ಕೇರಳದ ಮಸೀದಿಯಲ್ಲಿ ಹಿಂದೂ ಜೋಡಿಗೆ ಕೂಡಿಬಂತು ಕಂಕಣಭಾಗ್ಯ!
Recommended Video
ತಿರುವನಂತಪುರಂ, ಜನವರಿ.19: ಜಾತಿಯತೆ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕಂಕಣಭಾಗ್ಯ ಕೂಡಿ ಬಂದ ಹಿಂದೂ ಜೋಡಿಗೆ ಮಸೀದಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರವೇ ವಿವಾಹ ನೆರವೇರಿಸಲಾಗಿದೆ.
ಇಂಥದೊಂದು ಘಟನೆ ಕಯಂಕುಲಂನ ಅಲಪ್ಪುಜಾದಲ್ಲಿರುವ ಚೆರುವಾಲಿ ಮುಸ್ಲಿಂ ಮಸೀದಿಯಲ್ಲಿ ನಡೆದಿದೆ. ಸದಾಶಿವ ಸಸಿ, ಮಿನಿ ಸಸಿ ಎಂಬುವವರ ಪುತ್ರ ಸರತ್ ಸಸಿ ಹಾಗೂ ಅಂಜು ಅಶೋಕ್ ಕುಮಾರ್ ಮುಸ್ಲಿಂರ ಪವಿತ್ರ ಮಸೀದಿಯಲ್ಲಿ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಬದುಕಿಗೆ ಕಾಲಿರಿಸಿದರು. ಮಾಂಗಲ್ಯಧಾರಣೆ ಬಳಿಕ ನವಜೋಡಿಗಳು ಮಸೀದಿಯ ಮುಖ್ಯಸ್ಥ ಇಮಾಮ್ ರಿಯಾಜುದ್ದೀನ್ ಫೈಜಿ ಆಶೀರ್ವಾದವನ್ನು ಪಡೆದರು.
ರಾಜ್ಯ ಸರ್ಕಾರದಿಂದ ಸಪ್ತಪದಿ ಕಾರ್ಯಕ್ರಮ: ವಿಶೇಷತೆ ಏನು?
ಇನ್ನು, ತಂದೆಯನ್ನು ಕಳೆದುಕೊಂಡ ಅಂಜು ಅಶೋಕ್ ಕುಮಾರ್ ಮದುವೆಯ ಜವಾಬ್ದಾರಿಯನ್ನು ತಾಯಿಯೇ ಹೊತ್ತುಕೊಂಡಿದ್ದರು. ಮಗಳ ಮದುಗೆ ಹಣ ಜೋಡಿಸಲು ವ್ಯಥೆ ಪಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬಡತನದಲ್ಲಿದ್ದ ಕುಟುಂಬದ ನೆರವಿಗೆ ಮುಸ್ಲಿಂ ಜಮಾತ್ ಮಸೀದಿಯ ಕಮಿಟಿ ಧಾವಿಸಿತು.
ನವದಂಪತಿಗೆ ಉಡುಗೊರೆ ನೀಡಿದ ಕಮಿಟಿ:

ಮಸೀದಿಯಲ್ಲೇ ಅದ್ಧೂರಿ ಮದುವೆ ನೆರವೇರಿಸುವುದರ ಜೊತೆಗೆ ವಧು ಅಂಜು ಅಶೋಕ್ ಕುಮಾರ್ ಗೆ 10 ಸೆವರೆನ್ ಚಿನ್ನ, 2 ಲಕ್ಷ ರುಪಾಯಿ ಉಡುಗೊರೆ ಜೊತೆಗೆ ಟಿವಿ, ಫ್ರಿಜ್ ಸೇರಿದಂತೆ ಮನೆ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಮಸೀದಿಯ ಕಮಿಟಿ ವತಿಯಿಂದಲೇ ನೀಡಲಾಯಿತು.













Click it and Unblock the Notifications