ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ನಡೆಯುವ ಕೋವಿಡ್ 19 ಪರೀಕ್ಷೆಗಳು ವಿಶ್ವಾಸಾರ್ಹವಲ್ಲ: ಆಸ್ಟ್ರೇಲಿಯಾ

|
Google Oneindia Kannada News

ಪರ್ತ್, ಏಪ್ರಿಲ್ 27: ಭಾರತದಲ್ಲಿ ನಡೆಯುತ್ತಿರುವ ಕೋವಿಡ್ 19 ಪರೀಕ್ಷೆಗಳು ವಿಶ್ವಾರ್ಹವಲ್ಲ ಎಂದು ಆಸ್ಟ್ರೇಲಿಯಾ ಗಂಭೀರ ಆರೋಪ ಮಾಡಿದೆ.

ಭಾರತದಿಂದ ವಾಸಾಗುತ್ತಿರುವ ಹೆಚ್ಚಿನವರು ಕೊರೊನಾ ಸೋಂಕು ಹೊಂದಿದ್ದಾರೆ ಎಂದು ಪಶ್ಚಿಮ ಆಸ್ಟ್ರೇಲಿಯಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಆಸ್ಟ್ರೇಲಿಯಾ ಪತ್ರಿಕೆಯದ್ದು 'ದುರುದ್ದೇಶಪೂರಿತ' ವರದಿ ಎಂದ ಭಾರತಆಸ್ಟ್ರೇಲಿಯಾ ಪತ್ರಿಕೆಯದ್ದು 'ದುರುದ್ದೇಶಪೂರಿತ' ವರದಿ ಎಂದ ಭಾರತ

ಭಾರತದಿಂದ ಇತ್ತೀಚೆಗೆ ವಾಪಸಾದ 78-79 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಬೆಳಗ್ಗೆಯ ತುರ್ತು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತದಿಂದ ವಾಪಸಾಗಿ ಪರ್ತ್‌ನ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

 Western Australia Premier Says India’s Covid-19 Assessments Inaccurate

ಭಾರತದಿಂದ ಸಿಡ್ನಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಪ್ರಯಾಣಕ್ಕೂ ಮೊದಲು ದೆಹಲಿಯಲ್ಲಿ ಅವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿತ್ತು.

ಭಾರತದಲ್ಲಿನ ಕೋವಿಡ್ ಬಿಕ್ಕಟ್ಟಿನ ಕುರಿತು ಆಸ್ಟ್ರೇಲಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ಭಾರತ ಖಂಡಿಸಿದೆ. ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಂತಹ ಸಂದರ್ಭದಲ್ಲಿ ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ದೇಶ ಈ ಪರಿಸ್ಥಿತಿಗೆ ಬಂದಿದೆ, ಇನ್ನೂ ಸೋಂಕಿನ ಗಂಭೀರತೆ ಅರ್ಥಮಾಡಿಕೊಂಡಿಲ್ಲ ಎಂದು ಪತ್ರಿಕೆಯಲ್ಲಿ ಬರೆಯಲಾಗಿತ್ತು.

ಇದೀಗ ಭಾರತೀಯ ಹೈಕಮಿಷನ್ ಇದನ್ನು ದುರುದ್ದೇಶಪೂರಿತ , ಆಧಾರರಹಿತ ವರದಿ ಎಂದು ಕರೆದಿದೆ, ಆಸ್ಟ್ರೇಲಿಯಾದ ಪತ್ರಿಕೆಗಳು ಸುಳ್ಳು ಸುದ್ದಿ ಹರಡುತ್ತಿವೆ ಎಂದು ಹೇಳಿದೆ. ಅಂತಹ ಆಧಾರ ರಹಿತ ಲೇಖವನ್ನು ಪ್ರಕಟಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ.

ದಿ ಆಸ್ಟ್ರಿಯನ್‌ನಲ್ಲಿ ಏಪ್ರಿಲ್ 25ರಂದು ವರದಿ ಪ್ರಕಟವಾಗಿತ್ತು. ಪ್ರಧಾನಿ ಮೋದಿಯವರು ಲಾಕ್‌ಡೌನ್ ತೆಗೆದುಹಾಕಿ ಭಾರತವನ್ನು ಸರ್ವನಾಶದತ್ತ ದೂಡುತ್ತಿದ್ದಾರೆ.

ಒಂದೆಡೆ ಭಾರತದಲ್ಲಿ ಎರಡನೇ ಅಲೆ ಎದ್ದಿದ್ದು, ಇದರ ನಡುವೆಯೇ ಚುನಾವಣಾ ಮೆರವಣಿಗೆ, ಕುಂಭಮೇಳವನ್ನು ನಡೆಸಿ ಮತ್ತಷ್ಟು ಸೋಂಕನ್ನು ಹೆಚ್ಚಿಸಲು ಕಾರಣವಾಗಿದೆ. ತಜ್ಞರ ಸಲಹೆ ಧಿಕ್ಕಿರಿಸಿದ ಕಾರಣ ಹೇಗೆ ಪರಿಸ್ಥಿತಿ ಕೈಮೀರಿ ಹೋಯಿತು ನೋಡಿ ಎಂದು ಬರೆಯಲಾಗಿದೆ.

English summary
Premier of the Western Australia state Mark McGowan on Tuesday alleged that COVID-19 assessments performed in India for returning travellers have been both inaccurate or unreliable that are impinging on the integrity of the system and inflicting some points right here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X