ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಗೆ ಅನಿರೀಕ್ಷಿತ ಸೋಲು: ಬಿಜೆಪಿ ಸುವೇಂದು ಅಧಿಕಾರಿಗೆ ಭರ್ಜರಿ ಜಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಾದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಅನಿರೀಕ್ಷಿತ ಸೋಲನ್ನು ಅನುಭವಿಸಿದ್ದಾರೆ. ಕೇವಲ ಒಂದು ಮತದಿಂದ ಗೆದ್ದರೂ ಅದು ಗೆಲುವೇ ಎಂದು ಮಾರ್ಚ್ ತಿಂಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದ ದೀದಿಗೆ, ಈ ಫಲಿತಾಂಶವು ದೊಡ್ಡ ಆಘಾತ ನೀಡಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಪ್ರಚಾರದ ವೇಳೆ, "ಕೇವಲ ಒಂದು ಮತದ ಅಂತರದಿಂದ ಗೆದ್ದರೂ ಅದು ಗೆಲುವೇ, ಭವಾನಿಪುರದಲ್ಲಿ ನಾನು ಗೆದ್ದೇ ತೀರುತ್ತೇನೆ" ಎಂದು ಮಮತಾ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಅಂತಿಮ ಫಲಿತಾಂಶದಲ್ಲಿ ಅವರು 15,105 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಸೋಮವಾರ ನಡೆದ ಮತ ಎಣಿಕೆಯ ಆರಂಭಿಕ ಹಂತಗಳು ಮಮತಾ ಬ್ಯಾನರ್ಜಿ ಅವರಿಗೆ ಪೂರಕವಾಗಿಯೇ ಇದ್ದವು.

Mamata Banerjee

ಏಳನೇ ಸುತ್ತಿನ ಎಣಿಕೆಯ ಅಂತ್ಯದ ವೇಳೆಗೆ ಅವರು 17,000 ಮತಗಳ ಭಾರಿ ಮುನ್ನಡೆ ಸಾಧಿಸುವ ಮೂಲಕ ಸುಲಭ ಜಯದ ನಿರೀಕ್ಷೆಯಲ್ಲಿದ್ದರು. ಆದರೆ, ನಂತರದ ಸುತ್ತುಗಳಲ್ಲಿ ಪರಿಸ್ಥಿತಿ ತಲೆಕೆಳಗಾಯಿತು. 14ನೇ ಸುತ್ತಿನ ವೇಳೆಗೆ ಅವರ ಮುನ್ನಡೆಯು 4,000ಕ್ಕೆ ಇಳಿಕೆಯಾಯಿತು ಮತ್ತು ಅಂತಿಮ ಸುತ್ತುಗಳಲ್ಲಿ ಸುವೇಂದು ಅಧಿಕಾರಿ ಅವರು ಮತಗಳಿಕೆಯಲ್ಲಿ ಭಾರಿ ಜಿಗಿತ ಕಂಡು ಮಮತಾ ಅವರ ಮುನ್ನಡೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದರು.

ದೀದಿಯ ಭದ್ರಕೋಟೆ ಛಿದ್ರ

ದಕ್ಷಿಣ ಕೋಲ್ಕತ್ತಾದ ಪ್ರತಿಷ್ಠಿತ ಕ್ಷೇತ್ರವಾದ ಭವಾನಿಪುರವು 2011ರಿಂದಲೂ ಮಮತಾ ಬ್ಯಾನರ್ಜಿ ಅವರ ರಾಜಕೀಯ ಶಕ್ತಿಯ ಕೇಂದ್ರವಾಗಿತ್ತು. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸ್ಪರ್ಧಿಸಿ ಸೋತಿದ್ದನ್ನು ಹೊರತುಪಡಿಸಿದರೆ, ಈ ಕ್ಷೇತ್ರವು ಸದಾ ಮಮತಾ ಅವರ ಕೈಹಿಡಿಯುತ್ತಾ ಬಂದಿತ್ತು. ಈ ಬಾರಿಯ ಚುನಾವಣೆ ಉಭಯ ನಾಯಕರಿಗೂ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದರಿಂದ, ಇಬ್ಬರೂ ನಾಯಕರು ಮತ ಎಣಿಕೆ ಕೇಂದ್ರದಲ್ಲಿ ಖುದ್ದಾಗಿ ಹಾಜರಿದ್ದು ಎಣಿಕೆಯ ಪ್ರಕ್ರಿಯೆಯನ್ನು ಗಮನಿಸುತ್ತಿದ್ದರು.

