• search
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಬಗ್ಗೆ ಶಶಿ ತರೂರ್ ಪುಸ್ತಕ, ಇಂಗ್ಲೀಷ್ ಕಠಿಣ ಪದ ಟ್ವೀಟ್

|

ಬೆಂಗಳೂರು, ಅಕ್ಟೋಬರ್ 12: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ ಅವರ ಇಂಗ್ಲೀಷ್ ಪಾಂಡಿತ್ಯ ಬಗ್ಗೆ ಎಲ್ಲರಿಗೂ ಗೊತ್ತಿರಬಹುದು. ಈಗ ಪ್ರಧಾನಿ ಮೋದಿ ಬಗ್ಗೆ ತಾವು ಬರೆದಿರುವ ಪುಸ್ತಕದ ಪ್ರಚಾರಕ್ಕಾಗಿ ಟ್ವೀಟ್ ಮಾಡಿದ ಶಶಿ ಸುದ್ದಿಯಲ್ಲಿದ್ದಾರೆ.

ಯಾರಿಗೂ ಅರ್ಥವಾಗದ ಕಠಿಣವಾದ ಉದ್ದುದ್ದ ಇಂಗ್ಲೀಷ್ ಶಬ್ದ ಪ್ರಯೋಗಿಸುವುದು, ಸಾಮಾನ್ಯ ಡಿಕ್ಷನರಿಯಲ್ಲಿ ಸಿಗದ ಪದಗಳನ್ನು ಹುಡುಕುವ ಮೂಲಕ ಸಾಮಾಜಿಕ‌ ಜಾಲತಾಣ ಟ್ವಿಟ್ಟರ್ ನಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತಾರೆ‌.

ಟ್ವಿಟ್ಟರ್ ಸ್ವಚ್ಛತಾ ಅಭಿಯಾನ, ಹಿಂಬಾಲಕರನ್ನು ಕಳೆದುಕೊಂಡ ಮೋದಿ, ಶಶಿ

ಈಗ ಮೋದಿ ಬಗ್ಗೆ 400 ಪುಟಗಳ 'ದಿ ಪ್ಯಾರಡಾಕ್ಸಿಕಲ್ ಪ್ರೈಂ ಮಿನಿಸ್ಟರ್' ಪುಸ್ತಕದಲ್ಲಿ ಬರೆದಿರುವ ಫ್ಲೋಸಿನೋಸಿನಿಹಿಲಿಫಿಲಿಫಿಕೇಷನ್ (floccinaucinihilipilification) ಎನ್ನುವ ಶಬ್ದ ಇದೀಗ ಸುದ್ದಿಯಲ್ಲಿದೆ. ಆದರೆ ತರೂರ್ ಅವರು‌ ಬಳಸಿರುವ ಈ ಶಬ್ದ ಅರ್ಥವಾಗುವುದು ಹೋಗಲಿ, ಉಚ್ಚರಿಸಲು ಸಾಧ್ಯವಾಗದ ರೀತಿಯಲ್ಲಿದೆ.

ಶಶಿ ತರೂರ್ ಸಾಹೇಬ್ರ ಇಂಗ್ಲಿಷ್ ಪಾಂಡಿತ್ಯಕ್ಕೆ ಬೇಸ್ತುಬಿದ್ದ ಟ್ವಿಟ್ಟಿಗರು!

ಇಷ್ಟಕ್ಕೆ ನಿಲ್ಲಿಸದ ತರೂರ್, ತಮ್ಮ ಈ ಹಿಂದಿನ ಟ್ವೀಟ್ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಆದ್ರೆ, ಆ ಟ್ವೀಟ್ ನಲ್ಲಿ
hippopotomonstrosesquipedaliophobia! ಎಂಬ ಮತ್ತೊಂದು ಪದ ಬಳಸಿ ಮತ್ತೊಮ್ಮೆ ತಲೆಗೆ ಹುಳ ಬಿಟ್ಟಿದ್ದಾರೆ. ಈ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ.

