• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಚ್ಚಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಬಂಧನ

|

ತಿರುವನಂತಪುರಂ, ನವೆಂಬರ್ 27: ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ತೆರಳಲು ಯತ್ನಿಸಿ ವಿಫಲರಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಂಗಳವಾರ(ನವೆಂಬರ್ 27) ದಂದು ಪಥನಂಥಿಟ್ಟ ಪೊಲೀಸರು ರೆಹನಾ ಅವರನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಅಯ್ಯಪ್ಪ ದೇಗುಲ ಭಕ್ತರ ಬಗ್ಗೆ ಕೆಟ್ಟದಾಗಿ ಬರೆದಿರುವ ಆರೋಪ ಹೊತ್ತುಕೊಂಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೊಚ್ಚಿಯಲ್ಲಿ ಬಂಧಿಸಲಾಗಿದ್ದು, ಪಥನಂಥಿಟ್ಟ ನಗರ ಠಾಣೆ ಪೊಲೀಸರು, ಆರೋಪಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ

ಬಿಎಸ್ಎನ್ಎಲ್ ಸಿಬ್ಬಂದಿಯಾಗಿರುವ ರೆಹನಾ ಅವರನ್ನು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂಧಿಸಲಾಗಿದೆ.

ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ

ಬಿಎಸ್ಎನ್ಎಲ್ ಸಿಬ್ಬಂದಿಯಾಗಿರುವ ರೆಹನಾ ಅವರನ್ನು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದ ರೆಹನಾ ಅವರಿಗೆ ಹಿನ್ನಡೆಯುಂಟಾಗಿದ್ದು, ನವೆಂಬರ್ 16ರಂದು ಅವರ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.

ಕೇರಳದಲ್ಲಿ ಕರ್ನಾಟಕದ ಖಡಕ್ ಐಪಿಎಸ್ ಯತೀಶ್ ಮತ್ತೆ ಟ್ರೆಂಡಿಂಗ್

ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಅರ್ಹರಾಗಿದ್ದಾರೆ. ಹೀಗಾಗಿ, ಅಯ್ಯಪ್ಪ ದೇಗುಲ ಪ್ರವೇಶಿಸಲು ವಿಫಲ ಯತ್ನ ನಡೆಸಿದರು. ಪೊಲೀಸ್ ಪಡೆ ಭದ್ರತೆಯೊಂದಿಗೆ ಬಂದರೂ ದೇಗುಲಕ್ಕೂ 500 ಮೀಟರ್ ದೂರದಲ್ಲಿ ಅವರನ್ನು ತಡೆದು ವಾಪಸ್ ಕಳಿಸಲಾಗಿತ್ತು.

ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ

ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ

ಕಿಸ್‌ ಆಫ್‌ ಲವ್‌ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಹಾಗೂ ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಸ್ಲಿಂ ಜಮಾತ್ ಮುಂದಾಗಿದೆ.

ತಮ್ಮ ಸಂಪ್ರದಾಯಕ್ಕೆ ವಿರುದ್ದವಾಗಿರುವುದರಿಂದ ಮತ್ತು ತನ್ನ ತಂದೆಯ ಸಾವಿನ ನಂತರ ಕುಟುಂಬದಿಂದ ದೂರವಿರುವ ಫಾತಿಮಾ, ಪುರುಷ ಪ್ರಧಾನ ಸಮಾಜ, ಧಾರ್ಮಿಕ ನಂಬಿಕೆಯ ವಿರುದ್ದವೇ ತಮ್ಮ ಧ್ವನಿ ಎತ್ತಿದ್ದವರು

ರೆಹಾನಾ ಫಾತಿಮಾ ಅವರನ್ನು ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್‌ನಿಂದ ಉಚ್ಚಾಟನೆ ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕೂಡ ಮಹಲ್ಲಾದ ಸದಸ್ಯತ್ವದಿಂದ ಹೊರಹಾಕಲಾಗಿದೆ. ರೆಹನಾ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪರಿಷತ್‌ ಅಧ್ಯಕ್ಷ ಎ. ಪೂಕುಂಜು ತಿಳಿಸಿದ್ದಾರೆ.

ಅಯ್ಯಪ್ಪ ಭಕ್ತರ ಪ್ರತಿರೋಧಕ್ಕೆ ಬೆಚ್ಚಿದ ರೆಹನಾ

ಅಯ್ಯಪ್ಪ ಭಕ್ತರ ಪ್ರತಿರೋಧಕ್ಕೆ ಬೆಚ್ಚಿದ ರೆಹನಾ

ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಕೋಶಿ ಜಕ್ಕಲ್, ಮಹಿಳಾ ಹೋರಾಟಗಾರರಾದ ಕೇರಳದ ಫಾತಿಮಾ ರೆಹಾನ ಸುಲೇಮಾನ್ ಮತ್ತು ಮೇರಿ ಸ್ವೀಟಿ, ಈ ಮೂವರು ದೇವಾಲಯವನ್ನು ಪ್ರವೇಶಿಸಲು ಹೊರಟಿದ್ದರು. ಇನ್ನೇನು ಇವರು ಆವರಣಕ್ಕೆ ಎಂಟ್ರಿಯಾದರು ಎನ್ನುವಷ್ಟರಲ್ಲಿ ಅಯ್ಯಪ್ಪ ಭಕ್ತರ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ, ಬೆಟ್ಟದಿಂದ ಕೆಳಗಿಳಿದರು.

