ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

INS Vikrant : ಚೀನಾಕ್ಕೆ ಸೆಡ್ಡು ಹೊಡೆಯಲಿದೆ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್

|
Google Oneindia Kannada News

ಕೊಚ್ಚಿ, ಆಗಸ್ಟ್ 26: ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್ ಸೆಪ್ಟೆಂಬರ್ 2 ರಂದು ಭಾರತೀಯ ನೌಕಾಪಡೆಗೆ ಔಪಚಾರಿಕವಾಗಿ ಸೇರ್ಪಡೆಯಾಗಲಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವಾಗ ಈ ಬೆಳವಣಿಗೆ ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

45,000 ಟನ್ ತೂಕದ ಯುದ್ಧನೌಕೆ ಕಾರ್ಯಾರಂಭ ಮಾಡುವ ಸಂದರ್ಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. 2021ರ ಆಗಸ್ಟ್ 21 ರಿಂದ ಸಮುದ್ರ ಪ್ರಯೋಗಗಳ ಬಹುತೇಕ ಎಲ್ಲಾ ಹಂತಗಳು ಪೂರ್ಣಗೊಂಡಿವೆ. ಒಪ್ಪಿಗೆಯನ್ನು ಪಡೆದುಕೊಂಡ ನಂತರ ನೌಕಾಪಡೆ ವಾಯುಯಾನ ಪ್ರಯೋಗಗಳನ್ನು ನಡೆಸಲಾಗುತ್ತದೆ.

ಭಾರತದ ಬತ್ತಳಿಕೆ ಸೇರಲಿದೆ MQ-9B ಪ್ರಿಡೇಟರ್; ಇದು ಸಾಮಾನ್ಯ ಡ್ರೋನ್ ಅಲ್ಲಭಾರತದ ಬತ್ತಳಿಕೆ ಸೇರಲಿದೆ MQ-9B ಪ್ರಿಡೇಟರ್; ಇದು ಸಾಮಾನ್ಯ ಡ್ರೋನ್ ಅಲ್ಲ

ಇದುವರೆಗೂ ಭಾರತವು ಕೇವಲ ಒಂದು ವಿಮಾನವಾಹಕ ನೌಕೆಯನ್ನು ಹೊಂದಿದೆ, ಐಎನ್ಎಸ್ ವಿಕ್ರಮಾದಿತ್ಯ, ಇದನ್ನು ರಷ್ಯಾ ನಿರ್ಮಿಸಿ ಭಾರತಕ್ಕೆ ಹಸ್ತಾಂತರಿಸಿತ್ತು. ರಕ್ಷಣಾ ಪಡೆಗಳಿಗೆ ಒಟ್ಟು ಮೂರು ವಿಮಾನವಾಹಕ ನೌಕೆಗಳ ಅಗತ್ಯವಿದೆ.

ಸ್ವದೇಶಿ ವಿಮಾನವಾಹಕವನ್ನು ನಿರ್ಮಾಣ ಮಾಡುವ ಮೂಲಕ ಭಾರತವು ಯುಎಸ್, ಯುಕೆ, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರುತ್ತದೆ, ಈ ರಾಷ್ಟ್ರಗಳು ಮಾತ್ರ ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ವಿನ್ಯಾಸಗೊಳಿಸಿ, ನಿರ್ಮಾಣ ಮಾಡಿವೆ.

ಅಗ್ನಿಪಥ್ ಯೋಜನೆ; ನೌಕಾಪಡೆಗೆ 3 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕಾರಅಗ್ನಿಪಥ್ ಯೋಜನೆ; ನೌಕಾಪಡೆಗೆ 3 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕಾರ

 ಸೈನಿಕರ ಸ್ಮರಣಾರ್ಥ ಐಎನ್‌ಎಸ್‌ ವಿಕ್ರಾಂತ್ ಹೆಸರು

ಸೈನಿಕರ ಸ್ಮರಣಾರ್ಥ ಐಎನ್‌ಎಸ್‌ ವಿಕ್ರಾಂತ್ ಹೆಸರು

ಬಾಂಗ್ಲಾದೇಶದ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ 1971 ರ ಯುದ್ಧದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿದ ಐಎನ್‌ಎಸ್ ವಿಕ್ರಾಂತ್. ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆ. ಈಗ ನಿರ್ಮಿಸಲಾದ ನೌಕೆಗೆ ಅದೇ ಹೆಸರನ್ನುಇಡಲಾಗಿದೆ.

ವಿಕ್ರಾಂತ್‌ ಪ್ರವೇಶ ಮತ್ತು ಪುನರ್ಜನ್ಮವು, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು 1971 ರ ಯುದ್ಧದ ಸಮಯದಲ್ಲಿ ನಮ್ಮ ವೀರ ಸೈನಿಕರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಕ್ಕೆ ನೀಡುವ ಗೌರವವಾಗಿದೆ ಎಂದು ನೌಕಾಪಡೆ ಹೇಳಿದೆ.

 20 ಸಾವಿರ ಕೋಟಿ ವೆಚ್ಚ

20 ಸಾವಿರ ಕೋಟಿ ವೆಚ್ಚ

20,000 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಇದನ್ನು ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದೆ ಮತ್ತು ಸಾರ್ವಜನಿಕ ವಲಯದ ತಯಾರಕ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಿಸಲಾಗಿದೆ.

ಕಳೆದ ಒಂದು ದಶಕದಿಂದ ಯುದ್ಧನೌಕೆ ನಿರ್ಮಾಣ ಕೆಲಸದ ಮಾಡಲಾಗುತ್ತಿತ್ತು. ರಕ್ಷಣಾ ಸಚಿವಾಲಯ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಡುವೆ 2007 ರಿಂದ ಪ್ರಾರಂಭವಾಗುವ ಮೂರು ಹಂತದ ಒಪ್ಪಂದವಿತ್ತು.

 1,600 ಸಿಬ್ಬಂದಿ, ವೈದ್ಯಕೀಯ ಸೌಲಭ್ಯ

1,600 ಸಿಬ್ಬಂದಿ, ವೈದ್ಯಕೀಯ ಸೌಲಭ್ಯ

ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯಲ್ಲಿ ದೇಶೀಯವಾಗಿ ತಯಾರಿಸಿದ ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALH) ಮತ್ತು ಲಘು ಯುದ್ಧ ವಿಮಾನ (LCA) ಜೊತೆಗೆ ಮಿಗ್‌-29ಕೆ (MiG-29K) ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ 30 ವಿಮಾನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದು ನೌಕಾಪಡೆ ಹೇಳಿದೆ. ಇದು ಮಿಗ್ ಯುದ್ಧವಿಮಾನಗಳು ಮತ್ತು ಕೆಲವು ಹೆಲಿಕಾಪ್ಟರ್‌ಗಳನ್ನು ಹೊಂದಿರುತ್ತದೆ. ನೌಕಾಪಡೆಯು 26 ಡೆಕ್ ಆಧಾರಿತ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.

262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲ ಇರುವ ಐಎನ್‌ಎಸ್‌ ವಿಕ್ರಾಂತ್ 1,600 ಸಿಬ್ಬಂದಿಯನ್ನು ಹೊಂದಿದೆ ಮತ್ತು ಮಹಿಳಾ ಅಧಿಕಾರಿಗಳು ಮತ್ತು ನಾವಿಕರಿಗಾಗಿ ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ ಸುಮಾರು 2,200 ವಿಭಾಗಗಳನ್ನು ಹೊಂದಿದೆ. ಇದು ಹಲವಾರು ಪ್ರಯೋಗಾಲಯಗಳು, ಸಿಟಿ ಸ್ಕ್ಯಾನರ್, ಎಕ್ಸ್-ರೇ ಯಂತ್ರಗಳು ಮತ್ತು ಪ್ರತ್ಯೇಕ ವಾರ್ಡ್ ಸೇರಿದಂತೆ ಇತ್ತೀಚಿನ ಉಪಕರಣಗಳೊಂದಿಗೆ ವೈದ್ಯಕೀಯ ಸೌಲಭ್ಯವನ್ನು ಕೂಡ ಹೊಂದಿದೆ.

