ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಭಾರಿ ಮಳೆ: ಏಳು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

|
Google Oneindia Kannada News

ತಿರುವನಂತಪುರ, ಆಗಸ್ಟ್ 1: ಕಳೆದ ಕೆಲವು ವಾರಗಳಿಂದ ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗ ಎರಡು ದಿನಗಳ ಕಾಲ ತಿರುವನಂತಪುರದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಣೆ ಮಾಡುತ್ತಿದ್ದಂತೆ, ತಿರುವನಂತಪುರ ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಅವರು ಆಗಸ್ಟ್ 2 ರಂದು ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.

ಪರೀಕ್ಷೆಗಳನ್ನು ಮಾತ್ರ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಕೇರಳ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನರು ಜಾಗರೂಕರಾಗಿರಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಳಿಕೊಂಡಿದ್ದಾರೆ.

ಬೆಂಗಳೂರು; ಅಲ್ಪ ಮಳೆಗೆ ಕರೆಯಂತಾದ ಬನ್ನೇರುಘಟ್ಟ ರಸ್ತೆಬೆಂಗಳೂರು; ಅಲ್ಪ ಮಳೆಗೆ ಕರೆಯಂತಾದ ಬನ್ನೇರುಘಟ್ಟ ರಸ್ತೆ

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನರು ಜಾಗರೂಕರಾಗಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ತಿಳಿಸಿದ್ದಾರೆ.

ಕೊಟ್ಟಾಯಂ, ಪತ್ತನಂತಿಟ್ಟ, ಇಡುಕ್ಕಿ, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವೆಡೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹಲವು ಹೊಳೆಗಳು ತುಂಬಿ ಹರಿಯುತ್ತಿವೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕಾಸರಗೋಡಿನ ನದಿಗಳು ತುಂಬಿ ಹರಿಯುತ್ತಿವೆ.

 ಭಾರಿ ಮಳೆಯಿಂದ ಮನೆಗಳಿಗೆ ಹಾನಿ

ಭಾರಿ ಮಳೆಯಿಂದ ಮನೆಗಳಿಗೆ ಹಾನಿ

ಭಾರಿ ಮಳೆಯಿಂದಾಗಿ ಕಣ್ಣೂರಿನಲ್ಲಿ ಮಳೆ ನೀರು ನುಗ್ಗಿದ್ದರಿಂದ ಐದು ಮನೆಗಳು ಸಂಪೂರ್ಣವಾಗಿ ಮತ್ತು 55 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಹವಾಮಾನ ಇಲಾಖೆಯು ದಕ್ಷಿಣ ಕೇರಳ ಮತ್ತು ಮಧ್ಯ ಕೇರಳದಲ್ಲಿ ಆಗಸ್ಟ್ 1 ಮತ್ತು 2ರಂದು ಭಾರಿ ಮಳೆಯಾಗಲಿದೆ, ನಂತರ ಉತ್ತರ ಭಾಗಕ್ಕೆ ವಿಸ್ತರಿಸಲಿದೆ ಎಂದು ಮುನ್ಸೂಚನೆ ನೀಡಿದೆ.

ಕೇರಳದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ವಿಜಯನ್ ಮಾಹಿತಿ ನೀಡಿದರು. ಆಗಸ್ಟ್ 2 ರಂದು ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಆಲಪ್ಪುಳ, ಇಡುಕ್ಕಿ ಮತ್ತು ಎರ್ನಾಕುಲಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

 ಜನತೆಗೆ ಸಿಎಂ ಪಿಣರಾಯಿ ವಿಜಯನ್ ಮನವಿ

ಜನತೆಗೆ ಸಿಎಂ ಪಿಣರಾಯಿ ವಿಜಯನ್ ಮನವಿ

ಎರ್ನಾಕುಲಂ ಮತ್ತು ತಿರುವನಂತಪುರಂ ಜಿಲ್ಲಾಡಳಿತಗಳು ಆಗಸ್ಟ್ 2 ರಂದು ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ. ಕಡಲುಂಡಿ (ಮಲಪುರಂ), ಭರತಪುಳ (ಪಾಲಕಾಡು), ಶಿರಿಯಾ (ಕಾಸರಗೋಡು), ಕರವನ್ನೂರ್ (ತ್ರಿಶೂರ್) ಮತ್ತು ಗಾಯತ್ರಿ (ತ್ರಿಶೂರ್) ನದಿಗಳಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಜನರು ಸ್ನಾನ ಮಾಡಲು, ಬಟ್ಟೆ ಒಗೆಯಲು ಅಥವಾ ಪ್ರಾಣಿಗಳಿಗೆ ಸ್ನಾನ ಮಾಡಲು ನದಿಗಳು, ಜಲಮೂಲಗಳು ಮತ್ತು ತೊರೆಗಳಿಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ರಾತ್ರಿ ಪ್ರಯಾಣ ಮಾಡದಂತೆ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದರು.

