12 ಕೋಟಿ ಲಾಟರಿ ಗೆದ್ದ ಗುಮಾಸ್ತ, ಇದಪ್ಪಾ ಅದೃಷ್ಟ..!
ತಿರುವನಂತಪುರಂ, ಸೆ. 21: ದೇವಸ್ಥಾನದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಇಡುಕ್ಕಿ ಮೂಲದ ವ್ಯಕ್ತಿ ಬರೋಬ್ಬರಿ 12 ಕೋಟಿ ಲಾಟರಿ ಗೆದ್ದಿದ್ದಾನೆ. 12 ಕೋಟಿ ಗೆದ್ದ ಯುವಕನನ್ನು 24 ವರ್ಷದ ಅನಂತು ವಿಜಯನ್ ಎಂದು ಗುರುತಿಸಲಾಗಿದೆ. ತೆರಿಗೆ ಎಲ್ಲಾ ಕಡಿತಗೊಂಡು 7.56 ಕೋಟಿ ರು ಅಂತೂ ವಿಜಯನ್ ಕೈಸೇರಲಿದೆ.
ಕಾಕತಾಳೀಯ ಎಂದರೆ, ಲಾಟರಿ ಬಹುಮಾನ ಘೋಷಣೆಗೂ ಕೆಲವೇ ಗಂಟೆಗಳ ಹಿಂದಷ್ಟೇ ಸ್ನೇಹಿತರ ಜೊತೆ ಮಾತನಾಡಿದ್ದ ಅನಂತು ವಿಜಯನ್, ಈ ಬಾರಿ ಪ್ರಥಮ ಬಹುಮಾನ ಗೆಲ್ಲುವುದಾಗಿ ತಮಾಷೆ ಮಾಡಿದ್ದ. ಆದರೆ ಈ ತಮಾಷೆ ನಿಜವಾಗಲಿದೆ, ತನ್ನ ಬದುಕು ಬದಲಾಗಲಿದೆ, ತನ್ನ ಬಳಿ ಇರುವ ಲಾಟರಿ ಟಿಕೆಟ್ ತನ್ನ ಜೀವನವನ್ನೇ ಬದಲಾಯಿಸಲಿದೆ ಅನ್ನೋದು ಅನಂತು ವಿಜಯನ್‌ಗೆ ತಿಳಿದಿರಲಿಲ್ಲ.
ಲಾಟರಿ ಟಿಕೆಟ್ ಹಿಡಿದು, ರಿಸಲ್ಟ್ ನೋಡಿದಾಗ ಅನಂತು ವಿಜಯನ್ ಎದೆಬಡಿತ ಕೆಲಕಾಲ ನಿಂತು ಹೋಗಿತ್ತು. ಏಕೆಂದರೆ ಅನಂತು ವಿಜಯನ್ 12 ಕೋಟಿ ರು ಬಹುಮಾನ ಗೆದ್ದಿರುವುದು ಕನ್ಫರ್ಮ್ ಆಗಿತ್ತು. ಇದನ್ನು ಕಂಡು ಆತ ಆಘಾತಕ್ಕೆ ಒಳಗಾಗಿದ್ದನಂತೆ, ಪದೇ ಪದೆ ಲಾಟರಿ ನಂಬರ್ ಪರಿಶೀಲನೆ ಮಾಡಿ ಆತ ಕನ್ಫರ್ಮ್ ಮಾಡಿಕೊಂಡಿದ್ದಾನೆ.

ರಾತ್ರಿ ಪೂರ್ತಿ ನಿದ್ದೆ ಇಲ್ಲ..!
ಸೋರುತ್ತಿರುವ ಮನೆ, ಕಿತ್ತು ಹೋದ ಮಾಳಿಗೆ, ಇನ್ನೇನು ಬಿದ್ದು ಹೋಗುವ ಹಂತದಲ್ಲಿರುವ ಸೂರು ಅನಂತು ಮತ್ತು ಆತನ ಕುಟುಂಬವನ್ನ ಕಂಗಾಲಾಗಿಸಿತ್ತು. ಕೇರಳದ ಇಡುಕ್ಕಿಯಲ್ಲಿ ಬಡತನದಲ್ಲೇ ನರಳುತ್ತಿದ್ದ ಅನಂತು ಕುಟುಂಬಕ್ಕೆ ಮನೆ ರಿಪೇರಿ ಮಾಡಿಸಲು ಕೂಡ ಹಣವಿರಲಿಲ್ಲ. ಎರ್ನಾಕುಲಂನ ಕಡವಂತ್ರಾದ ಪೊನ್ನೆತ್ ದೇಗುಲದಲ್ಲಿ ಅನಂತು ಕ್ಲರ್ಕ್ ಆಗಿದ್ದಾರೆ.
ಆದರೆ ಯಾವಾಗ 'ತಿರುಓಣಂ ಬಂಪರ್' ಲಾಟರಿ ರಿಸಲ್ಟ್ ಹೊರಬಿತ್ತೋ, ಆಗ ಅನಂತು ವಿಜಯನ್ ಗಲಿಬಿಲಿಗೊಂಡಿದ್ದ. ಏಕೆಂದರೆ ಆತ ದಿಢೀರ್ ಕೋಟ್ಯಾಧಿಪತಿ ಆಗಿದ್ದ. ಅಷ್ಟೇ ಅಲ್ಲ ರಾತ್ರಿ ಪೂರ್ತಿ ನಿದ್ದೆಯನ್ನೇ ಮಾಡಿಲ್ಲವಂತೆ. ಒಂದುಕಡೆ ತನ್ನ ಮನೆಯ ಕಷ್ಟಗಳೆಲ್ಲಾ ಬಗೆಹರಿದವು ಎಂಬ ಸಮಾಧಾನ, ಮತ್ತೊಂದ್ಕಡೆ ಕೋಟ್ಯಾಧಿಪತಿ ಆದೆನಲ್ಲಾ ಎಂಬ ಖುಷಿ ಅನಂತುಗೆ ನಿದ್ದೆ ಮಾಡಲು ಬಿಟ್ಟಿರಲಿಲ್ಲ.
ಅಪ್ಪನಿಗೆ ಒಲಿಯದ ಅದೃಷ್ಟ, ಮಗನಿಗೆ ಒಲಿಯಿತು..!
Recommended Video
ಅನಂತು ವಿಜಯನ್ ಕೊಂಡುಕೊಂಡಿದ್ದ 'ತಿರುಓಣಂ ಬಂಪರ್' ಲಾಟರಿ ಟಿಕೆಟ್ (BR 75 TB 173964) ಅನ್ನೇ ಅವರ ತಂದೆ ಕೂಡ ಖರೀದಿ ಮಾಡಿದ್ದರು. ಆದರೆ ಮಗನಿಗೆ ಒಲಿದ ಅದೃಷ್ಟ ಅಪ್ಪನಿಗೆ ಒಲಿದಿರಲಿಲ್ಲ. ಮಗ ಕೋಟಿ ಗೆದ್ದರೆ, ಅಪ್ಪನಿಗೆ ನಯಾಪೈಸೆ ಬಂದಿಲ್ಲ. ಆದರೂ ಅಪ್ಪ ನೊಂದುಕೊಂಡಿಲ್ಲ, ಮಗ ಗೆದ್ದ ಖುಷಿಯಲ್ಲಿ ಇಡೀ ಕುಟುಂಬ ಕುಣಿದಾಡಿ ಸಂಭ್ರಮಿಸಿದೆ. ಅನಂತುಗೆ ಇಬ್ಬರು ಸಹೋದರಿಯರು. ಆದರೆ ಕೊರೊನಾ ಪರಿಣಾಮ ಇತ್ತೀಚೆಗೆ ಅನಂತು ಅಕ್ಕ ಕೆಲಸ ಕಳೆದುಕೊಂಡಿದ್ದರು. ಇದರಿಂದ ಅನಂತು ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಈಗ ಎಲ್ಲಾ ಸಂಕಷ್ಟಗಳು ಬಗೆಹರಿದಿದ್ದು, ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ.












Click it and Unblock the Notifications