ಕಣ್ಣೂರು ಏರ್‌ಪೋರ್ಟ್ ಆರಂಭ, ಕೇರಳಕ್ಕಿನ್ನು ಸಂಚಾರ ಸುಗಮ
ಬೆಂಗಳೂರು, ಡಿಸೆಂಬರ್ 10: ಕೇರಳದ ಕಣ್ಣೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾನ ಭಾನುವಾರ ಉದ್ಘಾಟನೆಗೊಂಡಿದೆ. ಕೇಂದ್ರ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟನೆಗೊಳಿಸಿದ್ದಾರೆ. ಕಣ್ಣೂರು ವಿಮಾನ ನಿಲ್ದಾಣವು 23 ಸಾವಿರ ಎಕರೆ ಪ್ರದೇಶದಲ್ಲಿದೆ.
ಈ ವಿಮಾನ ನಿಲ್ದಾಣದ ಉದ್ಘಾಟನೆಯೊಂದಿಗೆ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂಇದ ದೇಶದ ಏಕೈಕ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಲಿರುವುದರಿಂದ ಕಣ್ಣೂರು-ವಿರಾಜಪೇಟೆ-ಮೈಸೂರು ಸಂಪರ್ಕ ಮೇಲ್ದರ್ಜೆಗೆ ಏರಲಿದ್ದು, ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿದೆ.
ಇದೀಗ 24 ಚೆಕ್ ಇನ್ ಕೌಂಟರ್‌ಗಳಿದ್ದು, ಬೇಡಿಕೆ ಆಧರಿಸಿ 48 ಕೌಂಟರ್‌ಗಳಿಗೆ ಹೆಚ್ಚಿಸುವ ಅವಕಾಶವನ್ನು ಹೊಂದಿದೆ. ಜನವರಿಯಲ್ಲಿ 13 ವಿಮಾನಗಳ ಹಾರಾಟ ನಡೆಯಲಿದ್ದು, ವಿದೇಶಿ ಸಂಸ್ಥೆಗಳ ವಿಮಾನ ಸೇವೆ ಆರಂಭಿಸಲು ಅನುಮತಿಗಾಗಿ ಕಾಯಲಾಗುತ್ತಿದೆ

ಕಣ್ಣೂರು ಏರ್‌ಪೋರ್ಟ್‌ನಲ್ಲಿ ಕರ್ನಾಟಕದ ಸೊಬಗು
ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ನಿಲ್ದಾಣದ ಆವರಣವನ್ನು ಕೇರಳದ ಸಂಸ್ಕೃತಿಯ ಅನಾವರಣದ ಜೊತೆಗೆ ಯಕ್ಷಗಾನ ಸಂಸ್ಕೃತಿಯ ಅನಾವರಣಕ್ಕೂ ವೇದಿಕೆಯಾಗಿತ್ತು.

ಕಣ್ಣೂರು ವಿಮಾನ ನಿಲ್ದಾಣ ಕೊಡಗಿಗೆ ಹತ್ತಿರ
ಕಣ್ಣೂರು ನಗರದಿಂದ 16 ಕಿ.ಮೀ ದೂರದಲ್ಲಿ ಈ ವಿಮಾನ ನಿಲ್ದಾಣ, ಕರ್ನಾಟಕದ ಗಡಿ ಜಿಲ್ಲೆ ಕೊಡಗಿಗೆ ಅತ್ಯಂತ ಸಮೀಪದಲ್ಲಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಕೇವಲ 58 ಕಿ. ಮೀ ದೂರವಿದೆ.

ಕರ್ನಾಟಕಕ್ಕೆ ಏನು ಪ್ರಯೋಜನ?
ಕಣ್ಣೂರು ನೂತನ ವಿಮಾನ ನಿಲ್ದಾಣ ಉದ್ಘಾಟನೆ ಗೊಂಡಿದೆ. ಕರ್ನಾಟಕಕ್ಕೆ ಏನು ಪ್ರಯೋಜನ ಎಂದು ನೋಡುವುದಾದರೆ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವಾಗುವ ಸಾಧ್ಯತೆ ಇದೆ.ಈ ಜಿಲ್ಲೆಗಳಲ್ಲಿ ಬೆಳೆಯುವ ಕೃಷಿ ಹಾಗೂ ಪುಷ್ಪೋದ್ಯಮಕ್ಕೆ ವಿದೇಶದಲ್ಲಿ ಮಾರುಕಟ್ಟೆ ದೊರೆಯಲಿದೆ. ಹೆಚ್ಚಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗಿದೆ ಇಷ್ಟೇ ಅಲ್ಲದೆ ಗಡಿ ಜಿಲ್ಲೆಗಳಿಎ ಹಲವು ರೀತಿಯ ಪ್ರಯೋಜನವನ್ನು ನಾವು ನಿರೀಕ್ಷಿಸಬಹುದು.

ಮೊದಲ ಹಂತದಲ್ಲಿ ಎಲ್ಲೆಲ್ಲಿಗೆ ಪ್ರಯಾಣ
ಮೊದಲ ಹಂತದಲ್ಲಿ ವಾರಕ್ಕೆ ನಾಲ್ಕು ದಿನ ಅಬುಧಾಬಿಗೆ ವಿಮಾನ ಬೆಳಗ್ಗೆ 9 ಗಂಟೆಗೆ ಹೊರಡಲಿದ್ದು, ಅಲ್ಲಿಂದ ರಾತ್ರಿ 8.20ಕ್ಕೆ ಆಗಮಿಸಿದೆ. ಗಲ್ಫ್ ದೇಶಗಳಿಗೆ ವಿಮಾನ ಹಾರಾಟಕ್ಕೆ ಹೆಚ್ಚಿನ ಬೇಡಿಕೆ ಇದೆ. ಕೆಲವು ದಿನಗಳ ಬಳಿಕ ನಿತ್ಯ ಪಯಣ ಬೆಳೆಸಲಿದೆ. ಅಲ್ಲದೇ, ಮಸ್ಕತ್, ಕುವೈತ್, ಶಾರ್ಜಾ ಸೇರಿದಂತೆ ವಿವಿಧ ದೇಶಗಳಿಗೆ ಸಂಪರ್ಕ ಕಲ್ಪಿಸಲು ತಯಾರಿ ನಡೆಯುತ್ತಿದೆ.












Click it and Unblock the Notifications