಅದರ ಜತೆಗೆ ಇನ್ನುಳಿದ ಎರಡು ಸಚಿವ ಸ್ಥಾನವನ್ನು ಜನಾಧಿಪತ್ಯ ಕೇರಳ ಕಾಂಗ್ರೆಸ್, ಹಾಗೂ ಇಂಡಿಯನ್ ನ್ಯಾಷನಲ್ ಲೀಗ್‌ ಎರಡೂವರೆ ವರ್ಷ ಮತ್ತು ಮುಂದಿನ ಎರಡೂವರೆ ವರ್ಷವನ್ನು ಕೇರಳ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಎಸ್ ಹಂಚಿಕೊಳ್ಳಲಿದೆ.

ಸಿಪಿಐಎಂಗೆ ಸಭಾಧ್ಯಕ್ಷ ಹಾಗೂ ಸಿಪಿಐಗೆ ಉಪ ಸಭಾಧ್ಯಕ್ಷ ಹುದ್ದೆ ದೊರೆಯಲಿದ್ದು, ಮುಖ್ಯ ಸಚೇತಕ ಹುದ್ದೆಯು ಕೇರಳ ಕಾಂಗ್ರೆಸ್‌ಗೆ ದೊರೆಯಲಿದೆ. ಆದರೆ ಸಚಿವರ ಖಾತೆ ಹಂಚಿಕೆಯನ್ನು ಸಂಪೂರ್ಣವಾಗಿ ಮುಖ್ಯಮಂತ್ರಿಗೆ ಪರಮಾಧಿಕಾರ ನೀಡಲಾಗಿದೆ.

English summary
Communist Party of India Marxist (CPIM)'s acting state secretary and Left Democratic Front (LDF) convener A Vijayaraghavan on Monday said that the Kerala government will have a 21-member cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X