ಕೇರಳದಲ್ಲಿ ಮದ್ಯಪಾನ ನಿಷೇಧ ಮಾಡಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

ತಿರುವನಂತಪುರಂ, ಮಾರ್ಚ್ 27: ಎಲ್ಲಾ ಕಡೆ ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಏನು ಮಾಡುವುದು ಎಂಬ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಮದ್ಯಪಾನ ಪ್ರಿಯರು ಕುಡಿಯುವುದಕ್ಕೆ ಮದ್ಯಪಾನ ಸಿಗುತ್ತಿಲ್ಲ ಎಂದು ಕೊರನಾ ವಿರುದ್ಧ ಶಾಪ ಹಾಕುತ್ತಿರುವ ಉದಾಹರಣೆಗಳು ಕಾಣುತ್ತಿದೆ.

ಇಲ್ಲೊಬ್ಬ ವ್ಯಕ್ತಿ ಮದ್ಯಪಾನ ನಿಷೇಧ ಮಾಡಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೊರೊನಾ ಹರಡುವಿಕೆ ನಿಯಂತ್ರಿಸಲು ಕೇರಳ ಸರ್ಕಾರ ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡಿದೆ. ಮದ್ಯಪಾನವನ್ನು ಸಂಪೂರ್ಣ ಬಂದ್ ಮಾಡಿದೆ.

ಕುಡಿತದ ಚಟಕ್ಕೆ ಬಿದಿದ್ದ ವ್ಯಕ್ತಿಗಳು ಮದ್ಯಪಾನ ಸಿಗದ ಹಿನ್ನೆಲೆ ಮಾನಸಿಕವಾಗಿ ಅಸ್ವಸ್ತರಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಕುಲಂನಲ್ಲಿ 38 ರ್ವದ ಸನೋಜ್ ಕುಲಂಗರ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

A Man Commits Sucide After Liquor ban

ಈ ಬಗ್ಗೆ ಮನೆಯವರು ಪ್ರತಿಕ್ರಿಯಿಸಿದ್ದು, ಕುಡಿತ ಅಭ್ಯಾಸವಿತ್ತು. ಮದ್ಯಪಾನ ನಿಷೇಧ ಆದ್ಮೇಲೆ ಮಾನಸಿಕವಾಗಿ ನೊಂದಿದ್ದನು. ಆದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಪೊಲೀಸರು ಕೂಡ ಇದು ಸಹಜ ಸಾವು ಎಂದು ಕೇಸ್ ದಾಖಲು ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಿರುವ ಕಾರಣ, 21 ದಿನಗಳ ವರೆಗೂ ದೇಶದಲ್ಲಿ ಲಾಕ್‌ಡೌನ್ ಮಾಡಲು ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಮೋದಿ ಸೂಚನೆ ಮೆರೆಗೆ ಎಲ್ಲ ರಾಜ್ಯಗಳು ಲಾಕ್‌ಡೌನ್ ಮಾಡಿದೆ. ಅಗತ್ಯ ವಸ್ತುಗಳು ಬಿಟ್ಟು ಬೇರೆ ಯಾವುದೇ ಉದ್ಯಮಗಳಿಗೂ ಅವಕಾಶ ನಿರ್ಬಂಧ ಹೇರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+