ಕಾಶ್ಮೀರ ಇಲ್ಲದ ಭಾರತ ಭೂಪಟ ಹಂಚಿದ ಕೇರಳದ ಶಾಸಕಿ
ತಿರುವನಂತಪುರಂ, ಆ. 17: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜನತೆಗೆ ಶುಭ ಕೋರುವಾಗ ಕೇರಳದ ಶಾಸಕಿಯೊಬ್ಬರು ಮಾಡಿದ ಪ್ರಮಾದ ಈಗ ತೊಂದರೆಗೆ ಸಿಲುಕಿದೆ. ಕಾಶ್ಮೀರ ಇಲ್ಲದ ಭಾರತದ ಭೂಪಟದ ಚಿತ್ರ ಹಂಚಿಕೊಂಡ ಶಾಸಕಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಅರೂರ್ ಯುಡಿಎಫ್ ಶಾಸಕಿ ಶನಿಮೋಲ್ ಉಸ್ಮಾನ್ ಅವರು ಶುಭಕೋರಿದ ಸಂದೇಶದ ಜೊತೆಗೆ ಕಾಶ್ಮೀರ ಇಲ್ಲದ ಭಾರತದ ನಕ್ಷೆಯನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಖಂಡಿಸಿ ಶಾಸಕಿ ವಿರುದ್ಧ ಆಳಪ್ಪುಳದಲ್ಲಿ ದೂರು ದಾಖಲಾಗಿದೆ.
ಅರೂರ್ನ ಸಿಪಿಐ (ಎಂ) ಘಟಕದ ಸದಸ್ಯರು ಯುಡಿಎಫ್ ಶಾಸಕಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠ ಪಿಎಸ್ ಸಾಬು, ''ಶಾಸಕಿ ವಿರುದ್ಧ ದೂರು ಸ್ವೀಕರಿಸಿದ್ದು, ಪ್ರಕರಣದ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ'' ಎಂದಿದ್ದಾರೆ.

ಸಾಂವಿಧಾನಿಕವಾಗಿ ಸ್ವೀಕರಿಸಿರುವ ಪ್ರಮಾಣವನ್ನು ಉಲ್ಲಂಘಿಸಿ ಕಾಶ್ಮೀರ ಭಾಗವಿಲ್ಲದ ಭಾರತದ ನಕ್ಷೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಉಸ್ಮಾನ್ ಅವರು ಅಪರಾಧ ಎಸಗಿದ್ದಾರೆ ಎಂದು ಸಿಪಿಐ (ಎಂ) ತನ್ನ ದೂರಿನಲ್ಲಿ ಹೇಳಿದೆ.
ಕ್ಷಮೆಯಾಚನೆ: ಶಾಸಕಿಯ ಫೇಸ್‌ಬುಕ್ ಪೇಜ್ ನಿರ್ವಾಹಕರು, ಕಾಶ್ಮೀರವಿಲ್ಲದ ನಕ್ಷೆಯನ್ನು ತಪ್ಪಾಗಿ ಹಾಕಲಾಗಿತ್ತು. ಈ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ನಕ್ಷೆ ತೆಗೆದುಹಾಕಲಾಗಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ಪ್ರಮಾದವಲ್ಲ ಎಂದು ಕ್ಷಮೆಯಾಚಿಸಿದ್ದಾರೆ.
ವಿಕಿಪೀಡಿಯಾದಲ್ಲಿದ್ದ ನಕ್ಷೆಯನ್ನು ಪರಿಶೀಲಿಸದೆ ಹಾಗೆ ಬಳಸಲಾಗಿತ್ತು. ಚಿತ್ರವನ್ನು ನಕಲಿಸಿ, ಅಂಟಿಸುವಾಗ ಕಾಶ್ಮೀರ ಭಾಗ ಮಾಯವಾಗಿದೆ. ಇದರ ಅರಿವಾಗದೆ ಪೋಸ್ಟ್ ಮಾಡಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ಎಸಗಿದ ತಪ್ಪಲ್ಲ ಎಂದು ಫೇಸ್ಬುಕ್ ಪುಟದಲ್ಲಿ ಸಮಜಾಯಿಷಿ ನೀಡಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications