ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡನೋಡುತ್ತಿದ್ದಂತೆಯೇ ಧರೆಗುರುಳಿದ ಎರಡು ಐಷಾರಾಮಿ ಅಪಾರ್ಟ್‌ಮೆಂಟ್‌ಗಳು

|
Google Oneindia Kannada News

ಕೊಚ್ಚಿ, ಜನವರಿ 11: ತಮ್ಮದೊಂದು ಸ್ವಂತ ಮನೆ ಇರಬೇಕು ಎಂಬ ಆಸೆಯಿಂದ ಜೀವಮಾನವಿಡೀ ದುಡಿದ ಹಣವನ್ನು ಕೂಡಿಟ್ಟು, ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿ ಖುಷಿಪಟ್ಟಿದ್ದ ಜನರಿಗೆ ಆಘಾತ ಎದುರಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಸ್ವಂತ ಮನೆ ಹೊಂದಿದ್ದವರು ತಮ್ಮ ಕಣ್ಣೆದುರೇ ಅದು ದೂಳಿನ ಕಣಗಳಾಗಿ ಪುಡಿಯಾದ ದುರಂತ ಕಂಡು ಕಣ್ಣೀರಿಟ್ಟರು. ಅಷ್ಟೊಂದು ಹಣವನ್ನು ಸುರಿಯುವಾಗ ಅವರು ತಾವು ಕೊಳ್ಳುತ್ತಿರುವುದು ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಅರಿವಿರಲಿಲ್ಲ. ಮುಂದೊಂದು ದಿನ ತಮ್ಮ ಶ್ರಮದ ಹಣವೆಲ್ಲ ಹೀಗೆ ಮಣ್ಣಾಗಲಿದೆ ಎಂಬ ಕಲ್ಪನೆಯೂ ಇರಲಿಲ್ಲ.

ಸ್ವಂತ ಮನೆಯ ಕನಸಿನ ಜತೆಗೆ ದುಡಿಮೆಯ ಹಣವನ್ನು ಕಳೆದುಕೊಂಡು ಬೀದಿಗೆ ಬಂದವರ ಗೋಳು ಒಂದೆಡೆಯಾದರೆ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಅನಿವಾರ್ಯತೆಯಲ್ಲಿ ಸರ್ಕಾರವಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಕೊಡಿಸುವ ಸೋಗಿನಲ್ಲಿ 20 ಕೋಟಿ ವಂಚನೆಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಕೊಡಿಸುವ ಸೋಗಿನಲ್ಲಿ 20 ಕೋಟಿ ವಂಚನೆ

ಕೇರಳದ ಕೊಚ್ಚಿಯ ಮರಡುದಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿದ್ದ ಅಪಾರ್ಟ್‌ಮೆಂಟ್‌ಗಳಿಗೆ ಕಂಟಕ ಎದುರಾಗಿದೆ. ಕೆರೆಗಳನ್ನು ಮುಚ್ಚಿ ಅಥವಾ ಕೆರೆ ದಂಡೆಯಲ್ಲಿ, ಅಕ್ರಮವಾಗಿ ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಶನಿವಾರ ಚಾಲನೆ ನೀಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ನಾಲ್ಕು ತಿಂಗಳ ಬಳಿಕ ಈ ಕಾರ್ಯ ಶುರುಮಾಡಲಾಗಿದೆ.

ಎರಡು ದಿನಗಳ ಕಾರ್ಯಾಚರಣೆ

ಎರಡು ದಿನಗಳ ಕಾರ್ಯಾಚರಣೆ

ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ನಿರ್ಮಿಸಲಾಗಿದ್ದ ಗಗನಚುಂಬಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಅದರಂತೆ ಕೊಚ್ಚಿಯ ಮರಡುದಲ್ಲಿ ಕೆರೆಯ ಸಮೀಪ ನಿರ್ಮಿಸಲಾಗಿದ್ದ ನಾಲ್ಕು ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಉರುಳಿಸುವ ಎರಡು ದಿನಗಳ ಕಾರ್ಯಾಚರಣೆಯನ್ನು ಬೆಳಿಗ್ಗೆ 11 ಗಂಟೆಗೆ ಆರಂಭಿಸಲಾಯಿತು.

800 ಕೆಜಿ ತೂಕದ ಸ್ಫೋಟಕ

800 ಕೆಜಿ ತೂಕದ ಸ್ಫೋಟಕ

ಶನಿವಾರ ಎರಡು ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಇನ್ನೆರಡು ಕಟ್ಟಡಗಳನ್ನು ಭಾನುವಾರ ಉರುಳಿಸಲಾಗುತ್ತದೆ. ಕಟ್ಟಡಗಳನ್ನು ಏಕಾಏಕಿ ಉರುಳಿಸಲು ಮತ್ತು ಅದರ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಹರಡಂತೆ ನೋಡಿಕೊಳ್ಳಲು 800 ಕೆಜಿ ತೂಕದ ಸ್ಫೋಟಕಗಳನ್ನು ಬಳಸಿ ಒಳಸ್ಫೋಟದ ಮೂಲಕ ನೆಲಸಮ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಕಟ್ಟಡಗಳ ತೆರವಿನಿಂದ ಸುಮಾರು 70,000 ಟನ್ ಅವಶೇಷ ಸಿಗಲಿದ್ದು, ಅದನ್ನು ಖಾಲಿ ಮಾಡಲು ಕನಿಷ್ಠ 60 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಶೇ.50ರಷ್ಟು ಕುಸಿತಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಶೇ.50ರಷ್ಟು ಕುಸಿತ

