Tarikere Elections: ತರೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ
ಚಿಕ್ಕಮಗಳೂರು, ಮಾರ್ಚ್. 26: ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ತರೀಕೆರೆ, ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲ್ಲೂಕು. ಮಲೆನಾಡು ಪ್ರದೇಶವು ಇಲ್ಲಿಂದ ಪ್ರಾರಂಭವಾಗುವುದರಿಂದ ಇದನ್ನು ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ. ರಾಜಕೀಯವಾಗಿಯೂ ತರೀಕೆರೆ ಹೆಚ್ಚು ಕುತೂಹಲ ಹುಟ್ಟಿಸುವ ಕ್ಷೇತ್ರವಾಗಿದೆ.
ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಕಳೆದ ಮೂರು ಚುನಾವಣೆಗಳಿಂದಲೂ ಒಮ್ಮೆ ಕಾಂಗ್ರೆಸ್ ಗೆದ್ದರೇ ಇನ್ನೊಮ್ಮೆ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಹಾಲಿ ಶಾಸಕ ಡಿ ಎಸ್ ಸುರೇಶ್ ಮತ್ತು ಮಾಜಿ ಶಾಸಕ ಜಿ ಎಚ್ ಶ್ರೀನಿವಾಸ ನಡುವೆ ಈ ಬಾರಿಯೂ ಸ್ವರ್ಧೆ ನಡೆಯುವ ಸಾಧ್ಯತೆಯಿದೆ.

*ತರೀಕೆರೆ ಇತಿಹಾಸ*
ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲೂಕು ಕೇಂದ್ರವಾಗಿದೆ. ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು, ಬಾಳೆ, ನೆಲಗಡಲೆ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯಲಾಗುತ್ತದೆ. ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.
ಚಿಕ್ಕಮಗಳೂರು ಜಿಲ್ಲಾ ಕೆಂದ್ರವಾದರು. ಶಿವಮೊಗ್ಗ ಮತ್ತು ಭದ್ರಾವತಿ ಪಟ್ಟಣಗಳು ತುಂಬ ಹತ್ತಿರಇವೆ. ತರೀಕೆರೆ ಬೆಂಗಳೂರಿನಿಂದ ಸುಮಾರು 235 ಕಿ.ಮಿ.ದೂರದಲ್ಲಿದೆ. ಇಲ್ಲಿಗೆ ಬೆಂಗಳೂರು ಮತ್ತು ಮೈಸೂರಿನಿಂದಲೂ ರೈಲಿನ ಸಂಪರ್ಕ ಇದೆ. ಈ ಊರಿಗೆ ಅಂಟಿಕೊಂಡಂತೆ ಬೆಮಲ್ ಸಂಸ್ಥೆಗೆ ಸೇರಿದ ಒಂದು ಕೈಗಾರಿಕಾ ಘಟಕವಿದೆ. ಇಲ್ಲಿನ ಪ್ರಮುಖವಾದ ಆಕರ್ಷಣೆಯೆಂದರೆ, ಹತ್ತಿರವಿರುವ ಕೆಮ್ಮಣ್ಣುಗುಂಡಿ ಗಿರಿಧಾಮ. ಈ ಗಿರಿಧಾಮಕ್ಕೆ ಹತ್ತಿರದಲ್ಲೆ ಆಕರ್ಷಕವಾದ ಕಲ್ಲತ್ತಗಿರಿ ಜಲಪಾತವಿದೆ.
ಇದಲ್ಲದೆ ತರೀಕೆರೆಗೆ ಸಮೀಪವಿರುವ ಅಮೃತಾಪುರದಲ್ಲಿ ಹೊಯ್ಸಳರ 2 ನೇ ವೀರಬಲ್ಲಾಳ ದೊರೆಯ ಸೇನಾ ದಂಡನಾಯಕರಾದ ಅಮೃತ ದಂಡನಾಯಕರಿಂದ ನಿರ್ಮಿಸಿದ ಶಿಲ್ಪಕಲೆಯ ವೈಭವಕ್ಕೆ ಪ್ರತೀಕವಾದ ಅಮೃತೇಶ್ವರ ದೇವಲಯವಿದೆ. ಇಲ್ಲಿಗೆ ಸಮೀಪವಿರುವ ಲಕ್ಕವಳ್ಳಿಯಲ್ಲಿ ಭದ್ರಾ ಅಣೆಕಟ್ಟು ಒಂದು ಪ್ರವಾಸಿ ತಾಣವಾಗಿದೆ. ತರೀಕೆರೆ ತಾಲೂಕಿನಲ್ಲಿ ಅಮೃತಾಪುರ, ಲಕ್ಕವಳ್ಳಿ, ಲಿಂಗದಹಳ್ಳಿ, ಕಸಬಾ ಹೋಬಳಿಗಳಿವೆ.