 ಚೀನಾ ವಿರುದ್ಧ ಸೆಡ್ಡು ಹೊಡೆಯಲು ಭಾರತಕ್ಕೆ ಬಲ

ಚೀನಾ ವಿರುದ್ಧ ಸೆಡ್ಡು ಹೊಡೆಯಲು ಭಾರತಕ್ಕೆ ಬಲ

ಚೀನಾ ಸಮುದ್ರದಲ್ಲಿ ತನ್ನ ಬಲವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು, ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿರುವ ಚೀನಾದ ನೌಕಾ ನೆಲೆಯು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿಯೋಜಿಸಲಾದ ಯುದ್ಧನೌಕೆಗಳನ್ನು ಬೆಂಬಲಿಸುತ್ತದೆ ಎಂದು ಸೂಚಿಸುತ್ತದೆ. ಇತ್ತೀಚೆಗಷ್ಟೇ ಚೀನಾದ ಗೂಢಚಾರಿಕೆ ಹಡಗು ಶ್ರೀಲಂಕಾದ ಹಂಬಂಟೋಟದಲ್ಲಿ ನಿಲುಗಡೆ ಮಾಡಿದಾಗ ಭಾರತವೂ ಆತಂಕಕ್ಕೆ ಒಳಗಾಗಿತ್ತು.

ಭಾರತೀಯ ನೌಕಾಪಡೆಯು ಹೊಸ ಯುದ್ಧನೌಕೆಯನ್ನು ತನ್ನ ಶಸ್ತ್ರಾಗಾರಕ್ಕೆ ಒಂದು ಪ್ರಮುಖ ಸೇರ್ಪಡೆ ಎಂದು ಪರಗಣಿಸಿದೆ. "ಪವರ್ ಪ್ರೊಜೆಕ್ಷನ್‌ಗೆ ಬಳಸಿಕೊಳ್ಳಬಹುದು ಮತ್ತು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಬಹುದು" ಎಂದು ದಕ್ಷಿಣ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಎಂ.ಎ ಹಂಪಿಹೊಳಿ ಹೇಳಿದರು.

ಕಮೋಡೋರ್ ವಿದ್ಯಾಧರ್ ಹರ್ಕೆ ಐಎನ್‌ಎಸ್ ವಿಕ್ರಾಂತ್‌ಗೆ ಕಮಾಂಡ್ ಆಗುವ ಮೊದಲ ಅಧಿಕಾರಿ ಎನಿಸಿಕೊಳ್ಳಲಿದ್ದಾರೆ. "ಸಿಬ್ಬಂದಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಮೊದಲ ನೌಕಾಯಾನದಿಂದಲೇ, ಹೆಚ್ಚಿನ ಕೆಲಸಗಳನ್ನು ನನ್ನ ಸಿಬ್ಬಂದಿ ನಿರ್ವಹಿಸುತ್ತಿದ್ದರು. ಈಗ ಅವರಿಗೆ ನೌಕೆಯ ಎಲ್ಲಾ ಕೆಲಸಗಳು ಕರಗತವಾಗಿವೆ" ಎಂದು ಹೇಳಿದ್ದಾರೆ.

English summary
Indian Navy will get the country's first indigenously built aircraft INS Vikrant on September 2. Prime Minister Narendra Modi will be the chief guest when the 45,000-tonne warship would be commissioned. Built at a cost of Rs 20,000 crore, it's designed by the Navy's Warship Design Bureau and built by the public-sector manufacturer Cochin Shipyard Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X