ಸಂಚಾರಕ್ಕೆ ನಿರ್ಬಂಧ

ಕಟ್ಟಡ ತೆರವು ಪ್ರಕ್ರಿಯೆಗೆ ಭಾರಿ ಸಿದ್ಧತೆ ನಡೆಸಲಾಗಿತ್ತು. 60 ಮೀಟರ್ ಎತ್ತರದ 18 ಮಹಡಿಗಳ ಹೋಲಿ ಫೈಥ್ ಎಚ್ 20 ಎಂಬ ಹೆಸರಿನ ಐಷಾರಾಮಿ ಕಟ್ಟಡ ಮೊದಲು ಕೆಲವೇ ಸೆಕೆಂಡುಗಳಲ್ಲಿ ಪುಡಿಪುಡಿಯಾಯಿತು. ಅದರ ಬಳಿಕ ಮತ್ತೊಂದು ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ಉರುಳಿಸಲಾಯಿತು.

ಕಟ್ಟಡ ತೆರವು ಕಾರ್ಯಾಚರಣೆಯ ಸಲುವಾಗಿ ಮರಡು ಪ್ರದೇಶದ ಈ ಕಟ್ಟಡಗಳ ಸುತ್ತಮುತ್ತ ಸಂಜೆ 4 ಗಂಟೆಯವರೆಗೂ ಜನರು ಗುಂಪುಗೂಡಿ ನಿಲ್ಲುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಈ ಭಾಗದಲ್ಲಿ ವಾಯು, ಜಲ ಮತ್ತು ರಸ್ತೆ ಸಾರಿಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬೇರೆ ಕಡೆ ತಾತ್ಕಾಲಿಕ ಆಶ್ರಯ

ತೆರವು ಪ್ರದೇಶದಮನೆಗಳ ಜನರು ಮನೆಯಿಂದ ಹೊರಹೋಗುವಾಗ ಎಲ್ಲ ವಿದ್ಯುತ್ ಸ್ವಿಚ್‌ಗಳನ್ನು ಬಂದ್ ಮಾಡಿರುವಂತೆ ಸೂಚನೆ ನೀಡಲಾಗಿತ್ತು. ಹಾಗೆಯೇ ಕಾರ್ಯಾಚರಣೆಯಿಂದ ಮನೆಯೊಳಗೆ ದೂಳು ಹಾಗೂ ಅವಶೇಷಗಳು ತುಂಬಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿತ್ತು. ಈ ಪ್ರದೇಶಗಳ ನಿವಾಸಿಗಳಿಗೆ ತಾತ್ಕಾಲಿಕವಾಗಿ ಬೇರೆ ಕಡೆ ಆಶ್ರಯ ವ್ಯವಸ್ಥೆ ಕಲ್ಪಿಸಲಾಗಿದೆ.

ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳು ಹೊರಹೋದ ಬಳಿಕ ಕಟ್ಟಡಗಳ ಎಲ್ಲ ಕಿಟಕಿ ಬಾಗಿಲುಗಳನ್ನು ಅಧಿಕಾರಿಗಳು ಮೊದಲು ತೆರವುಗೊಳಿಸಿದ್ದರು.

ತಲಾ 25 ಲಕ್ಷ ರೂ ಪರಿಹಾರ

ತಲಾ 25 ಲಕ್ಷ ರೂ ಪರಿಹಾರ

ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿ ಮರಡುದಲ್ಲಿ ನಿರ್ಮಿಸಲಾಗಿದ್ದ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ಇದಕ್ಕಾಗಿ ಕೇರಳ ಸರ್ಕಾರಕ್ಕೆ 138 ದಿನಗಳ ಗಡುವು ನೀಡಿತ್ತು. ಈ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ,

ಉಳಿದೆರಡು ಅಪಾರ್ಟ್‌ಮೆಂಟ್ ಭಾನುವಾರ

ಉಳಿದೆರಡು ಅಪಾರ್ಟ್‌ಮೆಂಟ್ ಭಾನುವಾರ

ಶನಿವಾರ ಉರುಳಿಸಲಾದ 18 ಮಹಡಿಗಳ ಎಚ್‌20 ಹೋಲಿಫೈಥ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ 90 ಫ್ಲ್ಯಾಟ್‌ಗಳಿದ್ದರೆ, ಅಲ್ಫಾ ಸೆರೆನ್ ಕಾಂಪ್ಲೆಕ್ಸ್‌ನಲ್ಲಿ 73 ಫ್ಲ್ಯಾಟ್‌ಗಳಿದ್ದವು. 17 ಮಹಡಿಯ ಜೈನ್ ಕೋರಲ್ ಕೋವ್ ಹಾಗೂ ಗೋಲ್ಡನ್ ಕಾಯಲೋರಮ್ ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ಭಾನುವಾರ ಕೆಡವಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Kerala Authorities has began the demolition of four illegal apartments in Kochi's Maradu area on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X