ಮಹಿಳಾ ಸಮಾನತೆ ಒಪ್ಪಿಕೊಳ್ಳಬೇಕಾದ ವಿಚಾರವಾದರೂ, ಈ ಮೂವರು ನಿಜವಾದ ಅಯ್ಯಪ್ಪ ಭಕ್ತರೋ ಅಥವಾ ಶಬರಿಮಲೆ ದೇವಾಲಯದ ಸಂಪ್ರದಾಯವನ್ನು ಅಣಕವಾಡಲು ಹೊರಟಿದ್ದಾರೋ ಎಂಬ ಚರ್ಚೆ ನಡೆದಿತ್ತು.

'ಏಕಾ' ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ

'ಏಕಾ' ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ

ಪಂಪಾದಿಂದ ಹೆಲ್ಮೆಟ್ ಹಾಕಿಕೊಂಡು, ಸಮವಸ್ತ್ರದಲ್ಲಿ ತೆರಳಿದ್ದ ಫಾತಿಮಾ, ಕೇಂದ್ರ ಸರಕಾರದ ಸ್ವಾಮ್ಯದ ಬಿಎಸ್ಎನ್ಎಲ್ (BSNL) ನಲ್ಲಿ ಟೆಲಿಕಾಂ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಕೊಚ್ಚಿನ್ ಮೂಲದ ಈಕೆ, ಇಂಟರ್ ಸೆಕ್ಸ್ ಕಥೆಯಾದಾರಿತ 'ಏಕಾ' ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. 31ವರ್ಷದ ಫಾತಿಮಾಗೆ ಇಬ್ಬರು ಮಕ್ಕಳು. ಎಲ್ಲಕ್ಕಿಂತ ಹೆಚ್ಚು ಗಮನಿಸಬೇಕಾಗಿರುವುದು, ಫಾತಿಮಾ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು/ಬೆಳೆದವರು.

ಅಯ್ಯಪ್ಪ ಮಾಲೆಧಾರಿಯಂತೆ ವೇಷ

ಅಯ್ಯಪ್ಪ ಮಾಲೆಧಾರಿಯಂತೆ ವೇಷ

2014ರಲ್ಲಿ ಕಿಸ್ ಆಫ್ ಲವ್ ಆಂದೋಲನದಲ್ಲಿ ಫಾತಿಮಾ ತಮ್ಮನ್ನು ತೊಡಗಿಸಿಕೊಂಡವರು. ನೈತಿಕ ಪೊಲೀಸ್ ಗಿರಿ ವಿರುದ್ದ ಚಿತ್ರ ನಿರ್ಮಾಪಕ ಮನೋಜ್ ಶ್ರೀಧರ್ ಆರಂಭಿಸಿದ್ದ ಕ್ಯಾಂಪೇನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಫಾತಿಮಾ, ಓಣಂ ಹುಲಿವೇಷದಲ್ಲೂ ಭಾಗವಹಿಸಿದ್ದರು. ಪುರುಷರಿಗೆ ಮಾತ್ರ ಪ್ರಾತಿನಿಧ್ಯವಿರುವ ವಿಚಾರದಲ್ಲಿ, ಮಹಿಳೆಯರೂ ಮೇಲ್ಪಂಕ್ತಿಗೆ ಬರಬೇಕು ಎನ್ನುವುದು ನನ್ನ ಉದ್ದೇಶ ಎನ್ನುವುದು ಫಾತಿಮಾ ನಿಲುವು. ಈ ಚಿತ್ರದಲ್ಲಿ ಅಯ್ಯಪ್ಪ ಮಾಲೆಧಾರಿಯಂತೆ ವೇಷಧರಿಸಿರುವುದು ಅವರ ಬಂಧನಕ್ಕೆ ಕಾರಣವಾಗಿದೆ.

ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

ಕೇರಳ ಪೊಲೀಸರಿಂದ ರೆಹಾನಾ ವಿಚಾರಣೆ

ಕೇರಳ ಪೊಲೀಸರಿಂದ ರೆಹಾನಾ ವಿಚಾರಣೆ

ಅಕ್ಟೋಬರ್ 22ರಂದು ಪಥನಂಥಿಟ್ಟ ಪೊಲೀಸರು, ರೆಹನಾ ವಿರುದ್ಧ ದೂರು ದಾಖಲಿಸಿಕೊಂಡಿದ್ದರು. ರೆಹನಾ ಅವರು ಫೇಸ್ ಬುಕ್ ನಲ್ಲಿ ಬಳಸಿದ ಭಾಷೆ, ಚಿತ್ರಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಅಯ್ಯಪ್ಪ ಮಾಲೆಧಾರಿಯಂತೆ ವಸ್ತ್ರ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡು ತತ್ವಮಸಿ ಎಂದು ಅಡಿಬರಹ ಬರೆದುಕೊಂಡಿದ್ದರು. ರೆಹನಾ ಅವರು ಪೋಸ್ಟ್ ಗಳ ವಿರುದ್ಧ ಶಬರಿಮಲೆ ಸಂರಕ್ಷಣಾ ಸಮಿತಿ ದೂರು ನೀಡಿತ್ತು. ಐಪಿಎಸ್ ಸೆಕ್ಷನ್ 295 ಎ ಅನ್ವಯ ಪ್ರಕರಣ ದಾಖಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Activist Rehana Fathima arrested by Pathanamthitta police at Kochi for hurting sentiments of Ayyappa devotees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more