• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬೈ-ಕೋಳಿಕ್ಕೋಡ್ ವಿಮಾನ ಅವಘಡ: ಎನ್ ಡಿಆರ್ಎಫ್ ರಕ್ಷಣಾ ಕಾರ್ಯಾಚರಣೆ

|

ಕೋಲ್ಕತ್ತಾ, ಆಗಸ್ಟ್.07: ಕೇರಳದ ಕೋಳಿಕ್ಕೋಡ್ ನಲ್ಲಿ ಏರ್ ಇಂಡಿಯಾ ವಿಮಾನ ಅವಘಡವೊಂದು ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನವು ರನ್ ವೇನಲ್ಲಿಯೇ ಸ್ಕಿಡ್ ಆಗಿದ್ದು, ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

   Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

   ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡವು ಸಂಭವಿಸಿದ್ದು, ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ದೌಡಾಯಿಸಿದೆ. ಸಮರೋಪಾದಿಯಲ್ಲಿ ಎನ್ ಡಿಆರ್ಎಫ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.

   Just In: ಏರ್ ಇಂಡಿಯಾ ವಿಮಾನ ಅವಘಡ, ಇಬ್ಬರು ಸಾವು

   ದುಬೈನಿಂದ ಕೇರಳದ ಕೋಳಿಕ್ಕೋಡ್ಗೆ ಹೊರಟಿದ್ದ ಏರ್ ಇಂಡಿಯಾದ IX1344 ವಿಮಾನವು ಶುಕ್ರವಾರ ಸಂಜೆ 7.45ರ ವೇಳೆಗೆ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

   ವಿಮಾನದಲ್ಲಿ 184 ಮಂದಿ ಇದ್ದರು:

   ಇನ್ನು, ಏರ್ ಇಂಡಿಯಾದ IX1344 ವಿಮಾನದಲ್ಲಿ ಇಬ್ಬರು ಪೈಲೆಟ್ ಆರು ಮಂದಿ ಸಿಬ್ಬಂದಿ ಸೇರಿದಂತೆ 174 ಮಂದಿ ಪ್ರಯಾಣಿಕರಿದ್ದರು. ವಿಮಾನ ಅವಘಡದಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

   English summary
   Dubai-Kozhikode Air India Flight Crash: National Disaster Response Force Are Being Rushed To Karipur Airport.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X