ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಬಂಧನ

ಎರ್ನಾಕುಲಂ, ಜೂನ್ 27: ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಬಂಧನವಾಗಿದೆ. ಲೈಂಗಿಕ ದೌರ್ಜನ್ಯ ಆರೋಪದಡಿ ಎರ್ನಾಕುಲಂ ದಕ್ಷಿಣ ವಿಭಾಗದ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊಚ್ಚಿಯಲ್ಲಿರುವ ತನ್ನ ಫ್ಲಾಟ್‌ಗೆ ಕರೆಸಿಕೊಂಡು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಂದು ಬಾರಿಯಲ್ಲ ಅನೇಕ ಬಾರಿ ಈ ಕೃತ್ಯ ಜರುಗಿದೆ. ಯುವತಿಗೆ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ದುಬೈಯಲ್ಲಿದ್ದ ವಿಜಯ್ ಭಾರತಕ್ಕೆ ಮರಳಿದ್ದು, ವಿಚಾರಣೆಗಾಗಿ ಎರ್ನಾಕುಲಂ ಠಾಣೆಗೆ ಹಾಜರಾಗಿದ್ದಾಗ ವಶಕ್ಕೆ ಪಡೆಯಲಾಗಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೊರ್ಟ್ ನಿರೀಕ್ಷಣಾ ಜಾಮೀನು ನೀಡಿರುವುದರಿಂದ ಸ್ಟೇಷನ್ ಬೇಲ್ ಮೇಲೆ ವಿಜಯ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆದರೆ, ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಿರುವ ಸೂಕ್ತ ದಾಖಲೆ, ಸಾಕ್ಷ್ಯ ಸಂಗ್ರಹವನ್ನು ತನಿಖಾಧಿಕಾರಿಗಳು ಪಡೆದುಕೊಳ್ಳಲಿದ್ದಾರೆ. ಜೂನ್ 27 ರಿಂದ ಜುಲೈ 3ರೊಳಗೆ ತನಿಖಾಧಿಕಾರಿ ಮುಂಚೆ ಹಾಜರಾಗಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಇಂದು ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದರು. ತನಿಖಾಧಿಕಾರಿ ಅನುಮತಿ ಇಲ್ಲದೆ ಕೇರಳ ಬಿಟ್ಟು ತೆರಳುವಂತಿಲ್ಲ, ದೂರು ನೀಡಿದ ಮಹಿಳೆ ಹಾಗೂ ಕುಟುಂಬಸ್ಥರನ್ನು ಸಂಪರ್ಕಿಸುವಂತಿಲ್ಲ, ಪಾಸ್ ಪೋರ್ಟ್ ಠಾಣೆಗೆ ನೀಡತಕ್ಕದ್ದು ಎಂದು ಷರತ್ತುಗಳನ್ನು ವಿಧಿಸಲಾಗಿತ್ತು. ಬಿಡುಗಡೆಯಾಗಲು 5 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿಯನ್ನು ನೀಡಬೇಕಾಗಿದ್ದು, ಸದ್ಯಕ್ಕೆ ಬಂಧನದಿಂದ ರಕ್ಷಣೆ ಪಡೆಯಲಿದ್ದಾರೆ.

Malayalam Actor-Producer Vijay Babu Arrested in Sexual Assault Case

ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಿಂದ ತಿಳಿದು ಬಂದಿದೆ. ಸಂತ್ರಸ್ತ ಮಹಿಳೆ ಕೋಳಿಕ್ಕೋಡ್ ಜಿಲ್ಲೆ ಮೂಲದವರು ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ವಿಚಾರಣೆ ಇನ್ನೂ ಆಗಿಲ್ಲ, ತನಿಖೆ ವಿಳಂಬವಾಗುತ್ತಿದೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Malayalam Actor-Producer Vijay Babu Arrested in Sexual Assault Case

2018ರಿಂದ ನಟರಾಗಿ ಕೂಡಾ ವಿಜಯ್ ಬಾಬು ಕಾಣಿಸಿಕೊಂಡಿದ್ದಾರೆ. ದೂರು ನೀಡಿರುವ ನಟಿ ಜೊತೆ 2021ರ ನಂತರ ಚಾಟ್ ಮಾಡಿಲ್ಲ, ಆಕೆ ನನ್ನ ಫ್ಲಾಟಿಗೆ ಬಂದಿದ್ದು ನಿಜ, ಆಡಿಷನ್ ಮುಗಿದ ಬಳಿಕ ಆಕೆಗೆ ನಟನೆಗೆ ಸೂಕ್ತ ಅವಕಾಶ ಕಲ್ಪಿಸಲಾಗಿತ್ತು. ಅದು ಬಿಟ್ಟರೆ, ಈ ಕಾಸ್ಟಿಂಗ್ ಕೋಚ್ ಆರೋಪ, ಮೀಟೂ ಆರೋಪ ಎಲ್ಲವೂ ಸುಳ್ಳು ಎಂದಿದ್ದಾರೆ.

ಅತ್ಯಾಚಾರ, ಸಹಮತ ಸೆಕ್ಸ್ ಏನಾದರೂ ವ್ಯಾಖ್ಯಾನ ನೀಡಲಿ, ಆಕೆಯ ಆರೋಪಗಳೆಲ್ಲವೂ ಸುಳ್ಳು, ನನ್ನ ಬಳಿ ಮಾತುಕತೆ ನಡೆಸಿದ 400ಕ್ಕೂ ಅಧಿಕ ಸ್ಕ್ರೀನ್ ಶಾಟ್ ಗಳಿವೆ. ಪೊಲೀಸ್ ತನಿಖೆ ಎದುರಿಸಲು ಸಿದ್ಧ, ಸತ್ಯ ಹೊರ ಬೀಳಲಿ ಎಂದು ವಿಜಯ್ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+