ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್: ನಟ ದಿಲೀಪ್ ಗೆ ಹಿನ್ನಡೆ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 19: ಕೇರಳ ಮೂಲದ ಬಹುಭಾಷಾ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಜನಪ್ರಿಯ ನಟ ದಿಲೀಪ್ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ನಟ ದಿಲೀಪ್ ಕಾಲಿಟ್ಟ ಕೂಡಲೆ ತಿರುಗಿ ಬಿದ್ದ ನಟಿಮಣಿಯರುನಟ ದಿಲೀಪ್ ಕಾಲಿಟ್ಟ ಕೂಡಲೆ ತಿರುಗಿ ಬಿದ್ದ ನಟಿಮಣಿಯರು

ಕಳೆದ ಜೂನ್ ತಿಂಗಳಿನಲ್ಲೇ ಈ ಕುರಿತಂತೆ ಹೈಕೋರ್ಟಿನಲ್ಲಿ ದಿಲೀಪ್ ಅವರು ಅರ್ಜಿ ಹಾಕಿದ್ದರು. ಕೇರಳ ಪೊಲೀಸ್ ವಿಶೇಷ ತನಿಖಾ ತಂಡ ನಡೆಸಿರುವ ತನಿಖೆ ಬಗ್ಗೆ ಅಪಸ್ವರ ಎತ್ತಿರುವ ದಿಲೀಪ್, ನಿಷ್ಪಕ್ಷಪಾತ ತನಿಖೆಗೆ ಮನವಿ ಸಲ್ಲಿಸಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು.

ನಟಿ ಮೇಲಿನ ದೌರ್ಜನ್ಯ: ದಿಲೀಪ್ ವಿರುದ್ಧ ಚಾರ್ಜ್ ಶೀಟ್ನಟಿ ಮೇಲಿನ ದೌರ್ಜನ್ಯ: ದಿಲೀಪ್ ವಿರುದ್ಧ ಚಾರ್ಜ್ ಶೀಟ್

ಸುಮಾರು 1452 ಪುಟಗಳ ದೋಷರೋಪಣ ಪಟ್ಟಿಯಲ್ಲಿ 345 ಸಾಕ್ಷಿಗಳು, 164 ಹೇಳಿಕೆಗಳನ್ನು ದಾಖಲಿಸಲಾಗಿದೆ. ಒಟ್ಟು 12 ಮಂದಿ ಆರೋಪಿಗಳಿದ್ದು, ದಿಲೀಪ್ ಅವರು 8ನೇ ಆರೋಪಿಯಾಗಿದ್ದು, ದಿಲೀಪ್ ಅವರ ಮಾಜಿ ಪತ್ನಿ, ನಟಿ ಮಂಜು ವಾರಿಯರ್ ಅವರು ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ.

Actress abduction case: Kerala HC rejects Dileeps plea seeking CBI probe

ಫೆಬ್ರವರಿ 17ರಂದು ಎರ್ನಾಕುಲಂ ನಿಂದ ತ್ರಿಶೂರ್ ಮಾರ್ಗದಲ್ಲಿ ನಟಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ಕೇರಳ ಪೊಲೀಸರು, ಮಲೆಯಾಳಂ ನಟ ದಿಲೀಪ್ ನನ್ನು ಬಂಧಿಸಿ, ಆಳುವ ಉಪ ಕಾರಾಗೃಹದಲ್ಲಿರಿಸಲಾಗಿದೆ. ದಿಲೀಪ್ ಅವರ ಜಾಮೀನು ಅರ್ಜಿಯು ಅನೇಕ ಬಾರಿಗೆ ತಿರಸ್ಕೃತಗೊಂಡಿದೆ.

ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಟ ದಿಲೀಪ್ ಗೆ ಜೈಲೇ ಗತಿ ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಟ ದಿಲೀಪ್ ಗೆ ಜೈಲೇ ಗತಿ

ನಟಿ ಅಪಹರಣ, ಲೈಂಗಿಕ ಕಿರುಕುಳದ ಸಂಚು ರೂಪಿಸಿದ್ದು, ಪಲ್ಸರ್ ಸುನಿ ಎಂಬಾತನನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಿದ ಆರೋಪ ನಟ ದಿಲೀಪ್ ಮೇಲಿದೆ. ಒಮ್ಮೆ ಮಾತ್ರ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜೈಲಿನಿಂದ ದಿಲೀಪ್ ಹೊರಕ್ಕೆ ಬಂದಿದ್ದರು. ಸದ್ಯ ಷರತ್ತುಬದ್ಧ ಜಾಮೀನು ಪಡೆದಿರುವ ದಿಲೀಪ್ ಅವರು ದುಬೈಗೆ ತೆರಳಲು ಅನುಮತಿ ನೀಡಲಾಗಿತ್ತ. ದುಬೈನಲ್ಲಿ ತಮ್ಮ ಹೋಟೆಲ್ 'ದೆ ಪುಟ್ಟು' ಹೊಸ ಬ್ರ್ಯಾಂಚ್ ಆರಂಭಿಸಲು 6 ದಿನಗಳ ಮಟ್ಟಿಗೆ ದಿಲೀಪ್ ಗೆ ಅಂಗಮಲೆ ಜೆಎಫ್ ಸಿಎಂ ಕೋರ್ಟ್ ಅನುಮತಿ ನೀಡಿತ್ತು.

English summary
The Kerala High Court on Wednesday rejected actor Dileep's plea seeking CBI enquiry in Malayalam actress molestation case. The actor moved the Kerala High Court in June , seeking a CBI investigation into the case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X