ಒಂದು ವಾರದಲ್ಲಿ ಪ್ರತಿ ಮಿಲಿಯನ್‌ಗೆ ಅತಿ ಹೆಚ್ಚು ಕೋವಿಡ್‌ ಸಾವು ವರದಿ ಮಾಡಿದ ಕೇರಳ

ಕೊಚ್ಚಿ, ಆ.06: ದೇಶದಲ್ಲಿ ಮೊದಲು ಕೊರೊನಾ ವೈರಸ್‌ ಪ್ರಕರಣ ದಾಖಲು ಮಾಡಿದ್ದ ಕೇರಳದಲ್ಲಿ ಈಗ ಮತ್ತೆ ಕೊರೊನಾ ಉಲ್ಭಣವಾಗಿದೆ. ಕೇರಳವು ದೇಶದಲ್ಲಿ ಪ್ರತಿ ವಾರಕ್ಕೆ ಪ್ರತಿ ಮಿಲಿಯನ್‌ಗೆ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿದೆ. ಜುಲೈ 25 ಮತ್ತು 31 ರ ನಡುವೆ, ಕೇರಳವು ವಾರಕ್ಕೆ ಪ್ರತಿ ಮಿಲಿಯನ್‌ಗೆ 24 ಸಾವುಗಳನ್ನು ವರದಿ ಮಾಡಿದೆ, ಆದರೆ ಮಹಾರಾಷ್ಟ್ರವು ವಾರಕ್ಕೆ ಪ್ರತಿ ಮಿಲಿಯನ್‌ಗೆ 12 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ನಂತರ ಒಡಿಶಾ ಪ್ರತಿ ವಾರಕ್ಕೆ 9 ಸಾವುಗಳನ್ನು ಹೊಂದಿದೆ. ಭಾರತದ ಸರಾಸರಿ ವಾರಕ್ಕೆ 2 ಮಿಲಿಯನ್ ಸಾವುಗಳು ಆಗಿದೆ.

"ಕೇರಳ ರಾಜ್ಯದ ಕೊರೊನಾ ವೈರಸ್‌ ಸೋಂಕಿನಿಂದಾದ ಸಾವಿನ ಅನುಪಾತ (ಸಿಎಫ್‌ಆರ್‌) ಮೇ 15 ರಂದು 0.3% ಮತ್ತು ಇದು ಜುಲೈ 31 ರ ವೇಳೆಗೆ 0.49% ಕ್ಕೆ ಏರಿಕೆಯಾಗಿದೆ. ಆದರೆ ಕೇರಳವು ದೇಶದ ಅತ್ಯಂತ ಕಡಿಮೆ ಸಿಆರ್‌ಎಫ್‌ಗಳಲ್ಲಿ ಒಂದನ್ನು ಮುಂದುವರಿಸಿದೆ," ಎಂದು ಭಾರತದಾದ್ಯಂತ ಕೋವಿಡ್ ಪ್ರಕರಣಗಳ ಬಗ್ಗೆ ವಾರಕ್ಕೊಮ್ಮೆ ವಿಶ್ಲೇಷಿಸುವ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಪದ್ಮನಾಭ ಶೆಣೈ ಹೇಳಿದರು

ಕೋವಿಡ್‌ ಪ್ರಕರಣಗಳಲ್ಲಿ ಕೇರಳದ ಏಳು ದಿನಗಳ ಸರಾಸರಿ ದೈನಂದಿನ ಬೆಳವಣಿಗೆ ದರ 0.61% ಆಗಿದೆ. ಆದರೆ ಭಾರತದ ಸರಾಸರಿ ದೈನಂದಿನ ಬೆಳವಣಿಗೆ ದರ 0.13% ಆಗಿದೆ. ರಾಜ್ಯದ ಆರ್‌ ಮೌಲ್ಯ 1.28 ಆಗಿದೆ. ಸಾಮಾನ್ಯವಾಗಿ ಆರ್‌ ಮೌಲ್ಯ ಅಂದರೆ ಕೊರೊನಾ ಪ್ರಸರಣ ದರವು ಒಂದಕ್ಕಿಂತ ಕಡಿಮೆ ಇರಬೇಕು. ಆರ್‌ ಮೌಲ್ಯ ಕೇರಳದಲ್ಲಿ ಅಧಿಕವಾಗಿದ್ದು, ಕೇರಳ ರಾಜ್ಯದಲ್ಲಿ ಕೊರೊನಾ ಉಲ್ಬಣದಿಂದಾಗಿ ದೈನಂದಿನ ಸಕ್ರಿಯ ಪ್ರಕರಣಗಳು ಮತ್ತು ಸಾವುಗಳು ಈಗ ದೇಶದಲ್ಲಿ ಅತಿ ಹೆಚ್ಚಾಗಿದೆ.