*ತರೀಕೆರೆ ರಾಜಕೀಯ*
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ರಾಜಕೀಯ ಹಲವರಿಗೆ ಕುತೂಹಲ ಹುಟ್ಟಿಸುವಂತಹದ್ದು. 1957 ಮತ್ತು 1962 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟಿ.ಆರ್. ಪರಮೇಶ್ವರಯ್ಯ ಆಯ್ಕೆಯಾದರು. 1967 ಮತ್ತು 1972 ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಎಚ್ ಶಿವಣ್ಣ ಎರಡು ಬಾರಿಗೆ ಆಯ್ಕೆಯಾದರು. 1978ರಲ್ಲಿ ಕಾಂಗ್ರೆಸ್‌ನ ಎಚ್.ಎಂ.ಮಲ್ಲಿಕಾರ್ಜುನಪ್ಪ, 1983ರಲ್ಲಿ ಮತ್ತೆ ಕಾಂಗ್ರೆಸ್‌ನ ಎಚ್.ಆರ್.ರಾಜು, 1985ರಲ್ಲಿ ಜನತಾ ಪಕ್ಷದ ಬಿ.ಆರ್.ನೀಲಕಂಠಪ್ಪ ಆಯ್ಕೆಯಾಗಿದ್ದರು.
1989ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಚ್.ಆರ್.ರಾಜು,1 994 ರಲ್ಲಿ ಪಕ್ಷೇತರ ಅಬ್ಯರ್ಥಿ ಎಸ್.ಎಂ.ನಾಗರಾಜು, 1999ರಲ್ಲಿ ಕಾಂಗ್ರೆಸ್‌ನ ಬಿ.ಆರ್. ನೀಲಕಂಠಪ್ಪ, 2004 ರಲ್ಲಿ ಟಿ.ಎಚ್.ಶಿವಶಂಕರಪ್ಪ, 2008 ರಲ್ಲಿ ಭಾರತೀಯ ಜನತಾ ಪಾರ್ಟಿಯ ಡಿ.ಎಸ್. ಸುರೇಶ್, 2013ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜಿ.ಎಚ್. ಶ್ರೀನಿವಾಸ ಮತ್ತು 2018ರಲ್ಲಿ ಭಾರತೀಯ ಜನತಾ ಪಾರ್ಟಿಯ ಡಿ.ಎಸ್. ಸುರೇಶ್ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ.
Tarikere Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಡಿ ಎಸ್ ಸುರೇಶ್ | 44940 | ಜಿ ಎಚ್ ಶ್ರೀನಿವಾಸ | 33253 |
| 2013 | ಜಿ ಎಚ್ ಶ್ರೀನಿವಾಸ | 35817 | ಡಿ ಎಸ್ ಸುರೇಶ್ | 34918 |
| 2008 | ಸುರೇಶ್ ಡಿ ಎಸ್ | 52167 | ಟಿ ವಿ ಶಿವಶಂಕರಪ್ಪ | 33748 |
ಈ ಬಾರಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ಎರಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ತರೀಕೆರೆಗೆ ಇನ್ನು ಅಭ್ಯರ್ಥಿ ಹೆಸರನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ನಿಂದ 12 ಜನರು ಟಿಕೆಟ್‌ಗಾಗಿ ಅರ್ಜಿ ಸಲ್ಲಿದ್ದಾರೆ. ಇದರಲ್ಲಿ ಮಾಜಿ ಶಾಸಕ ಜಿ.ಎಚ್ ಶ್ರೀನಿವಾಸ್, ಟಿ.ಎಚ್.ಶಿವಶಂಕರಪ್ಪ, ಗೋಪಿಕುಮಾರ್, ಎಚ್.ಎಂ ಗೋಪಿಕೃಷ್ಣ, ಧ್ರುವಕುಮಾರ್, ಅಜ್ಜಂಪುರ ಕೃಷ್ಣ ಮೂರ್ತಿ, ದೋರನಾಳು ಪರಮೇಶ್, ಟಿ.ಜೆ.ಶಶಾಂಕ್, ಗೊಲ್ಲರಹಳ್ಳಿ ಬಸಣ್ಣ, ಬೈಟು ರಮೇಶ್, ತಾಳಿಕಟ್ಟೆ ಲೊಕೇಶ್, ಟಿ.ಎಲ್.ಪ್ರಕಾಶ್ ಅರ್ಜಿ ಸಲ್ಲಿದ್ದಾರೆ.

ಬಿಜೆಪಿಯಲ್ಲಿ ಈ ಬಾರಿಯೂ ಹಾಲಿ ಶಾಸಕ ಡಿ.ಎಸ್. ಸುರೇಶ್ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಹೀಗಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಸ್ಪರ್ಧೆ ತೀವ್ರಗೊಳ್ಳಲಿದೆ. ಕಳೆದ ಮೂರು ಬಾರಿಯಿಂದ ಇಬ್ಬರು ಮುಖಾಮುಖಿಯಾಗುತ್ತಿದ್ದು ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳಾಗುವ ನಿರೀಕ್ಷೆಯಿದೆ.
*ಮತದಾರರು*
ತರೀಕೆರೆ ವಿಧಾನಸಭಾ ಕ್ಷೇತ್ರವು ಸಾಮಾನ್ಯ ವರ್ಗದ ವಿಧಾನಸಭಾ ಸ್ಥಾನವಾಗಿದೆ. ಉಡುಪಿ- ಚಿಕ್ಕಮಗಳೂರು ಸಂಸತ್ತಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತದಾರರು ಸರಿಸುಮಾರು 44,208 ಆಗಿದ್ದು, ಪರಿಶಿಷ್ಟ ಪಂಗಡದ ಮತದಾರರು ಸರಿಸುಮಾರು 6,756 ಜನರಿದ್ದಾರೆ. ಮುಸ್ಲಿಂ ಮತದಾರರು ಸರಿಸುಮಾರು 16,707 ಆಗಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು 9.1% ಆಗಿದೆ.
ತರೀಕೆರೆ ವಿಧಾನಸಭೆಯಲ್ಲಿ ಗ್ರಾಮೀಣ ಮತದಾರರು ಸರಿಸುಮಾರು 1,54,307 ಇದ್ದು, ನಗರ ಮತದಾರರು ಸರಿಸುಮಾರು 29,301 ಮಂದಿ ಇದ್ದಾರೆ. 2019 ರ ಸಂಸತ್ ಚುನಾವಣೆಯಂತೆ ತರೀಕೆರೆ ವಿಧಾನಸಭೆಯ ಒಟ್ಟು ಮತದಾರರ ಸಂಖ್ಯೆ 1,83,589.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications