ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಂಧನ ಬಿಟ್ಟು ಓಡಿಹೋಗಿದ್ದ ಕೇರಳ ಐಎಎಸ್ ಅಧಿಕಾರಿ ವಿರುದ್ಧ ಕೇಸ್

|
Google Oneindia Kannada News

ಕೊಲ್ಲಂ, ಮಾರ್ಚ್ 28: ಹನಿಮೂನ್‌ಗೆಂದು ವಿದೇಶಕ್ಕೆ ಹಾರಿದ್ದ ಉಪ ಜಿಲ್ಲಾಧಿಕಾರಿ, ಗೃಹಬಂಧನ ಉಲ್ಲಂಘಿಸಿ ಊರಿಗೆ ತೆರಳಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹನಿಮೂನ್ ಹಾಗಿ ವಿದೇಶಕ್ಕೆ ತೆರಳಿದ್ದ ಅನುಪಮ್ ಮಿಶ್ರಾ ಅವರು ಮಾರ್ಚ್ 18ರಂದು ಸಿಂಗಾಪುರದಿಂದ ಸ್ವದೇಶಕ್ಕೆ ವಾಪಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಸೂಚಿಸಲಾಗಿತ್ತು.

ಆದರೆ ಈ ನಿಯಮವನ್ನು ಉಲ್ಲಂಘಿಸಿ ಅನುಪಮ್ ಮಿಶ್ರಾ ಅವರು ಕಾನ್ಪುರಕ್ಕೆ ತೆರಳಿದ್ದಾರೆ. ಈ ವಿಷಯ ತಿಳಿದು ಕೊಲ್ಲಂ ಜಿಲ್ಲಾಧಿಕಾರಿ ಬಿ. ಅಬ್ದುಲ್ ನಾಸರ್ ಕೇರಳ ಸರ್ಕಾರದ ಗಮನಕ್ಕೆ ತಂದಿದ್ದು ಸರ್ಕಾರ ಮಿಶ್ರಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

Quarantine

ಕೇರಳದ ಕೊಲ್ಲಂ ಜಿಲ್ಲೆಯ ಉಪ ಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಹೋಮ್ ಕ್ವಾರೆಂಟೈನ್ ಸೂಚನೆ ಉಲ್ಲಂಘಿಸಿ ಊರಿಗೆ ತೆರಳಿದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ.

ಗೃಹಬಂಧನ ಬಿಟ್ಟು ಖಾನ್‌ಪುರಕ್ಕೆ ಓಡಿಹೋದ ಕೇರಳದ ಸಬ್‌ ಕಲೆಕ್ಟರ್ಗೃಹಬಂಧನ ಬಿಟ್ಟು ಖಾನ್‌ಪುರಕ್ಕೆ ಓಡಿಹೋದ ಕೇರಳದ ಸಬ್‌ ಕಲೆಕ್ಟರ್

ಮಾರ್ಚ್ 18 ರಂದು ಸಿಂಗಾಪುರಕ್ಕೆ ತೆರಳಿದ್ದ ಕಲೆಕ್ಟರ್ ಅನುಪಮ್ ಮಿಶ್ರಾ ಅವ ರು, ಲಖನೌಗೆ ಭೇಟಿ ನೀಡಿದ್ದರು. ಬಳಿಕ ಕೇರಳಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿರಿಸಲಾಗಿತ್ತು ಎಂದು ಅಧಿಕಾಱಿಗಳು ಮಾಹಿತಿ ನೀಡಿದ್ದಾರೆ.

ಹೋಂ ಕ್ವಾರಂಟೈನ್ ನಲ್ಲಿರುವ ಅಧಿಕಾರಿಯನ್ನು ದಿನನಿತ್ಯ ಅಧಿಕಾರಿಗಳು ತಪಾಸಣೆಗೊಳಪಡಿಸುತ್ತಿದ್ದು, ಇದರಂತೆ ಗುರುವಾರ ಅಧಿಕಾರಿಗಳು ತಪಾಸಣೆಗೆಂದು ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಧಿಕಾರಿ ಮನೆಯಲ್ಲಿಲ್ಲದಿರುವುದು ಕಂಡು ಬಂದಿದೆ.

ದೂರವಾಣಿ ಕರೆ ಮಾಡಿದಾಗ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಅಧಿಕಾರಿಯ ಸಹೋದರ ವೈದ್ಯರಾಗಿದ್ದು, ಗೃಹ ಬಂಧನದಲ್ಲಿರುವಂತೆ ಸೂಚಿಸಿದ ದಿನವೇ ರಾಜ್ಯ ತೊರೆದಿರುವುದಾಗಿ ತಿಳಿಸಿದ್ದಾರೆ.

English summary
A young IAS officer in Kerala has been booked by police and he is suspended after he left the state violating instructions to remain under home quarantine following his recent return from honeymoon abroad, officials said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X