ತರೂರ್ ಅವರ ಟ್ವೀಟ್ ಓದಿದವರಿಂದ ಬಗೆ ಬಗೆ ಪ್ರತಿಕ್ರಿಯೆ

ತರೂರ್ ಅವರ ಟ್ವೀಟ್ ಓದಿದವರಿಂದ ಬಗೆ ಬಗೆ ಪ್ರತಿಕ್ರಿಯೆ

ತರೂರ್ ಅವರ ಟ್ವೀಟ್ ಓದಿ, ಅರ್ಥ ಮಾಡಿಕೊಳ್ಳುವುದೇ ಕಷ್ಟ ಇನ್ನು ಈ ಪುಸ್ತಕ ಓದಲು ಹೊಸ ನಿಘಂಟು ತರಬೇಕಾಗುತ್ತದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ತರೂರ್ ಇಂಗ್ಲೀಷ್ ಓದುತ್ತಿದ್ದರೆ, ನಮಗೆ ಇಂಗ್ಲೀಷ್ ಮರೆತು ಹೋಗುತ್ತದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

ತರೂರ್ ಟ್ವೀಟ್ ಮಾಡಿ ಸ್ಸಾರಿ ಅಂದ್ರು

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಡಿಕ್ಷನರಿ.ಕಾಂ ಅರ್ಥ ಕೊಟ್ಟಿದ್ದು, floccinaucinihilipilification ಇದೊಂದು ನಾಮಪದವಾಗಿದ್ದು, "ಬರೀ ಹೇಳುವ ಅಥವಾ ಅಂದಾಜಿಸುವ ಅಭ್ಯಾಸ ಅಥವಾ ನಿಷ್ಪ್ರಯೋಜಕ" ಎನ್ನಬಹುದು ಎಂದಿದೆ ಇದರ ಅರ್ಥ ಅರಗಿಸಿಕೊಳ್ಳುವಷ್ಟರಲ್ಲಿ ಮತ್ತೊಂದು ಟ್ವೀಟ್ ಮಾಡಿರುವ ತರೂರ್ ಅದರಲ್ಲೂ ಒಂದು ಉದ್ದುದ್ದಾದ ಪದ ಬಳಸಿದ್ದಾರೆ.

ಮೆಚ್ಚಿದೆ ನಿಮ್ಮ ಪದ ಬಳಕೆ ಪ್ರಯೋಗ

ಶಶಿ ತರೂರ್ ಅವರೇ ನಿಮ್ಮ ಪದ ಬಳಕೆ ಪ್ರಯೋಗವನ್ನು ಮೆಚ್ಚಿದೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಆಫ್ರಿಕನ್ ಕಡೆಯಿಂದ ಈ ವಿಡಿಯೋ ನೋಡಿ ಆನಂದಿಸಿ.

ತರೂರ್ ಗೆ ಅವರದ್ದೇ ಧಾಟಿಯಲ್ಲಿ ಪ್ರತ್ಯುತ್ತರ

ತರೂರ್ ಗೆ ಅವರದ್ದೇ ಧಾಟಿಯಲ್ಲಿ ಒಬ್ಬರು ಪ್ರತ್ಯುತ್ತರ ನೀಡಿದ್ದಾರೆ. ತರೂರ್ ಬಳಸುವಂತೆ ಅಲ್ಲಲ್ಲಿ ಕಠಿಣ ಪದ, ಉದ್ದುದ್ದಾ ಪದಗಳನ್ನು ಬಳಸಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನೋಡಿದ ಮೇಲೆ ಪ್ರತಿಕ್ರಿಯೆ

ಈ ಟ್ವೀಟ್ ನೋಡಿದ ಮೇಲೆ ಪ್ರತಿಕ್ರಿಯೆ ಹೀಗೆ ಇರುತ್ತೆ. ಟ್ವೀಟ್ ಅರ್ಥವಾಗಲ್ಲ, ಆದರೆ, ಅರ್ಥ ಆಗಿಲ್ಲ ಎಂದು ಹೇಳುವಂತಿಲ್ಲ.

ಮೋದಿ ಬಗ್ಗೆ ಬರೆದಿರುವ ಪುಸ್ತಕದ ಮುಖಪುಟ

ಮೋದಿ ಬಗ್ಗೆ ಬರೆದಿರುವ 400 ಪುಟಗಳ ‘ದಿ ಪ್ಯಾರಡಾಕ್ಸಿಕಲ್ ಪ್ರೈಂ ಮಿನಿಸ್ಟರ್' ಪುಸ್ತಕದ ಮುಖಪುಟ ಅನಾವರಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ತಿರುವನಂತಪುರಂ ಸುದ್ದಿಗಳುView All

English summary
A promotional tweet-spree by MP Shashi Throor on his work "The Paradoxical Prime Minister", it became a story by itself. He said the book was more than an exercise in "floccinaucinihilipilification" .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more