ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೇರಳದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆ

|
Google Oneindia Kannada News

ತಿರುವನಂತಪುರಂ, ಆ.04: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 40 ಬಾಕ್ಸ್‌ಗಳಲ್ಲಿ ಬಾಂಬ್ ತಯಾರಿಸಲು ಬಳಸಬಹುದಾದ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಶೋರ್ನೂರಿನ ಕ್ವಾರಿಯೊಂದರ ಬಳಿ ಬಿಟ್ಟು ಹೋಗಿದ್ದ 40 ಬಾಕ್ಸ್‌ಗಳಲ್ಲಿ ಬಾಂಬ್ ತಯಾರಿಸಲು ಬಳಸಬಹುದಾದ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.

ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲೆಟಿನ್ ಕಡ್ಡಿಗಳನ್ನು ಇಡಲಾಗಿದ್ದ 40 ಬಾಕ್ಸ್‌ಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಎಲ್ಲಾ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Kerala 8000 gelatin sticks found abandoned in Palakkad

ಈ ಹಿಂದೆಯೂ ತೆರೆದ ಪ್ರದೇಶಗಳಲ್ಲಿ ಮತ್ತು ವಸತಿ ಪ್ರದೇಶಗಳ ಬಳಿ ಇಂತಹ ಸ್ಫೋಟಕ ವಸ್ತುಗಳನ್ನು ಗುರುತಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕ್ವಾರಿ ಬಳಿ ಸ್ಫೋಟಕ ವಸ್ತುಗಳನ್ನು ಬಿಟ್ಟು ಹೋದವರ ಪತ್ತೆಗೆ ಪೊಲೀಸರು ಶೋಧಿಸುತ್ತಿದ್ದಾರೆ.

ತಿಳಿ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಇಟ್ಟಿರುವ ಜಿಲೆಟಿನ್ ಕಡ್ಡಿಗಳ ಚಿತ್ರ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೆಪ್ಟೆಂಬರ್ 2020 ರಲ್ಲಿ, ಎರ್ನಾಕುಲಂನ ಕಾಲಡಿಯಲ್ಲಿ ಕ್ವಾರಿ ಬಳಿಯ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಸ್ಫೋಟಕಗಳು ಸ್ಫೋಟಗೊಂಡು ಇಬ್ಬರು ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. ಗಣಿಗಾರಿಕೆಗಾಗಿ ಬಂಡೆಗಳನ್ನು ಸ್ಫೋಟಿಸುವ ಉದ್ದೇಶದಿಂದ ಸ್ಫೋಟಕ ವಸ್ತುಗಳನ್ನು ಪರವಾನಗಿ ಇಲ್ಲದೆ ಸಂಗ್ರಹಿಸಲಾಗುತ್ತಿದೆ ಎಂದು ವರದಿಯಾಗಿದೆ.

Recommended Video

ಧೋನಿ ಐಡಿಯಾದಿಂದ‌ ಚಿನ್ನದ‌ ಪದಕ:ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಭಾರತದ ಲಾನ್ ಬೌಲ್ಸ್ ಟೀಂ | OneIndia Kannada

2000ನೇ ಇಸವಿಯ ನವೆಂಬರ್‌ನಲ್ಲಿ ಪಾಲಕ್ಕಾಡ್‌ನ ವಾಲಯಾರ್‌ನ ಬಳಿ ಮಿನಿ ಲಾರಿಯಿಂದ 7,500 ಡಿಟೋನೇಟರ್‌ಗಳು ಮತ್ತು 7,000 ಜಿಲೆಟಿನ್ ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ತಮಿಳುನಾಡಿನ ಈರೋಡ್‌ನಿಂದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಗೆ ಸಾಗಿಸುತ್ತಿದ್ದ ಹಲವಾರು ಟೊಮೆಟೊ ಬಾಕ್ಸ್‌ಗಳಿಂದ ಸ್ಫೋಟಕಗಳನ್ನು ಮರೆಮಾಡಲಾಗಿತ್ತು.

English summary
A large number of explosives were found Thursday in Kerala's Palakkad Ongalloor. 8,000 gelatin sticks found, that can be used to make bombs. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X