ಕೊರೊನಾ ಭಯ; ಶಾಪಿಂಗ್ ಮಾಲ್, ಥಿಯೇಟರ್‌ಗಳು ಬಂದ್!

ತಿರುವನಂತಪುರಂ, ಮಾರ್ಚ್ 10: ಕೇರಳದಲ್ಲಿಯೂ ಕೊರೊನಾ (ಕೋವಿಡ್ 19) ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಅಲ್ಲಿನ ಸರ್ಕಾರ ಗಂಭೀರವಾಗಿದ್ದು, ಮಾರ್ಚ್ 31 ರವರಗೆ ಕೇರಳ ಮಾಲ್‌ಗಳನ್ನು, ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ. ಮಾರ್ಚ್ 31 ರವೆರೆಗೆ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಿಗೆ ಹಾಗೂ ಪ್ರಾಥಮಿಕ ಶಾಲಾ ಪರೀಕ್ಷೆಗಳಿಗೆ ರಜೆ ಘೋಷಣೆಯಾದ ಬೆನ್ನಲ್ಲೇ ಕೇರಳ ಸರ್ಕಾರದಿಂದ ಸಿನಿಮಾ ಮಂದಿರಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಾಲ್ವರಿಗೆ, ಕೇರಳದಲ್ಲಿ ಮೂರು ವರ್ಷದ ಮಗುವಿಗೆ ಹಾಗೂ ಜಮ್ಮು, ದಿಲ್ಲಿ, ಉತ್ತರ ಪ್ರದೇಶದಲ್ಲಿ ಮೂವರಿಗೆ ವೈರಸ್‌ ತಗುಲಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ ಸೋಮವಾರ 47ಕ್ಕೆ ಏರಿಕೆಯಾಗಿದೆ.

ಕೇರಳವೊಂದರಲ್ಲಿಯೇ ಹೊಸದಾಗಿ ಸೋಂಕಿತರ ಪ್ರಮಾಣ ಆರಕ್ಕೇರಿದೆ. ಇಟಲಿಯಿಂದ ಮಾರ್ಚ್‌ 7ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿದಿದ್ದ ದಂಪತಿಯ ಮೂರು ವರ್ಷದ ಮಗುವಿಗೆ ಸೋಂಕಿರುವುದು ದೃಢಪಟ್ಟಿದೆ. ಮಗು ಮತ್ತದರ ತಂದೆ-ತಾಯಿಯನ್ನು ಕಲಮಸ್ಶೇರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿಇರಿಸಲಾಗಿದೆ.

Shopping Malls, Theaters Are Shutdown In Kerala Ahead Of Novel Coronavirus

ಫೆಬ್ರವರಿ ಕೊನೆಯ ವಾರ ಕೊರೊನಾ ತವರು ವುಹಾನ್‌ನಿಂದ ಮರಳಿದ್ದ ಕೇರಳದ ಮೂವರಿಗೆ ಕೊರೊನಾ ಸೋಂಕು ಇದೆ ಎಂದು ತೀವ್ರ ನಿಗಾ ವಹಿಸಲಾಗಿತ್ತು. ನಂತರ ಅವರ ರಕ್ತಪರೀಕ್ಷೆಯಲ್ಲಿ ನೆಗಟಿವ್ ಕಂಡು ಬಂದಿದ್ದರಿಂದ ಆಸ್ಪತ್ರೆಯಿಂದ ಮಾರ್ಚ್‌ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+