ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಕೆರಳಿದ ಮಳೆ: ಅರಣ್ಯದಲ್ಲಿ ಸಿಲುಕಿದ್ದ 3 ಗರ್ಭಿಣಿಯರ ರಕ್ಷಣೆ

|
Google Oneindia Kannada News

ತಿರುವನಂತಪುರಂ ಆಗಸ್ಟ್ 6: ಕೇರಳದ ದಕ್ಷಿಣ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯ ನಡುವೆ, ಮಳೆಯ ಸಮಯದಲ್ಲಿ ಕಾಡಿನಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ಶುಕ್ರವಾರ (ಆಗಸ್ಟ್ 5) ಅಧಿಕಾರಿಗಳು ರಕ್ಷಿಸಿದ್ದಾರೆ. ಭಾರೀ ಮಳೆಯ ಸಂದರ್ಭದಲ್ಲಿ ಮಹಿಳೆಯರು ಕಾಡಿನ ಮಧ್ಯೆ ಸಿಲುಕಿದ್ದು, ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸರ ನೆರವಿನಿಂದ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರಿಂದ ಮೂವರಲ್ಲಿ ಒಬ್ಬರು ಕಾಡಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಇಬ್ಬರು ತಾಯಂದಿರು ಆರು ಮತ್ತು ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ತಂಡ ಮೂವರಿಗೆ ಮನವರಿಕೆ ಮಾಡಿಕೊಟ್ಟು ನಂತರ ಚಾಲಕುಡಿ ತಾಲೂಕು ಆಸ್ಪತ್ರೆಗೆ ರವಾನಿಸಿದರು.

ತಂಡವು ಫ್ಲಾಟ್ ಬೋಟ್ ಬಳಸಿ ಅವರನ್ನು ರಕ್ಷಿಸಿತು ಮತ್ತು ಪೆರಿಂಗಲ್ಕುತ್ ಜಲಾಶಯದಲ್ಲಿ ಎರಡು ಕಿಲೋಮೀಟರ್ ಸಾಹಸದ ಮೂಲಕ ಕ್ರಮಿಸಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಘಟನೆಯನ್ನು ಗಮನಿಸಿ ಗರ್ಭಿಣಿಯರನ್ನು ರಕ್ಷಿಸಿದ ತಂಡವನ್ನು ಅಭಿನಂದಿಸಿದ್ದಾರೆ. ಹಿಂದಿನ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಜಲ ಪ್ರಾಧಿಕಾರವು ಶುಕ್ರವಾರ ಮಲಂಪುಳ ಅಣೆಕಟ್ಟಿನ ನಾಲ್ಕು ಶೆಟರ್‌ಗಳನ್ನು ತೆರೆದು ಎಚ್ಚರಿಕೆಯನ್ನು ನೀಡಿದೆ.

ಐಎಂಡಿ ಎಚ್ಚರಿಕೆ

ಐಎಂಡಿ ಎಚ್ಚರಿಕೆ

ಭಾರತೀಯ ಹವಾಮಾನ ಇಲಾಖೆ (IMD) ಆಗಸ್ಟ್ 4 ರಿಂದ 8 ರವರೆಗೆ ಕೇರಳದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ ಮತ್ತು ರಾಜ್ಯವು ತನ್ನ ಘಟ್ಟ ಪ್ರದೇಶಗಳಲ್ಲಿ ಪ್ರತ್ಯೇಕವಾದ ಅತ್ಯಂತ ಭಾರೀ ಮಳೆಯನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದೆ.

ನಿರಂತರ ಮಳೆಯಿಂದಾಗಿ ಕೊಟ್ಟಾಯಂ ಮತ್ತು ಪತ್ತನಂತಿಟ್ಟದಾದ್ಯಂತ ಎಲ್ಲಾ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರುತ್ತಿದೆ. ಹೀಗಾಗಿ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈವರೆಗೆ ರಾಜ್ಯಾದ್ಯಂತ 2,000 ಕ್ಕೂ ಹೆಚ್ಚು ಜನರು ಪರಿಹಾರ ಶಿಬಿರಗಳಲ್ಲಿದ್ದಾರೆ. ಭಾರೀ ಮಳೆಗೆ ಕೇರಳದಲ್ಲಿ ಇದುವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ

ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ

ಆಗಸ್ಟ್ 4 ರಂದು, ಶೋಲಾಯಾರ್ ಮತ್ತು ಪೆರಿಂಗಲ್ಕುತ್ತು ಅಣೆಕಟ್ಟುಗಳ ಶೆಟರ್ಗಳನ್ನು ಮೇಲಕ್ಕೆತ್ತಲಾಗಿದ್ದು, ಚಲಕುಡಿ ನದಿ ಉಕ್ಕಿ ಹರಿಯುತ್ತಿದೆ. ಇಂದು ಸಂಜೆಯ ವೇಳೆಗೆ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಚಾಲಕುಡಿ ನದಿಯ ದಡದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒತ್ತಾಯಿಸಿದ್ದಾರೆ. ತ್ರಿಶೂರ್ ಮತ್ತು ಎರ್ನಾಕುಲಂ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಜಾಗರೂಕರಾಗಿರಿ ಎಂದು ಅವರು ಹೇಳಿದ್ದಾರೆ. ಮಳೆಯಿಂದಾಗಿ ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

NDRF ತಂಡಗಳ ನಿಯೋಜನೆ

NDRF ತಂಡಗಳ ನಿಯೋಜನೆ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ತಂಡಗಳನ್ನು ರಾಜ್ಯದಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ವಾಯು ಮತ್ತು ನೌಕಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜುಲೈ ತಿಂಗಳ ಆರಂಭದಲ್ಲಿ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕಾಸರಗೋಡಿನ ನದಿಗಳು ತುಂಬಿ ಹರಿಯುತ್ತಿವೆ. ಕಣ್ಣೂರಿನಲ್ಲಿ ಮಳೆ ನೀರು ನುಗ್ಗಿದ್ದರಿಂದ ಹಲವಾರು ಮನೆಗಳು ಕುಸಿದು ಭಾಗಶಃ ಹಾನಿಗೀಡಾಗಿವೆ. ಅತಿವೃಷ್ಟಿಯಿಂದಾಗಿ ಒಂದು ಕುಟುಂಬವನ್ನು ಪಯನ್ನೂರು ಪುರಸಭೆಯಿಂದ ಸ್ಥಳಾಂತರಿಸಬೇಕಾಯಿತು.

ಉಕ್ಕಿ ಹರಿಯುತ್ತಿರುವ ನದಿ ನೀರು

ಉಕ್ಕಿ ಹರಿಯುತ್ತಿರುವ ನದಿ ನೀರು

ಕಡಲುಂಡಿ (ಮಲಪುರಂ), ಭರತಪುಳ (ಪಾಲಕ್ಕಾಡ್), ಶಿರಿಯಾ (ಕಾಸರಗೋಡು), ಕರವನ್ನೂರ್ (ತ್ರಿಶೂರ್) ಮತ್ತು ಗಾಯತ್ರಿಪುಳ (ತ್ರಿಶೂರ್) ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟವನ್ನು ತಲುಪಿದೆ. ಮುಕ್ಕೈಪುಳ, ಕಲ್ಪತಿಪುಳ ಮತ್ತು ಭರತಪುಳ ನದಿಗಳ ತೀರದಲ್ಲಿ ವಾಸಿಸುತ್ತಿರುವ ಜನರಿಕೆ ಎಚ್ಚರಿಕೆ ನೀಡಲಾಗಿದೆ. ನಿಯಮದ ಪ್ರಕಾರ, ಅಣೆಕಟ್ಟಿನ ಸಾಮರ್ಥ್ಯ 112.99 ಮೀಟರ್. ಸದ್ಯ ಪರಿಸ್ಥಿತಿ ಆತಂಕಕಾರಿಯಾಗಿಲ್ಲ ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಶೆಟರ್‌ಗಳನ್ನು ತೆರೆಯಲಾಗಿದೆ. ಹೀಗಾಗಿ ನದಿ ದಡದಲ್ಲಿ ವಾಸಿಸುವ ಜನರಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಥಳಾಂತರಿಸುವಂತೆ ರಕ್ಷಣಾ ಪಡೆಗಳಿಗೆ ಒತ್ತಾಯಿಸಿದ್ದಾರೆ.

English summary
Amid heavy rains in various parts of the southern state of Kerala, authorities rescued three pregnant women who were trapped in the forest during the rains on Friday (August 5).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X