Keralas Covid deaths per million per week highest in India

ಈ ವಾರ ಸೋಮವಾರ, ಕೇರಳವು ದೇಶದಲ್ಲಿ ಅತಿ ಹೆಚ್ಚು ಕೋವಿಡ್‌ ಸಾವುಗಳನ್ನು ವರದಿ ಮಾಡಿದೆ, ಒಟ್ಟು 420 ಸಾವುಗಳಲ್ಲಿ ಶೇ. 28 ರಷ್ಟು ಅಂದರೆ 118 ಸಾವು ಕೇರಳದಲ್ಲಿ ವರದಿಯಾಗಿದೆ. ಆದಾಗ್ಯೂ, ಮಂಗಳವಾರ, 177 ಕೋವಿಡ್‌ ಸಾವುಗಳು ಕೇರಳದಲ್ಲಿ ದಾಖಲಾಗಿದೆ. ಮಹಾರಾಷ್ಟ್ರವು ದೈನಂದಿನ ಕೋವಿಡ್‌ ಸಾವು ಸಂಖ್ಯೆಯಲ್ಲಿ ಮತ್ತೆ ಕೇರಳವನ್ನು ಹಿಂದಿಕ್ಕಿದೆ. ಕೇರಳದಲ್ಲಿ 177 ಕೋವಿಡ್‌ ಸಾವುಗಳು ವರದಿಯಾದರೆ ಮಹಾರಾಷ್ಟ್ರದಲ್ಲಿ 148 ದೈನಂದಿನ ಕೋವಿಡ್‌ ಸಾವು ವರದಿಯಾಗಿದೆ.

"ಕೇರಳದ ಕೋವಿಡ್ -19 ಮರಣ ಪ್ರಮಾಣ ಹೆಚ್ಚುತ್ತಿದೆ ಮತ್ತು ಇದು ಕಳವಳಕಾರಿಯಾಗಿದೆ. ಎರಡನೇ ಕೋವಿಡ್‌ ಅಲೆಯಲ್ಲಿ ಮರಣ ಪ್ರಮಾಣವು ಮೊದಲ ಅಲೆಗಿಂತ ದೊಡ್ಡದಾಗಿದೆ," ಎಂದು ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೋ ಎಂ ಜಾನ್ ಹೇಳಿದರು. ಕಳೆದ ಕೆಲವು ದಿನಗಳಿಂದ, ಬಹುತೇಕ ಪ್ರತಿದಿನ, ಕೇರಳವು ದೇಶದಲ್ಲಿ ಸುಮಾರು ಶೇ. 50 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡುತ್ತಿದೆ. ದೇಶಾದ್ಯಂತದ ಸಾವಿನ ಸರಾಸರಿ ದೈನಂದಿನ ಸಾವುಗಳು ಶೇ 20 ರಿಂದ ಶೇ. 25 ರಷ್ಟಿದೆ.

"ಪ್ರಕರಣಗಳು ಹೆಚ್ಚಾದಾಗ ಸಾವು ಅನಿವಾರ್ಯ. ಆದರೆ ಕೇರಳವು ತಡೆಯಬಹುದಾದ ಸಾವುಗಳನ್ನು ನಿಯಂತ್ರಿಸಲು ಸಾಧ್ಯವಾಯಿತು. ಆಮ್ಲಜನಕದ ಕೊರತೆಯಿಂದಾಗಿ, ವೆಂಟಿಲೇಟರ್, ವ್ಯಾಕ್ಸಿನೇಷನ್ ಇತ್ಯಾದಿ, ದೊಡ್ಡ ಮಟ್ಟಿಗೆ ಪ್ರಭಾವ ಬೀರಿದೆ," ಎಂದು ಕೇರಳದಲ್ಲಿ ಕೋವಿಡ್ ಸ್ಥಿತಿಗತಿಯನ್ನು ವಿಶ್ಲೇಷಿಸುತ್ತಿರುವ ಆಂತರಿಕ ಔಷಧ ತಜ್ಞ ಡಾ. ಅರುಣ್‌ ಎನ್‌ ಎಮ್‌ ಹೇಳಿದ್ದಾರೆ.

ಕೇರಳವು ಭಾರತದ ಒಟ್ಟು ಪ್ರಕರಣಗಳಲ್ಲಿ ಶೇ. 50 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುವುದನ್ನು ಮುಂದುವರೆಸಿದೆ. ಇತರ ರಾಜ್ಯಗಳಲ್ಲಿ ಸೋಂಕುಗಳಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಕೇರಳ ರಾಜ್ಯವು ಈ ವಾರ ಮೂರನೇ ದಿನಕ್ಕೆ 22,000 ಕ್ಕಿಂತ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಆದರೆ ತಮಿಳುನಾಡು ಮತ್ತು ಹಿಮಾಚಲ ಪ್ರದೇಶವು ಕೂಡಾ ಕೋವಿಡ್‌ ಸೋಂಕು ಹೆಚ್ಚಾಗುವ ಲಕ್ಷಣಗಳನ್ನು ತೋರಿಸುತ್ತಲೇ ಇದೆ. ತಮಿಳುನಾಡು ಗುರುವಾರ 1,997 ಹೊಸ ಕೋವಿಡ್‌ ಸೋಂಕು ಪ್ರಕರಣಗಳನ್ನು ವರದಿ ಮಾಡಿದೆ. ಇದು ಜುಲೈ 18 ರ ನಂತರದ ಗರಿಷ್ಠ ದೈನಂದಿನ ಪ್ರಮಾಣವಾಗಿದೆ. ಹಿಮಾಚಲ ಪ್ರದೇಶದಲ್ಲಿ, 256 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇದು 43 ದಿನಗಳಲ್ಲಿ ಅತಿ ಹೆಚ್ಚಾಗಿದೆ. ಬಂಗಾಳವು ಗುರುವಾರ 812 ಪ್ರಕರಣಗಳನ್ನು ದಾಖಲಿಸಿದ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಗೆ ಸಾಕ್ಷಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+