 ಪರಿಹಾರ ಕಾರ್ಯಾಚರಣೆಗೆ ತಂಡಗಳು ಸಿದ್ಧ

ಪರಿಹಾರ ಕಾರ್ಯಾಚರಣೆಗೆ ತಂಡಗಳು ಸಿದ್ಧ

ಮುಂಗಾರು ಪೂರ್ವ ತಯಾರಿಗಾಗಿ ಕೇರಳ ಸರಕಾರ ಪ್ರತಿ ಜಿಲ್ಲೆಗೆ 1 ಕೋಟಿ ರೂ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು ರಾಜ್ಯ ನಿಯಂತ್ರಣ ಕೊಠಡಿಯಾಗಿ ಕಾರ್ಯನಿರ್ವಹಿಸಲು ಸ್ಥಾಪಿಸಲಾಗಿದೆ.

ನಿಯಂತ್ರಣ ಕೊಠಡಿಯು ಎನ್‌ಡಿಆರ್‌ಎಫ್, ರಾಜ್ಯ ಮಟ್ಟದ ರಕ್ಷಣಾ ಪಡೆಗಳು ಮತ್ತು ಇತರ ಇಲಾಖೆಗಳ ಸದಸ್ಯರನ್ನು ಒಳಗೊಂಡಿದೆ. ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗುವುದು. ತಗ್ಗು ಪ್ರದೇಶಗಳಿಂದ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರಿಸಲು ಕ್ರಮಗಳನ್ನು ಪ್ರಾರಂಭಿಸಲಾಗಿದೆ.

 ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡ ನಿಯೋಜನೆ

ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್ ತಂಡ ನಿಯೋಜನೆ

ರಕ್ಷಣಾ ಕಾರ್ಯಾಚರಣೆಗಾಗಿ, ಇಡುಕ್ಕಿ, ಕೋಝಿಕ್ಕೋಡ್, ವಯನಾಡ್ ಮತ್ತು ತ್ರಿಶೂರ್‌ನಲ್ಲಿ ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ಎರ್ನಾಕುಲಂ, ಕೊಟ್ಟಾಯಂ, ಕೊಲ್ಲಂ ಮತ್ತು ಮಲಪ್ಪುರಂಗಳಲ್ಲಿ ಇನ್ನೂ ನಾಲ್ಕು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುವುದು.
ಇಡುಕ್ಕಿಯ ಪೊನ್ಮುಡಿ, ಕುಂಡಾಲ, ಕಲ್ಲರ್ಕುಟ್ಟಿ, ಎರಟ್ಟಯಾರ್ ಮತ್ತು ಲೋವರ್ ಪೆರಿಯಾರ್ ಅಣೆಕಟ್ಟುಗಳು ಭರ್ತಿಯಾಗಿವೆ, ಈಗಾಗಲೇ ರೆಡ್ ಅಲರ್ಟ್ ಸ್ಟೋರೇಜ್ ಮಟ್ಟವನ್ನು ತಲುಪಿದೆ. ಅವುಗಳನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿ (KSEB) ನಿರ್ವಹಿಸುತ್ತದೆ.

ಕೇರಳದ ಕರಾವಳಿ ಭಾಗದಲ್ಲಿ 40-50 ಕಿಲೋ ಮಿಟರ್ ವೇಗದಲ್ಲಿ ಗಾಳಿ ಬೀಸುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆಗಸ್ಟ್ 1ರಿಂದ ಆಗಸ್ಟ್ 4ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.

Recommended Video

ಕ್ಯಾಪ್ಟನ್ ಕೂಲ್ ದಾಖಲೆ ಮುರಿದ ಕೌರ್ | OneIndia Kannada

English summary
India Meteorological Department (IMD) has now issued a red alert in Thiruvananthapuram, Kollam, Pathanamthitta, Kottayam, Alappuzha, Idukki and Ernakulam for August 2. District collector Geromic George has declared a holiday for all educational institutions including professional colleges for August 2. Kerala Chief Minister Pinarayi Vijayan has asked people to be vigilant following the heavy rains in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X