• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳ: ವೈನಾಡುವಿನಲ್ಲಿ ಭೂಕುಸಿತ ಹಲವು ಮಂದಿ ಭೂಸಮಾಧಿ ಶಂಕೆ

|

ವೈನಾಡು, ಆಗಸ್ಟ್ 08: ಕೇರಳದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಇಂದು ಮೆಪ್ಪಾಡಿಯ ಪುತ್ತುಮಲ ಎಂಬಲ್ಲಿ ಗುಡ್ಡವೊಂದು ಗ್ರಾಮದ ಮೇಲೆ ಕುಸಿದ ಪರಿಣಾಮ ಹಲವರು ಭೂಸಮಾದಿ ಆಗಿದ್ದಾರೆ.

ಭಾರಿ ಮಳೆಯಿಂದ ಈ ಅನಾಹುತ ಸಂಭವಿಸಿದ್ದು, ಇಡೀಯ ಗುಡ್ಡವೇ ಗ್ರಾಮದ ಮೇಲೆ ಕುಸಿದ ಪರಿಣಾಮ ಹಲವು ಮಂದಿ ಭೂಸಮಾಧಿ ಆಗಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

ಮೆಪ್ಪಾಡಿಯ ಪುತ್ತುಮಲವು ವೈನಾಡಿನ ಗಡಿಭಾಗದಲ್ಲಿದ್ದು, ದೇವಸ್ಥಾನ, ಮಸೀದಿ, ಕೆಲವು ಮನೆಗಳು, ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕರ ತಾತ್ಕಾಲಿಕ ಶೆಡ್ಡುಗಳು ಎಲ್ಲವೂ ಮಣ್ಣಿನ ಅಡಿ ಮುಚ್ಚಿಹೋಗಿದೆ.

ಈ ಪ್ರದೇಶವು ರಸ್ತೆಯಿಂದ ದೂರವಿದ್ದು, ಗುಡ್ಡ ಕುಸಿದ ಭಾಗದಲ್ಲಿ ದೊಡ್ಡ ಹೊಳೆಯೊಂದು ಸೃಷ್ಠಿಯಾಗಿದ್ದು, ರಕ್ಷಣಾ ಪಡೆಗಳು ಸ್ಥಳವನ್ನು ತಲುಪಲು ಆಗದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ವೈನಾಡ್, ಕಣ್ಣೂರು ಭಾಗಗಳಿಂದ ರಕ್ಷಣಾ ಪಡೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸಲಾಗುತ್ತಿದ್ದು, ರಕ್ಷಣಾ ಕಾರ್ಯಕ್ಕೆ ಪ್ರಯತ್ನ ಮಾಡಲಾಗುತ್ತಿದೆ.

4 ಅಡಿ ನೀರು ಬಂದರೆ ಕಬಿನಿ ಭರ್ತಿ : ಹೇಗಿದೆ ಜಲಾಶಯಗಳ ಪರಿಸ್ಥಿತಿ

ಕೇರಳದ ಇಕ್ಕೋಡು, ಕುಯಿಕ್ಕೋಡು, ವೈನಾಡು ಮುಂತಾದ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ ಕೇರಳದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಏರ್ಪಟ್ಟು ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು.

English summary
Big land slide in Kerala's Meppadi near Wayanad. many people may struck under soil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X