• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ

|

ತಿರುವನಂತಪುರಂ, ಜೂನ್ 18 : ಕೇರಳದ ಕಂದಾಯ ಇಲಾಖೆ ಶಬರಿಮಲೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ಅನುಮತಿ ನೀಡಿದೆ. ಶಬರಿಮಲೆ ದೇವಾಲಯದಿಂದ 48 ಕಿ. ಮೀ. ದೂರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.

   Solar Eclipse June 21 2020 : Sunday darshan timing changed in Kukke Subramanya | Oneindia Kannada

   ಕೊಟ್ಟಾಯಂ ಜಿಲ್ಲಾಧಿಕಾರಿಗಳಿಗೆ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಚೆರುವ್ಯಾಲಿ ಎಸ್ಟೇಟ್‌ಗೆ ಸೇರಿದ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.

   ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು

   2017ರಲ್ಲಿ ಕೇರಳ ಸರ್ಕಾರ ಶಬರಿಮಲೆ ವಿಮಾನ ನಿಲ್ದಾಣದ ಪ್ರಸ್ತಾವನೆ ಮುಂದಿಟ್ಟಿತ್ತು. ಅಮೆರಿಕದ ಮೂಲದ ಸಂಸ್ಥೆಯೊಂದು 2018ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ವರದಿ ನೀಡಿತ್ತು. ಕೆಸ್‌ಐಡಿಸಿ 2018ರ ಡಿಸೆಂಬರ್‌ನಲ್ಲಿ ಯೋಜನೆ ಕುರಿತು ಡಿಪಿಆರ್ ತಯಾರು ಮಾಡಿತ್ತು.

   ಅನ್ ಲಾಕ್ ಇಂಡಿಯಾ: ವಿಮಾನ ಸಂಚಾರ ಆರಂಭಕ್ಕೂ ಮುನ್ನ ಎಚ್ಚರ!

   2,263 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ವಿಮಾನ ನಿಲ್ದಾಣದ ಜಾಗದ ವಿವಾದ ಕೇರಳ ಹೈಕೋರ್ಟ್‌ ಮೆಟ್ಟಿಲನ್ನು ಏರಿತ್ತು. 2013ರ ಭೂ ಸ್ವಾಧೀನ ಕಾಯ್ದೆ ಅನ್ವಯ ಪರಿಹಾರವನ್ನು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

   ವಿಶ್ವದ 2 ದೇಶಗಳ 7 ನಗರಗಳಿಗೆ ಏರ್‌ಇಂಡಿಯಾ ವಿಮಾನ ಹಾರಾಟ

   ಭೂ ಸ್ವಾಧೀನದ ಕುರಿತು ಇರುವ ಎಲ್ಲಾ ವಿವಾದಗಳು ಈಗ ಬಗೆಹರಿದಿದೆ. ಕೇರಳ ಸರ್ಕಾರದ ಯೋಜನೆಗೆ ಒಪ್ಪಿಗೆ ನೀಡಿದೆ. ಭೂ ಸ್ವಾಧೀನ ಕಾರ್ಯ ಆರಂಭವಾದರೆ ಶಬರಿಮಲೆ ವಿಮಾನ ನಿಲ್ದಾಣದ ಮೊದಲ ಹಂತದ ಕೆಲಸ ಪ್ರಾರಂಭವಾಗುತ್ತದೆ.

   ವರ್ಷದಿಂದ ವರ್ಷಕ್ಕೆ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಪ್ರಸ್ತುತ ಭಕ್ತರು ರೈಲು, ರಸ್ತೆ ಮಾರ್ಗದ ಮೂಲಕ ಸಾಗಿ ದೇವರ ದರ್ಶನವನ್ನು ಪಡೆಯಬಹುದಾಗಿದೆ.

   English summary
   Kerala government revenue department ordered the Kottayam DC to acquire the land to construct the Sabarimala greenfield airport. Airport will come up in 48 km from temple and in 2263 acre of land.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X