ಕೇರಳದಲ್ಲಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗೆ ಚೂರಿ ಇರಿತ: ನಾಲ್ವರ ಬಂಧನ
ತಿರುವನಂತಪುರಂ, ಜುಲೈ 15: ಕಾಲೇಜು ಆವರಣದಲ್ಲೇ ಅಂತಿಮ ವರ್ಷದ ವಿದ್ಯಾರ್ಥಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಂನಲ್ಲಿರುವ ಯೂನಿವರ್ಸಿಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಈ ಘಟನೆ ನಡೆದಿತ್ತು, ಅಂತಿಮ ವರ್ಷದ ವಿದ್ಯಾರ್ಥಿಗೆ ನಾಲ್ವರು ವಿದ್ಯಾರ್ಥಿಗಳಿದ್ದ ಗುಂಪೊಂದು ಹಲ್ಲೆ ನಡೆಸಿ ಚೂರಿ ಇರಿಯಲಾಗಿತ್ತು.
ಸೋಮವಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದಲ್ಲಿರುವ ವಿದ್ಯಾರ್ಥಿಗಳು ಎಸ್‌ಎಫ್‌ಐ ಹಾಗೂ ಸಿಪಿಎಂನ ಯೂತ್ ವಿಂಗ್‌ನಲ್ಲಿ ಇದ್ದವರು ಎಂದು ತಿಳಿದುಬಂದಿದೆ.

ಅಖಿಲ್ ಅಂತಿಮ ವರ್ಷದ ಬಿಎ ವಿದ್ಯಾರ್ಥಿಯಾಗಿದ್ದು, ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿಯಾಗಿದ್ದಾನೆ.
ವಿದ್ಯಾರ್ಥಿಗಳು ಹಾಡುತ್ತಿದ್ದಾಗ ಎಸ್‌ಎಫ್‌ಐ ಯೂನಿಯನ್ ಕಮಿಟಿ ಸದಸ್ಯರು ಬಂದು ಹಾಡದಂತೆ ತಡೆದಿದ್ದರು, ಇದರಿಂದ ಜಗಳ ಆರಂಭವಾಗಿತ್ತು. ಈ ಘಟೆಯಲ್ಲಿ ಅಖಿಲ್‌ಗೆ ಚಾಕುವಿನಿಂದ ಎದೆಗೆ ಇರಿಯಲಾಗಿದೆ. ಎಸ್‌ಎಫ್‌ಐ ಸದಸ್ಯರು ಕಾಲೇಜು ಗೇಟನ್ನು ಕ್ಲೋಸ್ ಮಾಡಿದ್ದರು.












Click it and Unblock the Notifications