ನೆರೆ ಮನೆ ನಾಯಿ ಜತೆ ಅನೈತಿಕ ಸಂಬಂಧ; ತನ್ನ ಮನೆ ನಾಯಿಯ ಹೊರಹಾಕಿದ ಮಾಲೀಕ
ತಿರುವನಂತಪುರಂ (ಕೇರಳ), ಜುಲೈ 23: ಇದು ವಿಚಿತ್ರವಾದ ಹಾಗೂ ಅಷ್ಟೇ ಆಸಕ್ತಿಕರವಾದ ಸುದ್ದಿ. ನೆರೆಮನೆಯವರ ನಾಯಿಯ ಜತೆಗೆ ಅನೈತಿಕ ಸಂಬಂಧ ಇತ್ತು ಎಂಬ ಕಾರಣಕ್ಕೆ ತಮ್ಮ ಮನೆಯ ನಾಯಿಯನ್ನು ದೂರ ಮಾಡಿದ ಘಟನೆ ನಡೆದಿದೆ. ನಾಯಿಗೆ ಹಾಕುತ್ತಾರಲ್ಲಾ ಕೊರಳಪಟ್ಟಿ, ಅದರಲ್ಲಿ ಒಂದು ಒಕ್ಕಣೆ ಕೂಡ ಹಾಕಲಾಗಿದೆ.

ನಾಯಿಯ ಕೊರಳಪಟ್ಟಿಗೆ ಹಾಕಿರುವ ಒಕ್ಕಣೆ ಹೀಗಿದೆ: ಇದು ಆತ್ಯುತ್ತಮ ತಳಿಯ, ಒಳ್ಳೆ ನಡವಳಿಕೆ ಉಳ್ಳದ್ದು. ಇದಕ್ಕೆ ಭಾರೀ ಆಹಾರ ಬೇಕು ಅಂತಲೂ ಇಲ್ಲ. ಯಾವುದೇ ಕಾಯಿಲೆಗಳಿಲ್ಲ. ಸಾಮಾನ್ಯವಾಗಿ ಐದು ದಿನಗಳಿಗೆ ಒಮ್ಮೆ ಸ್ನಾನ ಮಾಡಿಸಲಾಗುತ್ತದೆ. ಇದು ಕೇವಲ ಬೊಗಳುತ್ತದೆ; ಮೂರು ವರ್ಷದಲ್ಲಿ ಯಾರನ್ನೂ ಕಡಿದಿಲ್ಲ. ಹಾಲು, ಬಿಸ್ಕೆಟ್ ಮತ್ತು ಮೊಟ್ಟೆ ಇದರ ಮುಖ್ಯ ಆಹಾರ. ನೆರೆಮನೆಯ ನಾಯಿ ಜತೆಗೆ ಅನೈತಿಕ ಸಂಬಂಧ ಎಂದು ತಿಳಿದುಬಂತು. ಅದಕ್ಕಾಗಿಯೇ ಇದನ್ನು ಮನೆಯಿಂದ ಹೊರ ಹಾಕಿದ್ದೀವಿ.

ಪೊಮೇರಿಯನ್ ನಾಯಿಯ ಫೋಟೋ ಹಾಗೂ ಫೋಟೋವನ್ನು ಪ್ರಾಣಿ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಶ್ರೀದೇವಿ ಎಸ್. ಕರ್ಥ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಾಣಿಪ್ರಿಯರು ನಾಯಿಯ ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications