ಶಬರಿಮಲೆ ದೇವಳದ ಆದಾಯದಲ್ಲಿ 60 ಕೋಟಿ ಇಳಿಕೆ, ಇದು ಬರೀ 39 ದಿನದ ಲೆಕ್ಕ

ತಿರುವನಂತಪುರಂ, ಡಿಸೆಂಬರ್ 27: ಸದ್ಯಕ್ಕೆ ಶಬರಿಮಲೆಯಲ್ಲಿ ವಾರ್ಷಿಕ ಯಾತ್ರೆ ನಡೆಯುತ್ತಿದೆ. ಆದರೆ ಸರಾಸರಿ ಆದಾಯದ ಲೆಕ್ಕದಲ್ಲಿ ಹೇಳಬೇಕು ಅಂದರೆ 39 ದಿನಗಳಲ್ಲಿ 60 ಕೋಟಿ ಆದಾಯ ಇಳಿಕೆ ಆಗಿದ್ದು, 105 ಕೋಟಿ ರುಪಾಯಿ ತಲುಪಿದೆ. ಈ ಬಗ್ಗೆ ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ಮಾಹಿತಿ ನೀಡಿದ್ದಾರೆ.

ಇದೇ ಅವಧಿಯಲ್ಲಿ ಕಳೆದ ಬಾರಿ ಅರವಣ ಪ್ರಸಾದದ ಮಾರಾಟದಿಂದ 70.68 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಆ ಮೊತ್ತ 40.99 ಕೋಟಿಗೆ ಕುಸಿದಿದೆ. ಇನ್ನು ಹುಂಡಿಗೆ ಬಂದ ಹಣದ ಮೊತ್ತದ ವಿಚಾರಕ್ಕೆ ಬಂದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 59.69 ಕೋಟಿ ಸಂಗ್ರಹವಾಗಿದ್ದರೆ, ಈ ಬಾರಿ 42.33 ಕೋಟಿಯಷ್ಟೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

60 crore fall in Sabarimala temple revenue

ಅಪ್ಪಮ್ ಪ್ರಸಾದದ ಮಾರಾಟದ ಮೊತ್ತವು ಕಳೆದ ಅವಧಿಯಲ್ಲಿ 12.19 ಕೋಟಿ ರುಪಾಯಿ ಆಗಿತ್ತು. ಈ ಸಲ 3.88 ಕೋಟಿ ರುಪಾಯಿ ಮಾತ್ರ ಆಗಿದೆ. ಸದ್ಯಕ್ಕೆ ನಡೆಯುತ್ತಿರುವ ಆರಾಧನೆಯ ಈ 59 ದಿನಗಳಲ್ಲಿ 30 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಆದರೆ ಇದೇ ಅವಧಿಯಲ್ಲಿ ಕಳೆದ ಬಾರಿ 68 ಲಕ್ಷ ಭಕ್ತರು ಭೇಟಿ ನೀಡಿದ್ದರು ಎಂದು ಪದ್ಮಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+