ಜೂನ್ 4 ರಂದು ಕೇರಳಕ್ಕೆ ಮುಂಗಾರುಮಳೆ, ಈ ಬಾರಿ ಸಾಧಾರಣಕ್ಕಿಂತ ಕಡಿಮೆ ಮಳೆ
ನವದೆಹಲಿ, ಮೇ 15: ಈ ಬಾರಿಯ ಮುಂಗಾರುಮಳೆ ಜೂನ್ 4 ರಂದು ಕೇರಳಕ್ಕೆ ಆಗಮಿಸಲಿದೆ ಎಂದು ಸ್ಕೈಮೆಟ್ ವರದಿ ತಿಳಿಸಿದೆ.
ಜೂನ್ 4 ಕ್ಕಿಂತ ಎರಡು ದಿನ ಮೊದಲು ಅಥವಾ ನಂತರವೂ ಮುಂಗಾರುಮಳೆ ಆರಂಭವಾಗಬಹುದಾಗಿದ್ದು, ಈ ಬಾರಿ ಸಾಧಾರಣಕ್ಕೀಮತ ಕಡಿಮೆ ಮುಂಗಾರುಮಳೆ ಬೀಳಲಿದೆ ಎಂದು ಈ ವರದಿ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರುಮಳೆ ಮೇ 22(ಒಂದೆರಡು ದಿನ ಹೆಚ್ಚು-ಕಡಿಮೆ)ರಂದು ಆಗಮಿಸುವ ನಿರೀಕ್ಷೆ ಇದ್ದು, ನಂತರ ಕೇರಳಕ್ಕೆ ಆಗಮಿಸಲಿದೆ.

ಭಾರತದ ಪೂರ್ವ, ಈಶಾನ್ಯ ಮತ್ತು ಮಧ್ಯಭಾಗಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಮಳೆಯಾಗಲಿದೆ ಎಂದು ಸ್ಕೈಮೆಟ್ ತಿಳಿಸಿದೆ.
ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಕಾರಣ ಎಲ್ ನಿನೋ ಮೇಲೂ ಅದು ಪರಿಣಾಮ ಬೀರಲಿದೆ.
ಭಾರತೀಯ ಹವಾಮಾನ ಇಲಾಖೆ ಈ ಬಾರಿ ಸಾಧಾರಣ ಅಥವಾ ಸರಾಸರಿ ಮಳೆಯಾಗಬಹುದು ಎಂದಿದೆಯಾದರೂ, ಈ ಕುರಿತ ನಿಖರ ಮಾಹಿತಿಯನ್ನು ಅದು ಜೂನ್ ಮೊದಲ ವಾರದಲ್ಲಿ ನೀಡಲಿದೆ.












Click it and Unblock the Notifications