Mamata Banerjee: ಮತ ಎಣಿಕೆ ಕೇಂದ್ರದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ
Mamata Banerjee: ಮತ ಎಣಿಕೆ ಕೇಂದ್ರದಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ

ಸುವೇಂದು ಅಧಿಕಾರಿ ಅವರ ಕೈಯಲ್ಲಿ ಮಮತಾ ಬ್ಯಾನರ್ಜಿ ಸೋಲುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2021ರಲ್ಲಿ ನಂದಿಗ್ರಾಮದಲ್ಲಿ ಕೇವಲ 2,000 ಮತಗಳ ಅಂತರದಿಂದ ಸೋತಿದ್ದ ದೀದಿ, ನಂತರ ಉಪಚುನಾವಣೆಯ ಮೂಲಕ ಭವಾನಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಈಗ ತಮ್ಮದೇ ಭದ್ರಕೋಟೆಯಲ್ಲೂ ಸುವೇಂದು ವಿರುದ್ಧ ಸೋತಿರುವುದು ತೃಣಮೂಲ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.

ಸರಣಿ ಆರೋಪ ಮಾಡಿದ ಮಮತಾ

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭವಾನಿಪುರ ಒಂದರಲ್ಲೇ ಸುಮಾರು 60,000 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ಈ ಹಿಂದೆಯೇ ದೂರಿದ್ದರು. ಸುಮಾರು 2.6 ಲಕ್ಷ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈ ಪ್ರಮಾಣದ ಹೆಸರುಗಳ ಕಡಿತವು ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂಬುದು ಅವರ ವಾದ. ಆದರೆ, ಅಧಿಕೃತವಾಗಿ ಕ್ಷೇತ್ರವಾರು ಹೆಸರು ತೆಗೆದುಹಾಕಿರುವ ಅಂಕಿಅಂಶಗಳು ಇನ್ನೂ ಸಾರ್ವಜನಿಕವಾಗಿ ಲಭ್ಯವಾಗಿಲ್ಲ.

ಮತ ಎಣಿಕೆ ಕೇಂದ್ರವಾದ 'ಸಖಾವತ್ ಮೆಮೋರಿಯಲ್ ಗರ್ಲ್ಸ್ ಹೈಸ್ಕೂಲ್'ನಲ್ಲಿ ಇಡೀ ದಿನ ಉದ್ವಿಗ್ನ ವಾತಾವರಣ ನೆಲೆಸಿತ್ತು. ಮಧ್ಯಾಹ್ನದ ವೇಳೆಗೆ ಮಮತಾ ಬ್ಯಾನರ್ಜಿ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಅಷ್ಟರಲ್ಲಿಯೇ ಸುವೇಂದು ಅಧಿಕಾರಿ ಕೇಂದ್ರದ ಒಳಗೆ ಮೊಕ್ಕಾಂ ಹೂಡಿದ್ದರು. ತೃಣಮೂಲ ಕಾಂಗ್ರೆಸ್‌ನ ಎಣಿಕೆ ಏಜೆಂಟ್ ಒಬ್ಬರನ್ನು ಹೊರಹಾಕಲಾಗಿದೆ ಎಂಬ ದೂರುಗಳ ನಡುವೆಯೇ ಎಣಿಕೆ ಪ್ರಕ್ರಿಯೆ ಮುಂದುವರಿದಿತ್ತು. ಅಂತಿಮವಾಗಿ ಸೋಲು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದಿಂದ ಹೊರಬಂದ ಮಮತಾ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

"ಇದೊಂದು ಅನೈತಿಕ ಜಯ" ಎಂದು ಕಿಡಿಕಾರಿದ ಮಮತಾ ಬ್ಯಾನರ್ಜಿ, ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿದರು. "100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಲಾಗಿದೆ. ಇದು ಕೇವಲ ಲೂಟಿ, ಲೂಟಿ ಮತ್ತು ಲೂಟಿ. ಆದರೆ ನಾವು ಖಂಡಿತವಾಗಿಯೂ ಪುಟಿದೇಳುತ್ತೇವೆ" ಎಂದು ಹೋರಾಟದ ಹಾದಿಯನ್ನು ಮುಂದುವರಿಸುವ ಮುನ್ಸೂಚನೆ ನೀಡಿದರು. ಸುವೇಂದು ಅಧಿಕಾರಿ ಅವರ ಕೈಯಲ್ಲಿ ಮಮತಾ ಸೋಲುತ್ತಿರುವುದು ಇದು ಎರಡನೇ ಬಾರಿಯಾಗಿದ್ದು, 2021ರ ನಂದಿಗ್ರಾಮ ಸೋಲಿನ ಬಳಿಕ ಈಗ ಭವಾನಿಪುರದಲ್ಲೂ ದೀದಿಗೆ ಹಿನ್ನಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+