ಶಬರಿಮಲೆ; ಭಕ್ತರ ಸಂಖ್ಯೆ ಏರಿಕೆಗೆ ಸರ್ಕಾರದ ಚಿಂತನೆ
ತಿರುವನಂತಪುರಂ, ನವೆಂಬರ್ 24: ಶಬರಿಮಲೆ ದೇವಾಲಯದಲ್ಲಿ ವಾರ್ಷಿಕ ಮಂಡಲ ಪೂಜೆಯ ಅಂಗವಾಗಿ ಹೆಚ್ಚಿನ ಭಕ್ತರು ಆಗಮಿಸಿದರೂ ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಬೇಕಾಗಿರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಬರಿಮಲೆ ದೇವಾಲಯದ ಹೆಚ್ಚುವರಿ ಕಾರ್ಯಕಾರಿ ಮ್ಯಾನೇಜರ್ ಕೆ. ವಿಜಯನ್ ಮತ್ತು ವಿಶೇಷ ಅಧಿಕಾರಿ ಬಿ. ಕೃಷ್ಣಕುಮಾರ್ ಮಂಗಳವಾರ ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ದರ್ಶನ ಆರಂಭವಾಗಿರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಬರಿಮಲೆ: 3 ಲಕ್ಷದಿಂದ 9 ಸಾವಿರಕ್ಕೆ ಇಳಿದ ಭಕ್ತರ ಸಂಖ್ಯೆ
ಸನ್ನಿಧಾನದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರಿಗೆ ಕೋವಿಡ್ ಸೋಂಕು ತಗುಲಿತ್ತು. ಸೋಂಕು ತಗುಲಿದ ಸಿಬ್ಭಂದಿ ಮತ್ತು ಆತನ ಜೊತೆ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರ ಜೊತೆಗಿದ್ದವನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಸಭೆಯಲ್ಲಿ ವಿವರಣೆ ನೀಡಲಾಯಿತು.
ಶಬರಿಮಲೆ ಯಾತ್ರಾರ್ಥಿಗಳ ಭದ್ರತೆ ಕುರಿತು ವಿಶೇಷ ಲಕ್ಷ್ಯ
ಒಂದು ವೇಳೆ ಭಕ್ತರ ಸಂಖ್ಯೆ ಹೆಚ್ಚಾದರೆ ಕೋವಿಡ್ ತಡೆಗೆ ದೇವಾಲಯ ಕೈಗೊಂಡಿರುವ ಕ್ರಮಗಳು ಸಾಕಾಗಲಿವೆಯೇ? ಎಂದು ಚರ್ಚೆ ನಡೆಯಿತು. ಭಕ್ತರು ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುತ್ತಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಶಬರಿಮಲೆ ದರ್ಶನಕ್ಕೆ ಹೊರಟ ಭಕ್ತರ ಗಮನಕ್ಕೆ
ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಏರಿಕೆ ಮಾಡಲು ಕೇರಳ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ವಾರದ ದಿನಗಳಲ್ಲಿ 1000, ವಾರಂತ್ಯದಲ್ಲಿ 2 ಸಾವಿರ ಭಕ್ತರು ಭೇಟಿ ನೀಡಲು ಅವಕಾಶ ನೀಡಲಾಗಿದೆ.
ಸಾಮಾನ್ಯ ದಿದನಗಳಲ್ಲಿ 80 ಸಾವಿರದಿಂದ 1 ಲಕ್ಷ ಜನರು ಕಳೆದ ವರ್ಷ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಆದರೆ, ಈ ಬಾರಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದರಿಂದ ಸನ್ನಿಧಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ.
ವಾರ್ಷಿಕ ಮಂಡಲ ಪೂಜೆಯ ಮೊದಲ ವಾರ 9 ಸಾವಿರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸಾಮಾನ್ಯ ದಿನಗಳಲ್ಲಿ 10 ಲಕ್ಷ, ವಾರಂತ್ಯದಲ್ಲಿ 20 ಲಕ್ಷ ಆದಾಯ ದೇವಾಲಯಕ್ಕೆ ಬರುತ್ತಿದೆ.