ಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನ

ತಿರುವನಂತಪುರಂ, ಜನವರಿ 05: ಶಬರಿಮಲೆಗೆ ಮಹಿಳೆಯರಿಬ್ಬರು ಪ್ರವೇಶಿಸಿದ ನಂತರ ಉಂಟಾದ ಗಲಭೆಗಳಿಗೆ ಸಂಬಂಧಿಸಿದಂತೆ ಕೇರಳ ಪೊಲೀಸರು 3917 ಜನರನ್ನು ಈವರೆಗೆ ಬಂಧಿಸಿದ್ದಾರೆ.

ಹಿಂಸೆ, ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ, ಮಾರಕಾಸ್ತ್ರ ಬಳಕೆ, ಶಾಂತಿ ಕದಡುವ ಯತ್ನ ಇನ್ನೂ ಹಲವು 1286 ಪ್ರಕರಣಗಳನ್ನು ಬರೋಬ್ಬರಿ 37,979 ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದಾರೆ ಕೇರಳ ಪೊಲೀಸರು.

ಈ ಅಂಕಿ-ಅಂಶ ಶನಿವಾರ ಬೆಳಿಗ್ಗೆ ದೊರೆತಿದ್ದು, ಶನಿವಾರ ಸಹ ಬಂಧನಗಳು ನಡೆದಿವೆ. ಕೇಸು ದಾಖಲಿಸುವುದು ಸಹ ಮುಂದುವರೆದಿದೆ.

Kerala: 3,178 persons have been arrested in connection with the violence

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಜನವರಿ 1 ರ ಇಳಿ ರಾತ್ರಿ 3:45 ರ ವೇಳೆಗೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ಕೇರಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನೆಗಳು ಹಿಂಸಾರೂಪ ತಳೆದಿವೆ.

ಹಿಂಸಾಚಾರದಿಂದಾಗಿ ಈಗಾಗಲೇ ಹಲವರು ಗಾಯಗೊಂಡಿದ್ದಾರೆ. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ಎರಡೂ ಪಕ್ಷದ ಮುಖಂಡರ ಮನೆಗಳ ಮೇಲೆ ಕಚ್ಚಾ ಬಾಂಬ್ ದಾಳಿಗಳು ನಡೆದಿವೆ.

ಪರಿಸ್ಥಿತಿಯನ್ನು ತಿಳಿಗೊಳಿಸಲೆಂದು ಪೊಲೀಸರು ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವ ಜನರನ್ನು ಬಂಧಿಸುತ್ತಿದ್ದಾರೆ. ಇನ್ನೂ ಕೆಲವು ದಿನಗಳಲ್ಲಿ ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+